Chikkamagaluru: ಚಿತ್ರಕಲೆ ಮೂಲಕ ಮತದಾರರ ಸೆಳೆಯಲು ಯತ್ನ, ಹೊಯ್ಸಳರ ಕಾಲದ ಕಲಾಕೃತಿಗೆ ಹೆಚ್ಚಿನ ಒತ್ತು
ಚಿಕ್ಕಮಗಳೂರು ಮತಕೆಂದ್ರಗಳ ಗೋಡೆಮೇಲೆ ರಾರಾಜಿಸುತ್ತಿವೆ ವಿವಿಧ ಚಿತ್ರಕಲಾಕೃತಿಗಳು. ಮಹಿಳೆಯರಿಗಾಗಿ ಪಿಂಕ್ ಬೂತ್. ಹೊಯ್ಸಳರ ಕಾಲದ ಶಿಲ್ಪ ಕಲಾಕೃತಿಗೆ ಹೆಚ್ಚಿನ ಒತ್ತು.
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.3): ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರರನ್ನು ಸೆಳೆಯಲು, ಚುನಾವಣಾ ಆಯೋಗದ ನಿರ್ದೇಶನದಂತೆ ಗರಿಷ್ಠ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು, ಮತಗಟ್ಟೆಗಳಲ್ಲಿ ವಿಶೇಷವಾದ ಚಿತ್ರಗಳನ್ನು ಬರೆಸುವ ಮೂಲಕ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯಲು ಚಿಕ್ಕಮಗಳೂರು ಜಿಲ್ಲೆಯ ಸ್ವೀಪ್ ಸಮಿತಿ ಮುಂದಾಗಿದೆ.
ಗೋಡೆಯ ಮೇಲೆ ಭಿನ್ನ ವಿಭಿನ್ನ ರೀತಿಯ ಚಿತ್ರಕಲೆ:
ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಯಾವೊಬ್ಬ ಮತದಾರ ಕೂಡಾ ಮತದಾನದಿಂದ ವಂಚಿತರಾಗಬಾರದು, ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತದಾನವಗುವಂತೆ ಮಾಡಬೇಕು. ಎಂಬ ಸದುದ್ದೇಶದಿಂದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸ್ವೀಪ್ ಕಮಿಟಿಯ ಮೂಲಕ ಮತಗಟ್ಟೆಗಳತ್ತ ಮತದಾರರನ್ನು ಸೆಳೆಯುವ ಸಲುವಾಗಿ ಕೆಲವು ಮತಗಟ್ಟೆಗನ್ನು ಆಯ್ಕೆ ಮಾಡಿಕೊಂಡು, ಗೋಡೆಯ ಮೇಲೆ ಭಿನ್ನ ವಿಭಿನ್ನ ರೀತಿಯ ಚಿತ್ರಕಲೆ ಬಿಡಿಸಿ ಮತದಾರರನ್ನು ಸೆಳೆಯಲು ಸಿದ್ಧತೆ ಮಾಡಿಕೊಂಡಿದೆ.
ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಪ್ರತೀ ವಿಧಾನಸಭಾ ಕ್ಷೇತ್ರವಾರು ತಲಾ ಒಂದೆರೆಡು ಮತಕೇಂದ್ರಗಳಲ್ಲಿ ಈ ರೀತಿಯ ಚಿತ್ರಗಳನ್ನು ಬಿಡಿಸಲು ಸೂಚನೆ ಸಿಕ್ಕಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮತಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು ಒಂದೊಂದು ಮತಕೇಂದ್ರದಲ್ಲೂ ಒಂದೊಂದು ರೀತಿಯ ಚಿತ್ರಗಳನ್ನು ಬಿಡಿಸುವ ಮೂಲಕ ಮತದಾನ ಮಾಡಲು ಬಂದವರಿಗೆ ಇನ್ನಷ್ಟು ಸಮಯ ಇಲ್ಲಿಯೇ ಇರುವಂತೆ ಭಾಸವಾಗುವ ರೀತಿಯಲ್ಲಿ ಹೊಸ ಅನುಭವ ನೀಡಲು ಮುಂದಡಿ ಇಟ್ಟಿದೆ.
ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲೂ ತಲಾ ಹತ್ತು ಥಿಮ್ ಆಧಾರಿತ ಮತದಾನ ಕೇಂದ್ರಗಳನ್ನು ಸೃಷ್ಟಿಸಿ ಒಂದೊಂದು ಮತದಾನ ಕೇಂದ್ರದಲ್ಲೂ ಒಂದೊಂದು ಬಗೆಯ ಚಿತ್ರಗಳನ್ನು ಬಿಡಿಸುವ ಮೂಲಕ ಹೊಯ್ಸಳರ ಕಾಲದ ಚಿತ್ರಕಲೆ, ಜಾನಪದ, ವನ್ಯಜೀವಿ, ಸೇರಿದಂತೆ ಇತರೆ ವಿಷಗಳನ್ನು ಬಿಡಿಸುವ ಮೂಲಕ ಮತದಾರರಿಗೆ ಹೊಸ ಸಂದೇಶ ರವಾನಿಸಲು ಸಜ್ಜಾಗುತ್ತಿವೆ.
ಥೀಮ್ ಆಧಾರಿತ ಮತ ಕೇಂದ್ರಗಳ ಉದ್ದೇಶ:
ಚುನಾವಣಾ ಆಯೋಗದ ನಿರ್ದೇಶನದಂತೆ ಆಯಾ ಪರಿಸರಕ್ಕೆ ಅನುಗುಣವಾಗಿ ಹಾಗೂ ಅಲ್ಲಿನ ಪರಿಸಕ್ಕೆ ತಕ್ಕಂತೆ ಮತದಾನ ಕೇಂದ್ರಗಳಲ್ಲಿ ಚಿತ್ರಗಳನ್ನು ಬಿಡಿಸುವ ಮೂಲಕ ಮತಗಟ್ಟೆಗಳಿಗೆ ಬರುವ ಮತದಾರರಿಗೆ ಚುನಾವಣೆ ಎನ್ನುವುದು ಒಂದು ಹಬ್ಬದ ರೀತಿಯಲ್ಲಿದೆ ಎನ್ನುವ ಅನುಭವ ನೀಡಬೇಕು, ವಿವಿಧ ಚಿತ್ರಗಳ ಮೂಲಕ ಮತದಾರರನ್ನು ಸೆಳೆಯಲು ಸಹಕಾರಿಯಾಗುತ್ತದೆ. ಗೋಡೆ ಮೇಲಿನ ಬರಹಗಳನ್ನು ನೋಡಿ ಮತದಾರರಿಗೆ ಮತಕೇಂದ್ರದ ಬಗ್ಗೆ ಒಳ್ಳೆಯ ಅನುಭವ ಸೃಷ್ಟಿಸುವ ಮೂಲಕ ಆ ಮತಗಟ್ಟೆಯ ಹಿಂದಿನ ಚಿತ್ರಣವನ್ನು ಮರೆಸುವಂತಿರಬೇಕು.
ಎಲ್ಲೆಲ್ಲಿ ಯಾವ ವಿಶೇಷತೆ:
ಕೇವಲ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವ ಮತಕೇಂದ್ರಗಳನ್ನು ಸಖೀ ಬೂತ್ ಎಂದು ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡುವ ಮೂಲಕ ಎಲ್ಲರನ್ನೂ ಸೆಳೆಯುವುದು ಇದರ ಉದ್ದೇಶವಾಗಿದ್ದದು, ವಿಶೇಷವಾಗಿ ಪಿಂಕ್ ಬಣ್ಣವನ್ನೇ ಬಳಸಿ ಚಿತ್ರ ಬಿಡಿಸುವುದರಿಂದ ಇದನ್ನು ಪಿಂಕ್ಬೂತ್ ಎಂದೂ ಕೂಡಾ ಕರೆಯಬಹುದಾಗಿದೆ. ವಿಶೆಷ ಚೇತನ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವಂತಹ ಮತ ಕೇಂದ್ರಗಲ್ಲಿ ಅದಕ್ಕೆ ಸಂಬಂಧಪಟ್ಟಂತಹ ಚಿತ್ರಗಳನ್ನು ಬಿಡಿಸುವ ಮೂಲಕ ಅವರ ಮೇಲೆ ಪ್ರೀತಿ, ಕಾಳಜಿ ಹುಟ್ಟುವಂತೆ ಮಾಡುವುದು, ಆಯಾ ಪರಿಸರಕ್ಕೆ ತಕ್ಕಂತೆ ಕಾಫಿ, ಅಡಕೆ ಬೆಳೆಗಳ ಚಿತ್ರಗಳನ್ನು ಬಿಡಿಸುವ ಮೂಲಕ ಅಲ್ಲಿನ ಮತದಾರರನ್ನು ಓಲೈಸುವುದು, ವನ್ಯ ಜೀವಿಗಳ ಚಿತ್ರಗಳನ್ನು ಬಿಡಿಸುವ ಮೂಲಕ ವನ್ಯ ಪ್ರಾಣ ಪ್ರಿಯರು ಹಾಗೂ ಪರಿಸರ ಆರಾಧಕರ ಗಮನ ಸೆಳೆಯುವುದು.
ಆಂತರಿಕ ಸಮಸ್ಯೆ, ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮುಂದೂಡಿಕೆ!
ವಾಸ್ತಶಿಲ್ಪ ಕಲೆಗೆ ಒತ್ತು ಕೊಡುವ ದೃಷ್ಟಿಯಿಂದ ವಿಶೇಷವಾಗಿ ಹೊಯ್ಸಳರ ಕಾಲದ ವಾಸ್ತು ಶಿಲ್ಪಕಲಾಕೃತಿಗಳ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡುವುದು. ವಿವಿಧ ಜಾನಪದ ಕ್ರೀಡೆ, ಜಾನಪದ ಕಲೆಗಳ ಚಿತ್ರಗಳನ್ನು ಬಿಡಿಸುವ ಮೂಲಕ ಜಾನಪದ ಕಲಾಸಕ್ತರನ್ನು ಸೆಳೆಯುವುದು. ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಬಿಡಿಸುವ ಮೂಲಕ ಇತಿಹಾಸ ಪ್ರಿಯರನ್ನು ಸೆಳೆಯುವುದು, ಯುವ ಶಕ್ತಿಯನ್ನು ಮತ ಕೆಂದ್ರಗಳತ್ತ ಸೆಳೆಯುವ ಸಲುವಾಗಿ ವಿವಿಧ ಆಕರ್ಷಣಯ ಚಿತ್ರಗಳನ್ನು ಬಿಡಿಸಲಾಗಿದೆ.
ಮನೆಯ ಕೀ ಬಳಸಿ ಲಕ್ಷಾಂತರ ರೂ. ಚಿನ್ನಾಭರಣ ದೋಚಿದಾತ ಅರೆಸ್ಟ್!
ಮತದಾರರನ್ನು ಸೆಳೆಯಲು ಸಿದ್ಧವಾಗುತ್ತಿವೆ ಹತ್ತು ವಿಧದ ಚಿತ್ರಗಳು:
ಮಹಿಳಾ ಅಧಿಕಾರಿಗಳಿಗಾಗಿ ಸಖಿ ಬೂತ್
ವಿಶೇಷ ಚೇತನರ ಚಿತ್ರ
ಪ್ರಕೃತಿ
ವನ್ಯ ಜೀವಿ
ವಾಸ್ತುಶಿಲ್ಪಗಳ
ಕಾಫಿ ಬೆಳೆ
ಜಾನಪದ, ಕ್ರೀಡೆ
ಅಡಕೆ ಬೆಳೆಯ
ಐತಿಹಾಸಿಕ ಸ್ಥಳಗಳ
ಯುವಶಕ್ತಿ