- Home
- Karnataka Districts
- ಮೋದಿ ಹೋದ್ರು ಮೈಸೂರಿನಲ್ಲಿಯೇ ಉಳಿದಿದ್ಯಾಕೆ ಬೆಂಗಾವಲು ಹೆಲಿಕಾಪ್ಟರ್? ಅಧಿಕಾರಿಗಳು ಹೇಳಿದ್ದೇನು?
ಮೋದಿ ಹೋದ್ರು ಮೈಸೂರಿನಲ್ಲಿಯೇ ಉಳಿದಿದ್ಯಾಕೆ ಬೆಂಗಾವಲು ಹೆಲಿಕಾಪ್ಟರ್? ಅಧಿಕಾರಿಗಳು ಹೇಳಿದ್ದೇನು?
ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ನಲ್ಲಿ ಪ್ರಧಾನಿ ಮೋದಿ ಅವರ ಬೆಂಗಾವಲು ಹೆಲಿಕಾಪ್ಟರ್ ಉಳಿದುಕೊಂಡಿದೆ. ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಉಳಿದಿದೆ ಎಂದು ಹೇಳಲಾಗಿದ್ದರೂ, ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್
ತಾಂತ್ರಿಕ ದೋಷದಿಂದಾಗಿ ಪ್ರಧಾನಿ ಮೋದಿ ಅವರ ಬೆಂಗಾವಲು ಹೆಲಿಕಾಪ್ಟರ್ ಮೈಸೂರಿನಲ್ಲೆ ಉಳಿದಿದೆ ಎನ್ನಲಾಗಿದೆ. ಇಂಡಿಯನ್ ಏರ್ ಫೋರ್ಸ್ಗೆ ಸೇರಿದ ಹೆಲಿಕಾಪ್ಟರ್ ಟೇಕ್ ಆಫ್ ಆಗುವಲ್ಲಿ ತಾಂತ್ರಿಕ ತೊಂದರೆಗೆ ಒಳಗಾಗಿದೆ. ಮಧ್ಯಾಹ್ನ 3.20ಕ್ಕೆ ಲಲಿತಮಹಲ್ ಹೆಲಿಪ್ಯಾಡ್ಗೆ ಪ್ರಧಾನಿ ಮೋದಿ ಆಗಮಿಸಿದರು.
ಒಟ್ಟು ಮೂರು ಹೆಲಿಕಾಪ್ಟರ್
ಈ ವೇಳೆ ಒಂದು ಹೆಲಿಕಾಪ್ಟರ್ನಲ್ಲಿ ಮೋದಿ ಆಗಮಿಸಿದರು. ಅವರ ಬೆಂಗಾವಲಿಗೆ ಎರಡು ಹೆಲಿಕಾಪ್ಟರ್ಗಳು ಬಂದಿದ್ದವು. ಪ್ರಧಾನಿ ಮೋದಿ ಆಗಮಿಸಿದ ಬಳಿಕ ಟೇಕ್ ಆಫ್ ಆಗಬೇಕಿದ್ದ 3 ಹೆಲಿಕಾಪ್ಟರ್ ಪೈಕಿ ಎರಡು ಮಾತ್ರ ತೆರಳಿದವು. ತಾಂತ್ರಿಕ ದೋಷದಿಂದ ಮೈಸೂರಿನಲ್ಲೇ ಒಂದು ಹೆಲಿಕಾಪ್ಟರ್ ಉಳಿಯಿತು. ಪೂರ್ವ ನಿಗದಿಯಂತೆ ಪ್ರಧಾನಿ ಮೋದಿ ಅವರು ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.
ಹೆಲಿಕಾಪ್ಟರ್ ಮುಂಭಾಗಕ್ಕೆ ಸಿಬ್ಬಂದಿ ಟಾರ್ಪಲ್ ಹಾಕಿರೋ ಪೊಲೀಸರು
ರಾತ್ರಿ ಕಳೆದರೂ ವಾಯುಪಡೆಯ ಹೆಲಿಕಾಪ್ಟರ್ ಲಲಿತಮಹಲ್ ಹೆಲಿಪ್ಯಾಡ್ನಲ್ಲೇ ಉಳಿದಿದೆ. ಸದ್ಯ ಹೆಲಿಕಾಪ್ಟರ್ ಮುಂಭಾಗಕ್ಕೆ ಸಿಬ್ಬಂದಿ ಟಾರ್ಪಲ್ ಹೊದಿಸಿದ್ದಾರೆ. ಕರ್ನಾಟಕ ಪೊಲೀಸರು ಹೆಲಿಕಾಪ್ಟರ್ ಬಳಿಯಲ್ಲಿದ್ದು, ಮೈಸೂರಿನಲ್ಲೇ ಇರುವ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಸ್ಪಷ್ಟನೆ
ಹೆಲಿಕಾಪ್ಟರ್ ನಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲ. ಎಸ್.ಪಿ.ಜಿಯ ಕೆಲವು ಅಧಿಕಾರಿಗಳು ಮೈಸೂರಿನಲ್ಲಿಯೇ ಉಳಿದಿದ್ದು, ನ. 14 ರಂದು ಬೆಳಗ್ಗೆ 10 ಗಂಟೆಗೆ ತೆರಳುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದರು.













