Kannada sahitya sammelana: ಕನ್ನಡಕ್ಕಿವೆ 2 ಕುತ್ತುಗಳು: ಎಚ್‌ಎಸ್‌ವಿ ಎಚ್ಚರಿಕೆ
ನೆರೆಯ ಪ್ರಾಂತದವರು ಅಖಂಡ ಭಾರತದ ಕಲ್ಪನೆ ಮರೆತು ವರ್ತನೆ ಮಾಡುತ್ತಿರುವುದು ಹಾಗೂ ಕನ್ನಡಿಗರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿರುವುದು ಕನ್ನಡಿಗರಿಗೆ ಇರುವ ಬಹುದೊಡ್ಡ ಕುತ್ತುಗಳು ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
ಹಾವೇರಿ (ಜ.7) : ನೆರೆಯ ಪ್ರಾಂತದವರು ಅಖಂಡ ಭಾರತದ ಕಲ್ಪನೆ ಮರೆತು ವರ್ತನೆ ಮಾಡುತ್ತಿರುವುದು ಹಾಗೂ ಕನ್ನಡಿಗರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿರುವುದು ಕನ್ನಡಿಗರಿಗೆ ಇರುವ ಬಹುದೊಡ್ಡ ಕುತ್ತುಗಳು ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
ಹಾವೇರಿ(Haveri)ಯಲ್ಲಿ ನಡೆಯುತ್ತಿರುವ 86ನೇ ಸಾಹಿತ್ಯ ಸಮ್ಮೇಳನ(Kannada sahitya sammelana)ದ ಉದ್ಘಾಟನೆ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ನೆರೆಯ ಪ್ರಾಂತ ಎಂದು ಪರೋಕ್ಷವಾಗಿ ಮಹಾರಾಷ್ಟ್ರ(Maharashtra) ರಾಜ್ಯವು ಕರ್ನಾಟಕದ ಪ್ರಾಂತಗಳನ್ನು ಕೇಳುತ್ತಿರುವುದು ತೀವ್ರ ಬಿಕ್ಕಟ್ಟಿನ ವಿಷಯ ಎಂದರು. ಅಲ್ಲದೇ, ಕರ್ನಾಟಕದಲ್ಲಿ ಕನ್ನಡದ ಶಾಲೆಗಳು ದಿನೇದಿನೇ ಕಡಿಮೆಯಾಗುತ್ತಿವೆ. ಇಂಗ್ಲೀಷ ವ್ಯಾಮೋಹ ಹೆಚ್ಚಾಗುತ್ತಿದೆ. ಇವೆರೆಡು ಸಂಗತಿಗಳು ಕನ್ನಡಕ್ಕೆ ಬಹುದೊಡ್ಡ ಕುತ್ತುಗಳಾದರೂ ಕರ್ನಾಟಕ ಹಾಗೂ ಕನ್ನಡದ ಒಟ್ಟಾರೆ ಅಭಿವೃದ್ಧಿ ಹೆಮ್ಮೆ ಪಡುವಂತಿದೆ ಎಂಬ ಸಮಾಧಾನದ ಮಾತುಗಳನ್ನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿಗೆ ಪದಾರತಿ ಎತ್ತಿದ ಎಚ್‌ಎಸ್‌ವಿ!
ಹಾವೇರಿಯಲ್ಲಿ ನಡೆಯುತ್ತಿರುವ ಸಮ್ಮೇಳನ ಅಪೂರ್ವವಾಗಿದೆ. ಇಲ್ಲಿ ರಾಜಕೀಯ ಕ್ಷಾತ್ರ ಶಕ್ತಿ, ಸಾಹಿತ್ಯದ ಚಿಂತನ ದ್ರವ್ಯ ಹಾಗೂ ಕನ್ನಡ ಸಮುದಾಯದ ಅಭಿಮಾನದ ಅಸ್ಮಿತೆ ಇದೆ. ಮೂರು ಶಕ್ತಿಗಳನ್ನು ಸೇರಿದ ಈ ಸಮ್ಮೇಳನ ಅಪೂರ್ವ ಎಂದು ನುಡಿದ ಎಚ್‌ಎಸ್ ವಿ, ಕಲಬುರ್ಗಿಯಲ್ಲಿ ನಡೆದ 85ನೇ ಸಮ್ಮೇಳನದಲ್ಲಿ ಚರ್ಚೆಯಾದ ನಾಡು-ನುಡಿಯ ಬಗ್ಗೆ ಇಲ್ಲಿಯೂ ಮುಂದುವರೆಯುತ್ತಿರುವುದು ಕನ್ನಡದ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಎಂದರು.
ಕನ್ನಡದ ಸಾಹಿತ್ಯ ಎಂದರೆ ಬರೀ ಮಾಸ್ತಿ, ಬೇಂದ್ರೆ, ಕುವೆಂಪು ಹೆಸರುಗಳು ಮಾತ್ರ ಕೇಳಿ ಬರುತ್ತಿದ್ದವು. ಕೆಲವು ವರ್ಷಗಳಿಂದ ಶ್ರೇಷ್ಠ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಹಿರಿಯರ ಹೆಸರುಗಳ ಪಟ್ಟಿಯಲ್ಲಿ ಸೇರಿಸಬಹುದಾದ ಲೇಖಕರು ಕಾಣಸಿಗುತ್ತಿದ್ದಾರೆ. ಕನ್ನಡದ ಅಪರೂಪದ ಕೃತಿಗಳು ಇಂಗ್ಲೀಷ ಭಾಷೆಗೆ ಅನುವಾದಗೊಳ್ಳುತ್ತಿವೆ. ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ ಜಗತ್ತಿನ ಗಮನ ಸೆಳೆಯುತ್ತಿದೆ. ಪೆಂಗ್ವಿನ್ ಅಂತಹ ಸಂಸ್ಥೆಯು ಕನ್ನಡದ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಕನ್ನಡದ ಸಿನಿಮಾ, ನಾಟಕ, ಸಂಗೀತ, ಯಕ್ಷಗಾನ ಸಹ ಕರ್ನಾಟಕ ದಲ್ಲಿ ಪ್ರಬಲಗೊಳ್ಳುತ್ತಿವೆ. ಇತ್ತೀಚೆಗೆ ಕನ್ನಡದ ಸಿನಿಮಾವೊಂದು ಜಗತ್ತಿನ ಗಮನ ಸೆಳೆಯಿತು ಎಂದು ‘ಕಾಂತಾರ’ ಸಿನಿಮಾ ಉದಾಹರಣೆ ತೆಗೆದುಕೊಂಡರು. ಕೋವಿಡ್ ಕಾರಣದಿಂದ ವರ್ಷವೀಡಿ ಕನ್ನಡದ ಕೆಲಸ ಮಾಡದೇ ಹೋದರೂ ಮನೆಯಲ್ಲೇ ಕುಳಿತು ‘ಬುದ್ಧಚರಣ’ ಕೃತಿ ಬರೆದಿರುವುದಾಗಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು. ಕನ್ನಡ ಸಾಹಿತ್ಯ ಸಮ್ಮೇಳನ ಲಿಟರರಿ ಫೆಸ್ಟ್ ಆಗಬಾರದು: ಎಚ್. ಎಸ್.ವಿ