Asianet Suvarna News Asianet Suvarna News

ಹೊನ್ನಾವರ: ಕಾಳಿ ಸೇತುವೆ ಕುಸಿದ ಬೆನ್ನಲ್ಲೇ ವಿಷ್ಣುವರ್ಧನ್ ಅಭಿನಯದ 'ಹೃದಯ ಗೀತೆ' ಹಾಡು ವೈರಲ್..!

ಕಾಳಿನದಿಗೆ ಅಡ್ಡಲಾಗಿನಿರ್ಮಿಸಿದ್ದ ಸೇತುವೆ ಆ.6ರಂದು ತಡರಾತ್ರಿ ಕುಸಿದಿತ್ತು. ಇದೀಗ ಈ ಸೇತುವೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 36 ವರ್ಷ ಹಿಂದೆ ಚಿತ್ರೀಕರಣವಾಗಿದ್ದ ಡಾ.ವಿಷ್ಣು ವರ್ಧನ್, ಭವ್ಯ ಅವರ ನಟನೆಯ ಹೃದಯಗೀತೆ ಸಿನಿಮಾದ 'ಹೃದಯಗೀತೆ ಹಾಡುತ್ತಿದೆ ಹಾಡನ್ನು ನೆಟ್ಟಿಗರು ವೈರಲ್ ಮಾಡಿದ್ದಾರೆ. 

Hrudaya Geete song went viral after the Kali Bridge collapse at honnavar in uttara kannada grg
Author
First Published Aug 11, 2024, 10:58 AM IST | Last Updated Aug 11, 2024, 11:00 AM IST

ಹೊನ್ನಾವರ(ಆ.11): ಕಳೆದ 42 ವರ್ಷಗಳಿಂದ ಕಾರವಾರ-ಗೋವಾ ಮಧ್ಯೆ ಸಂಪರ್ಕಕೊಂಡಿಯಾಗಿದ್ದ ಕಾಳಿ ನದಿಯ ಸೇತುವೆ ಕುಸಿದ ಬೆನ್ನಲ್ಲೇ ಈ ಸೇತುವೆಯ ಮೇಲೆ ಚಿತ್ರಿಕರಿಸಿದ ಹೃದಯಗೀತೆ ಚಿತ್ರದ ಹಾಡು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. 

ತಾಲೂಕಿನ ಕಾಳಿನದಿಗೆ ಅಡ್ಡಲಾಗಿನಿರ್ಮಿಸಿದ್ದ ಸೇತುವೆ ಆ.6ರಂದು ತಡರಾತ್ರಿ ಕುಸಿದಿತ್ತು. ಇದೀಗ ಈ ಸೇತುವೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 36 ವರ್ಷ ಹಿಂದೆ ಚಿತ್ರೀಕರಣವಾಗಿದ್ದ ಡಾ.ವಿಷ್ಣು ವರ್ಧನ್, ಭವ್ಯ ಅವರ ನಟನೆಯ ಹೃದಯಗೀತೆ ಸಿನಿಮಾದ 'ಹೃದಯಗೀತೆ ಹಾಡುತ್ತಿದೆ ಹಾಡನ್ನು ನೆಟ್ಟಿಗರು ವೈರಲ್ ಮಾಡಿದ್ದಾರೆ. 

ಉತ್ತರ ಕನ್ನಡ: ಮಧ್ಯರಾತ್ರಿ ಕುಸಿದು ಕಾಳಿ ನದಿ ಪಾಲಾದ 1 ಕಿಮೀ ಉದ್ದದ ಸೇತುವೆ, ಟ್ರಕ್‌ ಡ್ರೈವರ್ ಬಚಾವ್!

ಜತೆಗೆ ಈ ಸೇತುವೆ ಹತ್ತಿರ ಚಿತ್ರಿಕರಣಗೊಂಡ ಹಲವಾರು ಕನ್ನಡ ಚಲನಚಿತ್ರಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಮುನ್ನೆಲೆಗೆ ಬಂದಿದ್ದು, ಹಳೆಯ ನೆನಪುಗಳನ್ನು ಕೆದಕಲಾಗಿದೆ.

Latest Videos
Follow Us:
Download App:
  • android
  • ios