Hubballi: ಹೈಟೆಕ್ ಆಸ್ಪತ್ರೆಯ ಸ್ಲೋ ಟೆಕ್ ಕಾಮಗಾರಿ, 16 ತಿಂಗಳಲ್ಲಿ ಮುಗಿಸಬೇಕಿದ್ದ ಕೆಲಸ 4 ವರ್ಷ ಕಳೆದ್ರೂ ಮುಗಿದಿಲ್ಲ

 ಹಳೇ ಹುಬ್ಬಳ್ಳಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಈ 14 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 100 ಹಾಸಿಗೆಗಳ ಹೆರಿಗೆ ಮತ್ತು ಜನರಲ್ ಆಸ್ಪತ್ರೆ ಕಾಮಗಾರಿ ಕುಂಟುತ್ತಾ ಸಾಗಿದೆ. 16 ತಿಂಗಳಲ್ಲಿ ಮಗಿಯಬೇಕಿದ್ದ ಕಾಮಗಾರಿ 4 ವರ್ಷವಾದರೂ ಮುಗಿಯುತ್ತಿಲ್ಲ.

Hubballi hi-tech hospital work has not been completed past four year gow

ವರದಿ: ಗುರುರಾಜ ಹೂಗಾರ ಏಷ್ಯಾನೆಟ್ ಸುವರ್ಣ ನ್ಯೂಸ್

ಹುಬ್ಬಳ್ಳಿ (ಡಿ.19): ನಿಗದಿತ ಕಾಲ ಮಿತಿಯಲ್ಲಿ ಸಿದ್ದವಾಗಿದ್ದರೆ‌ ಇದೊಂದು ಹೈಟೆಕ್ ಆಸ್ಪತ್ರೆಯಾಗಿ ತಲೆ ಎತ್ತ ಬೇಕಿತ್ತು. ಅಷ್ಟೇ ಅಲ್ಲದೇ ಆಸ್ಪತ್ರೆಯ ಬರುವ ನೂರಾರು  ಬಡ ಹೆಣ್ಣು ಮಕ್ಕಳಿಗೆ ಸುರಕ್ಷಿತ ಹೆರಿಗೆ ಚಿಕಿತ್ಸೆಗೆ ನೆರವಾಗಬೇಕಿತ್ತು. ಆದ್ರೇ ಆಗಿದ್ದು ಮಾತ್ರ ಬೇರೆಯೇ.  ಕೋಟಿ ಕೋಟಿ ಹಣ ಖರ್ಚಾದ್ರು ಆಸ್ಪತ್ರೆಯ ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ರಿಲ್ಲ. 16 ತಿಂಗಳಲ್ಲಿ ಮಗಿಯಬೇಕಿದ್ದ ಕಾಮಗಾರಿ 4 ವರ್ಷವಾದರೂ ಮುಗಿಯುತ್ತಿಲ್ಲ. ಕೋವಿಡ್ ಹಾಗೂ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಲ್ಲಿ ವಿಳಂಬ ನೀತಿ ತೋರಿದ ಪರಿಣಾಮ 16 ತಿಂಗಳಲ್ಲಿ ಮುಗಿಯಬೇಕಿದ್ದ ಆಸ್ಪತ್ರೆಯ ಕಟ್ಟಡ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು, ಗರ್ಭಿಣಿಯರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಈ 14 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 100 ಹಾಸಿಗೆಗಳ ಹೆರಿಗೆ ಮತ್ತು ಜನರಲ್ ಆಸ್ಪತ್ರೆ ಕಾಮಗಾರಿ ಕುಂಟುತ್ತಾ ಸಾಗಿದೆ. ಹಳೇ ಹುಬ್ಬಳ್ಳಿಯ ಅಹಿಂಸಾ ವೃತ್ತದ ಬಳಿ ಇದ್ದ ಹೆರಿಗೆ ಮತ್ತು ಜನರಲ್ ಆಸ್ಪತ್ರೆಯ ಕಟ್ಟಡ ಹಳೆದಾಗಿತ್ತು. ಹೀಗಾಗಿ ಮಹಾನಗರ ಪಾಲಿಕೆ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಿಸಲು 2017-18 ರಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಅನುಮೋದನೆ ನೀಡಿತ್ತು. ಆದರೆ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೋವಿಡ್ ಹಾಗೂ ಗುತ್ತಿಗೆದಾರರಿಗೆ ಹಣ ಬಿಡುಗಡೆಯಲ್ಲಿ ವಿಳಂಬವಾಗಿದ್ದರಿಂದ ಮೊದಲ ಹಂತದ ಕಾಮಗಾರಿ ನಿಧಾನವಾಗಿ ಸಾಗಿತ್ತು. ಇವೆಲ್ಲದರ ನಡುವೆ 6 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ.

ಆದರೆ ಅದಾದ ಬಳಿಕ ಯಾವುದೇ ಬೆಳವಣಿಗೆಯಾಗಿರಲಿಲ್ಲ. 2022ರ ಜನವರಿಯಲ್ಲಿ 2ನೇ ಹಂತದ ಕಾಮಗಾರಿಗೆ 8 ಕೋಟಿ ಬಿಡುಗಡೆಯಾಗಿ ಜುಲೈನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗ ಮತ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಹೆರಿಗೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗೆ ಹಳೇಹುಬ್ಬಳ್ಳಿ ಆಸ್ಪತ್ರೆ ಅವಲಂಬಿಸಿದ್ದ ಜನರು ಈಗ ಪಾಲಿಕೆಯ ಚಿಟಗುಪ್ಪಿ, ಕಿಮ್ಸ್‌ನತ್ತ ತೆರಳುವಂತಾಗಿದೆ.‌

ಕೊಪ್ಪಳದಲ್ಲಿ ಶುರುವಾಗಲಿದೆ ಕಾರ್ಮಿಕರ ವಿಮಾ ಆಸ್ಪತ್ರೆ: ಸಂಗಣ್ಣ ಕರಡಿ

ಇನ್ನೂ ಇತ್ತೀಚಿಗೆ ಚಿಟಗುಪ್ಪಿಗೆ ದಾಖಲಾದ ಬಾಣಂತಿಯ ಮಗು ಅನಾರೋಗ್ಯದಿಂದಾಗಿ ಕಿಮ್ಸ್‌ಗೆ ದಾಖಲಿಸಲಾಯಿತು. ತಾಯಿ-ಮಗುವನ್ನು ದೂರ ಮಾಡಿದ್ದರಿಂದ ಮಗು ಮೃತಪಟ್ಟಿತು. ಇಂತಹ ಘಟನೆಗಳು ಆಗಾಗ ಘಟನೆಗಳು ನಡೆಯುತ್ತಿವೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. 100 ಹಾಸಿಗೆಗಳುಳ್ಳ ನೂತನ ಕಟ್ಟಡ, ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ಪೀಠೋಪಕರಣ, ಲಿಫ್ಟ್ ವ್ಯವಸ್ಥೆ ಒಳಗೊಂಡಿದೆ. ಆ್ಯಂಬುಲೆನ್ಸ್ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಜಿ+3 ಮಾದರಿಯಲ್ಲಿ ಕಟ್ಟಡ ನಿರ್ಮಾಣ ನಡೆದಿದೆ. ಇಷ್ಟೆಲ್ಲಾ ಹೈಟೆಕ್ ಆಗಿ ನಡೆದರೂ ಜನರ ಉಪಯೋಗ ಬರುವುದು ಯಾವಾಗ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಲಿಂಗಸೂಗೂರು ಆಸ್ಪತ್ರೆ ನರ್ಸ್ ಲಂಚಾವತಾರ: ಹಣ ಕೊಟ್ಟರೆ ಮಾತ್ರ ಚಿಕಿತ್ಸೆ

ಬಡಜನರು, ಕಾರ್ಮಿಕರು ಹೆಚ್ಚಾಗಿ ವಾಸಿಸುವ ಹಳೇ ಹುಬ್ಬಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನೇ ಜನರು ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಂಡು ಸಾರ್ವಜನಿಕರಿಗೆ ಮುಕ್ತವಾಗಲಿ ಎನ್ನುವುದು ಜನರ ಆಗ್ರಹವಾಗಿದೆ.

Latest Videos
Follow Us:
Download App:
  • android
  • ios