Asianet Suvarna News Asianet Suvarna News

ಜಾತಿ ಗಣತಿ ವರದಿಗೆ ಮುನ್ನವೇ ವಿರೋಧಿಸುವುದು ಎಷ್ಟು ಸರಿ : ವಿಶ್ವನಾಥ್

ಜಾತಿಗಣತಿ ವರದಿ ರಾಜ್ಯ ಸರ್ಕಾರದ ಕೈ ಸೇರುವ ಮುನ್ನವೇ ವಿರೋಧಿಸುವುದು ಸರಿಯಲ್ಲ. ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮಾತನಾಡಬೇಕೆ ಹೊರತು ಸುಮ್ಮನೆ ವಿರೋಧಿಸುವುದು ಎಷ್ಟು ಸರಿ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

How correct is it to object before the report snr
Author
First Published Dec 1, 2023, 10:28 AM IST

  ಮೈಸೂರು:  ಜಾತಿಗಣತಿ ವರದಿ ರಾಜ್ಯ ಸರ್ಕಾರದ ಕೈ ಸೇರುವ ಮುನ್ನವೇ ವಿರೋಧಿಸುವುದು ಸರಿಯಲ್ಲ. ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮಾತನಾಡಬೇಕೆ ಹೊರತು ಸುಮ್ಮನೆ ವಿರೋಧಿಸುವುದು ಎಷ್ಟು ಸರಿ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಕುರಿತಂತೆ ಹಿಂದುಳಿದ ವರ್ಗಗಳ ಆಯೋಗವು ಅಧಿಕೃತವಾಗಿ ವರದಿ ನೀಡಿಲ್ಲ. ನ್ಯಾ.ಎಚ್.ಎಂ. ಕಾಂತರಾಜ್ ಸಮೀಕ್ಷೆ ವರದಿ ರಾಜ್ಯ ಸರ್ಕಾರದ ಕೈಗೆ ತಲುಪಿಲ್ಲ. ಹೀಗಿದ್ದರೂ ವಿರೋಧ ಮಾಡುವುದು ಯಾವ ನ್ಯಾಯ ಎಂದು ಕಿಡಿಕಾರಿದರು.

ಕಾಂತರಾಜ್ ವರದಿ ಜಾತಿಗಣತಿಯಾಗಿರದೆ ಸಮೀಕ್ಷೆಯಾಗಿದೆ. ಕೇವಲ ಒಂದು ಸಮುದಾಯದ ಪರವಾಗಿ ಮಾಡಿಲ್ಲ. ಪ್ರತಿಯೊಂದು ಸಮುದಾಯದಲ್ಲಿರುವ ಬಡ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಾಗಿದೆ ಎಂಬುದನ್ನು ಅರಿಯಬೇಕು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಆರ್‌. ಅಶೋಕ್‌ಉಪ ಮುಖ್ಯಮಂತ್ರಿ ಆಗಿದ್ದವರು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಾಗ ಸಂವಿಧಾನದ ಚೌಕಟ್ಟಿನ ಒಳಗೆ ನೀಡಬೇಕು ಎಂದರು.

ಆರ್. ಅಶೋಕ್ ವಿಪಕ್ಷ ನಾಯಕರಾಗಿದ್ದಾರೆ. ಈಗ ಜವಾಬ್ದಾರಿಯುತವಾಗಿ ಮಾತನಾಡಬೇಕೆ ಹೊರತು ಏನೇನೋ ಹೇಳಿಕೆ ನೀಡುವುದಲ್ಲ. ಕಾಂತರಾಜ್ ವರದಿ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಸ್ವೀಕಾರಿಸಬೇಕು. ಬಳಿಕ ಅದನ್ನು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಅವರು ಹೇಳಿದರು.

ಶಾಸಕರು ಮತ್ತು ಸಚಿವರ ನಡುವೆ ಸಮನ್ವಯದ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಲ್‌ಪಿ ಸಭೆ ಕರೆಯದಿರುವುದೇ ಸಮನ್ವಯದ ಕೊರತೆಗೆ ಕಾರಣ. ಶಾಸಕರು ತಮ್ಮ ಅಭಿಪ್ರಾಯ ಹೇಳುವಂತಿಲ್ಲವೇ? ಸಚಿವರು ಮತ್ತು ಶಾಸಕರಿಗೆ ಸ್ಪಂದಿಸದಿದ್ದಾಗ ಹೇಳಿಕೆ ನೀಡುತ್ತಾರೆ. ಕೆಲವೊಂದು ವಿಚಾರಗಳನ್ನು ಪಕ್ಷದ ಚೌಕಟ್ಟಿನ ಒಳಗೆ ಚರ್ಚಿಸಬೇಕು. ಬಿ.ಆರ್. ಪಾಟೀಲ್ ಅವರನ್ನು ಸಿಎಂ ಕರೆದು ಮಾತನಾಡಿದ್ದಾರೆ. ಈಗ ಎಲ್ಲವೂ ಸರಿ ಹೋಗಿದೆ ಎಂದು ಅವರು ತಿಳಿಸಿದರು.

Follow Us:
Download App:
  • android
  • ios