Asianet Suvarna News Asianet Suvarna News

ಮೈಸೂರು: 150ಕ್ಕೂ ಹೆಚ್ಚು ಮನೆ ಕುಸಿತ, ಸ್ಮಶಾನದೊಳಗೂ ನೀರು

ಮೈಸೂರಿನಲ್ಲಿ ಭಾರೀ ಮಳೆ ಮುಂದುವರಿದಿದ್ದು, 150ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಹಾಗೆಯೇ ಭಾರೀ ಗಾತ್ರದ ಮರಗಳೂ ಧರೆಗುರುಳಿವೆ. ಸ್ಮಶಾನದಲ್ಲಿಯೂ ನೀರು ತುಂಬಿಕೊಂಡಿದ್ದು, ಅಂತ್ಯಸಂಸ್ಕಾರ ನಡೆಸಲೂ ಸ್ಥಳವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಹುಣಸೂರಿನಲ್ಲಿ ತಾಲೂಕಿನ ಹನಗೋಡು, ಬಿಳಿಕೆರೆ, ಕಸಬಾ, ಗಾವಡಗೆರೆ ಹೋಬಳಿಗಳಲ್ಲಿ ಮನೆಗಳು, ಮರಮುಟ್ಟುಗಳು ಬಿದ್ದು ಹೋಗಿವೆ, ಕೆರೆ-ಕಟ್ಟೆ, ಕೃಷಿ ಹೊಂಡ, ಕೋಳಗಳು, ಕಾಲುವೆಗಳು ಮುಚ್ಚಿ ಹೋಗಿವೆ.

Houses collapsed as heavy rain lashes in Mysore
Author
Bangalore, First Published Aug 10, 2019, 3:37 PM IST

ಮೈಸೂರು(ಆ.10): ಹುಣಸೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಬೆಳೆ ಹಾನಿಯಾಗಿದೆ, ಸಾರ್ವಜನಿಕರ ಅಸ್ತಿಪಾಸ್ತಿಗೂ ತುಂಬಾನೆ ನಷ್ಟಉಂಟಾಗಿದೆ, ನೂರಾರು ಮನೆಗಳು ಬಿದ್ದಿದ್ದು, ಮರಮುಟ್ಟುಗಳು ಧರೆಗುರುಳಿವೆ, ಕೆರೆ ಕಾಲುವೆಗಳು ತುಂಬಿಕೊಂಡಿವೆ. ಮನೆಯೊಂದು ಬಿದ್ದು ವ್ಯಕ್ತಿ ಮೃತಪಟ್ಟಿದ್ದು, ಊರು-ಕೇರಿ ಮತ್ತು ರಸ್ತೆ-ಚರಂಡಿಗಳು ಕಾಣುತ್ತಿಲ್ಲ, ಕೋಟ್ಯಾಂತರ ರು. ನಷ್ಟಸಂಭವಿಸಿ ಜನರ ಕಂಗಾಲಾಗಿದ್ದಾರೆ.

ತಾಲೂಕಿನ ಹನಗೋಡು, ಬಿಳಿಕೆರೆ, ಕಸಬಾ, ಗಾವಡಗೆರೆ ಹೋಬಳಿಗಳಲ್ಲಿ ಮನೆಗಳು, ಮರಮುಟ್ಟುಗಳು ಬಿದ್ದು ಹೋಗಿವೆ, ಕೆರೆ-ಕಟ್ಟೆ, ಕೃಷಿ ಹೊಂಡ, ಕೋಳಗಳು, ಕಾಲುವೆಗಳು ಮುಚ್ಚಿ ಹೋಗಿವೆ.

ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಸವರಾಜು, ರವಿಗೌಡ ಹಾಗೂ ಚಂದ್ರೇಗೌಡ ಎಂಬವವರ ವಾಸದ ಮನೆಗಳು ಮಳೆಗೆ ಹಾನಿಯಾಗಿವೆ. ಗ್ರಾಪಂ ಪಿಡಿಒ ಜಿ. ಮಂಜುಳ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಇಂದಿಗೆ 150ಕ್ಕೂ ಹೆಚ್ಚು ಮನೆಗಳ ದಾಖಲಾಗಿದೆ, ಮರಮುಟ್ಟುಗಳ ಸಂಖ್ಯೆ ಮಾತ್ರ ಕೇಳುವಂತಿಲ್ಲ, ಜಮೀನಿನಲ್ಲಿ ಬೆಳೆದ ರೈತರ ಫಸಲು ನೂರಾರು ಏಕರೆ ಕೋಟ್ಯಾಂತರ ರು. ನಷ್ಟಸಂಭವಿಸಿದೆ.

ನೀರು ತುಂಬಿದ ಸ್ಮಶಾನ:

ನದಿಯ ಪಾತ್ರದಲ್ಲಿರುವ ಪಟ್ಟಣದ ಮುಖ್ಯರಸ್ತೆ ಮತ್ತು ಅರಣ್ಯ ಇಲಾಖೆ ಹಿಂಭಾಗವಿರುವ ಬಡಾವಣೆ ಮತ್ತು ಎರಡು ಸ್ಮಶಾನಗಳು, ಕೆ.ಎಂ. ವಾಡಿ ರಸ್ತೆಯಲ್ಲಿರುವ ಸ್ಮಶಾನವು ನೀರು ತುಂಬಿಕೊಂಡು ಸತ್ತ ಹೆಣ ಸುಡಲು ಸ್ಮಶಾನವಿಲ್ಲದಂತಾಗಿದೆ. ಸುಟ್ಟಿದ ಬೂದಿ ಮತ್ತಿತರ ಕಚ್ಚಾ ವಸ್ತುಗಳು ಹಾಗೂ ನದಿಯ ದಡೆಯಲ್ಲಿದ್ದ ಕಲ್ಮಶಗಳು ಸಹ ನೀರಿನಲ್ಲಿ ತೇಲುತ್ತಿದೆ ಹಾಗೂ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಅವರ ಕಾಲದ ನಿರ್ಮಾಣವಾದ ಹಳೇ ಸೇತುವೆ ಮತ್ತು ಪಂಪ್‌ಹೌಸ್‌ ಬಳಿ ಇರುವ ತೂಗು ಸೇತುವೆಗಳ ಮೇಲೆ ನೀರು ಬಂದಿದೆ.

ನದಿಯ ತೀರಲ್ಲಿ ತೇಲುತ್ತಿರುವ ಮನೆಗಳು - ಲಕ್ಷ್ಮಣತೀರ್ಥ ನದಿಯ ದಡೆಯ ವ್ಯಾಪ್ತಿಯಲ್ಲಿ ಹರಿದು ಬರುವ ಕೋಣಹೊಸಳ್ಳಿಯಿಂದ ಜಿಪಂ ಸದಸ್ಯ ಕಟ್ನಾನಾಯಕ ಸೇರಿದಂತೆ 21 ಕುಟುಂಬಗಳನ್ನು ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರ ಮತ್ತು ಕೋಳುವಿಗೆ ಶಾಲೆಯಲ್ಲಿ ಸ್ಥಳಾಂತರ ಮಾಡಲಾಯಿತು.

ನೀರಿನ ಪಂಪ್‌ ಹೌಸ್‌ ಮುಳುಗಡೆ:

ಹುಣಸೂರು ಪಟ್ಟಣಕ್ಕೆ ನೀರು ಒದಗಿಸುವ ಪಂಪ್‌ ಹೌಸ್‌ ಸಂಪೂರ್ಣ ಜಲವೃತಗೊಂಡಿದೆ, ಇನ್ನೇರಡು ಮೂರು ದಿನ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ಮರದೂರಿನಿಂದ ರಾಮಪಟ್ಟಣ ಮಾರ್ಗ ಹೋಗುವ ರಸ್ತೆಯು ಸಂಪೂರ್ಣ ಜಲಾವೃತವಾಗಿದೆ. ವಾಹನಗಳ ಸಂಚಾರ ಸ್ಥಗಿತವಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದಿವಾಸಿ ಯುವಕ ಸಾವು- ತಾಲೂಕಿನ ವೀರನಹೊಸಳ್ಳಿ ಗಿರಿಜನ ಹಾಡಿಯ ಪಾರ್ವತಿ ಪುತ್ರ ಗಣೇಶ್‌ (35) ಮೃತಪಟ್ಟಾತ, ಈತ ಅವಿವಾಹಿತನಾಗಿದ್ದು, ಮನೆಯ ಗೋಡೆ ಬಿದ್ದು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ಅಂತ್ಯಕ್ರಿಯೆ ನಡೆಯಿತು. ಮರಣೋತ್ತರ ಪರೀಕ್ಷೆಯ ವರದಿ ಬಂದ ತಕ್ಷಣ ಮೃತ ಗಿರಿಜನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗುತ್ತದೆ ಎಂದು ತಹಸೀಲ್ದಾರ್‌ ಬಸವರಾಜ್‌ ತಿಳಿಸಿದರು.

ಮಳೆ ಹಾನೀ ಪ್ರದೇಶಕ್ಕೆ ಜಿಲ್ಲಾಡಳಿತ ಭೇಟಿ:

ಮೈಸೂರು ಜಿಲ್ಲಾಧಿಕಾರಿ ಅಭಿನವ್‌ರಾಮ್‌ ಜಿ. ಶಂಕರ್‌ ಮತ್ತು ಎಸ್ಪಿ, ಡಿವೈಎಸ್ಪಿ, ಸರ್ಕಲ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌ ಹಾಗೂ ಯೋಜನಾ ನಿರ್ದೇಶಕ ಆರ್‌. ಲೋಕನಾಥ್‌, ಎ.ಸಿ. ವೀಣಾ ಹಾಗೂ ತಹಸೀಲ್ದಾರ್‌ ಬಸವರಾಜ್‌, ಇಒ ಗಿರೀಶ್‌ ಮತ್ತು ಜಿಲ್ಲಾ , ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಮುಂಜಾಗ್ರತೆ ಕ್ರಮವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿ ನಿರಾಶ್ರಿತ ಜನರಿಗೆ ಧೈರ್ಯ ಹೇಳಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಶಾಸಕ ಎಸ್‌.ಎ. ರಾಮದಾಸ್‌, ಮಾಜಿ ಶಾಸಕ ಪುತ್ರ ಜಿಪಂ ಸದಸ್ಯ ಅಮಿತ್‌ ದೇವರಹಟ್ಟಿ, ಮಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿ, ತಮ್ಮ ವೈಯಕ್ತಿಕವಾಗಿ ಕೆಲವರಿಗೆ ನೆರವು ನೀಡಿದ್ದಲ್ಲದೆ, ಅಧಿಕಾರಿಗಳು ಕ್ರಮವಹಿಸಲು ಮನವಿ ಮಾಡಿದ್ದಾರೆ.

ಉತ್ತರ ಕನ್ನಡದಲ್ಲಿ ಹೆದ್ದಾರಿ ಸಂಪರ್ಕ ಬಂದ್ : ಅತಂತ್ರವಾದ ಜನರ ಬದುಕು

ಮಳೆಯ ಹಾನೀಯಲ್ಲಿ ಸಿಲುಕಿಕೊಂಡಿರುವ ಜನರಿಗೆ ಸಹಾಯ ಮಾಡಿ, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾನಿಯಾಗಿರುವ ಪ್ರದೇಶದಲ್ಲಿದ್ದು, ಅವರಿಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಬೇಕು ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ನೀಡಿ ಎಂದು ದೂರವಾಣಿ ಮೂಲಕ ಮಾಹಿತಿ ಪಡೆದುಕೊಂಡು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿಮಾಡಿದ್ದೇನೆ ಹಾಗೂ ನಾಳೆಯಿಂದ ಹುಣಸೂರು ಕೇಂದ್ರ ಸ್ಥಾನದಲ್ಲೆ ಕುಳಿತು ಕ್ರಮವಹಿಸುವುದಾಗಿ ಅನರ್ಹಗೊಂಡ ಶಾಸಕ ಎಚ್‌. ವಿಶ್ವನಾಥ್‌ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios