ಸಾಕು ಪ್ರಾಣಿಗಳ ಆರೋಗ್ಯಕ್ಕಾಗಿ ಆಸ್ಪತ್ರೆಗಳು ಅವಶ್ಯಕ: ಪರಮೇಶ್ವರ್‌

ದೇಶಕ್ಕೆ ಅನ್ನ ನೀಡುವ ರೈತರ ಜೀವನ ಮಟ್ಟವನ್ನು ಸುಧಾರಿಸಲು ಕೃಷಿಯೊಂದಿಗೆ ಹೈನುಗಾರಿಕೆ ಉತ್ತೇಜನಕ್ಕೆ ರಾಸುಗಳ ಮತ್ತು ವಾಣಿಜ್ಯ ಸಾಕು ಪ್ರಾಣಿಗಳ ಆರೋಗ್ಯಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪಶು ಆಸ್ಪತ್ರೆಗಳ ಹೆಚ್ಚು ನಿರ್ಮಾಣ ಮಾಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Hospitals are necessary for the health of domestic animals says g parameshwar gvd

ಕೊರಟಗೆರೆ (ಆ.31): ದೇಶಕ್ಕೆ ಅನ್ನ ನೀಡುವ ರೈತರ ಜೀವನ ಮಟ್ಟವನ್ನು ಸುಧಾರಿಸಲು ಕೃಷಿಯೊಂದಿಗೆ ಹೈನುಗಾರಿಕೆ ಉತ್ತೇಜನಕ್ಕೆ ರಾಸುಗಳ ಮತ್ತು ವಾಣಿಜ್ಯ ಸಾಕು ಪ್ರಾಣಿಗಳ ಆರೋಗ್ಯಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪಶು ಆಸ್ಪತ್ರೆಗಳ ಹೆಚ್ಚು ನಿರ್ಮಾಣ ಮಾಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಮಲ್ಲೇಕಾವು ಮತ್ತು ತೋನಕೆರೆ ಗ್ರಾಮಗಳಲ್ಲಿ 76 ಕೋಟಿ ರು. ಗಳ ನೂತನ ಪಶು ಆಸ್ಪತ್ರೆಗಳನ್ನು ಉದ್ಘಾಟನೆ ಮಾಡಿ ಮಾತನಾಡಿದರು. 

ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯೋಂದಿಗೆ ಹೈನುಗಾರಿಕೆ ಹಾಗೂ ಮೇಕೆ, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿದ್ದು ಆದಾಯ ಗಳಿಸುತ್ತಿದ್ದಾರೆ. ಆದರೆ ಜನರಂತೆ ಅವುಗಳ ಆರೋಗ್ಯವು ಅವಶ್ಯಕತೆ ಇದ್ದು ಚಿಕಿತ್ಸೆಗೆ ಹತ್ತಿರದಲ್ಲಿ ಪಶು ಆಸ್ಪತ್ರೆಗಳ ಅವಶ್ಯಕತೆ ಇದೆ. ಒಮ್ಮೆ ಈ ಸಾಕು ಪ್ರಾಣಿಗಳು ಅಕಾಲಿವಾಗಿ ಸತ್ತರೆ ರೈತರ ಬದುಕಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಅದಕ್ಕಾಗಿ ಪಶು ಆಸ್ಪತ್ರೆಗಳ ನಿರ್ಮಾಣಕ್ಕೆ ಉನ್ನತ್ತೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಶುಗಳ ಶೀಘ್ರ ಚಿಕಿತ್ಸೆಗೆ ಆ್ಯಂಬುಲೆನ್ಸ್‌ಗಳನ್ನು ಒದಗಿಸಲು ಯೋಜನೆ ರೂಪಗೊಂಡಿದೆ ಎಂದರು.

ಮೈತ್ರಿ ಸರ್ಕಾರದಲ್ಲಿ ಕಮಿಷನ್‌ ನನ್ನ ಗಮನಕ್ಕೆ ಬಂದಿಲ್ಲ: ಪರಮೇಶ್ವರ್‌

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಮಳೆ ನೀರು ಸಂಗ್ರಹಣೆ ಮಾಡಲು ಸಾಕಷ್ಟು ಚೆಕ್‌ ಡ್ಯಾಂ ನಾಲಾ ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಿದೆ. ಈಗ ಭಾಗದ ರಸ್ತೆ ಅಭಿವೃದ್ಧಿಗೆ ತುಂಬಾಡಿ-ಜೋನಿಗರಹಳ್ಳಿ ಮುಂದುವರೆದ ರಸ್ತೆಗೆ 18 ಕೋಟಿ, ಈ ಮುಖ್ಯ ರಸ್ತೆಗೆ ಬರುವ ಲಿಂಕ್‌ ರಸ್ತೆಗಳನ್ನು ಆಭಿವೃದ್ಧಿಗೊಳಿಸಲಾಗಿದೆ. ಮುಖ್ಯಮಂತ್ರಿಗಳ 30 ಕೋಟಿಗಳ ಶೇಷ ಅನುದಾನವನ್ನು ಕ್ಷೇತ್ರದ 36 ಪಂಚಾಯಿತಿಗಳಿಗೆ ಸದಸ್ಯರನ್ನು ಒಳಗೂಡಿ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನೀಡಲಾಗಿದೆ. 

ಪ್ರತಿಗ್ರಾಮ ಪಂಚಾಯಿತಿಗೆ ಸರ್ಕಾರದ ನೀಡಿರುವುದನ್ನು ಹೊರತು ಪಡಿಸಿ ಶೇಷ 100 ಮನೆಗಳಂತೆ 3600 ಆಶ್ರಯ ಯೋಜನೆ ಮನೆಗಳನ್ನು ತರಲಾಗಿದ್ದು, ಅಭಿವೃದ್ಧಿಯಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇ.ಓ.ದೊಡ್ಡಸಿದ್ದಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೂದಮ್ಮ, ಲಕ್ಷ್ಮಮ್ಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆ ಶಂಕರ್‌, ತಾಲೂಕು ಪಶುವೈದ್ಯಾಧಿಕಾರಿ ಡಾ.ಸಿದ್ದನಗೌಡ, ಕೃಷಿ ಅಧಿಕಾರಿ ನಾಗರಾಜು, ಅರಣ್ಯಾಧಿಕಾರಿ ಸುರೇಶ್‌, ಹಿಂದುಳಿದ ವರ್ಗದ ಅಧಿಕಾರಿ ಅನಂತರಾಜು, ತಾಲೂಕು ಪಶು ವೈದ್ಯರಾದ ಡಾ.ನಾಗಭೂಷಣ್‌, ಡಾ.ಗಿರೀಶ್‌ಬಾಬುರೆಡ್ಡಿ, ಡಾ.ಮೋಹನ್‌, ಡಾ.ಮಂಜುನಾಥ್‌ ಸೇರಿದಂತೆ ಇತರರು ಹಾಜರಿದ್ದರು.

ಮನೆಮನೆಗೆ ನೀರು ಒದಗಿಸುವುದೇ ನಮ್ಮ ಕರ್ತವ್ಯ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧಕುಡಿಯುವ ನೀರನ್ನು ಸೇರಿದಂತೆ ವ್ಯಕ್ತಿಯ ಬಳಕೆಯ ನೀರನ್ನು ಹಾಗೂ ಸ್ವಚ್ಛ ಪರಿಸರವನ್ನು ಒದಗಿಸುವುದು ನಮ್ಮ ಕರ್ತವ್ಯ. ಕೊರಟಗೆರೆ ಕ್ಷೇತ್ರದಲ್ಲಿ ಈ ಕಾರ್ಯವನ್ನು ಹಂತ ಹಂತವಾಗಿ ಒದಗಿಸಿಕೊಂಡು ಬರುತ್ತಿದ್ದೇವೆ. ಜನರು ಹಾಗೂ ಗ್ರಾಮಗಳಿಗೆ ನೀರು ಒದಗಿಸುವ ನೌಕರರÜರು ನೀರಿನ ಮಹತ್ವನ್ನು ಅರಿತು ಅವಶ್ಯಕ ಮತ್ತು ಮಿತವಾಗಿ ಬಳಸಿ. ನೀರು ವ್ಯರ್ಥವಾಗದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ಹೇಳಿದರು.

Tumakuru: ಕೆರೆಗಳ ನಿರ್ವಹಣೆಗೆ ಗ್ರಾಪಂಗಳಲ್ಲಿ ಅನುದಾನ ಲಭ್ಯವಿಲ್ಲ

ತಾಲೂಕಿನ ಕಸಬಾ ಯೋಜನೆಯ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದಲ್ಲಿ ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಹಂಚಿಹಳ್ಳಿ ಗ್ರಾಮ ಪಂಚಾಯಿತಿಯ ಮುದ್ದರಂಗಯ್ಯನ ಪಾಳ್ಯ, ಹಂಚಿಹಳ್ಳಿ, ಜಿ.ನಾಗೇನಹಳ್ಳಿ, ಮಲ್ಲೇಶಪುರ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಂಪುಗಾನಹಳ್ಳಿ, ಕೋಡ್ಲಹಳ್ಳಿ, ಬೂದಗವಿ ಗ್ರಾಮ ಪಂಚಾಯಿತಿಯ ನೇಗಲಾಲ ಗ್ರಾಮಗಳಲ್ಲಿ ಮನೆಗಳಿಗೆ ಕಾರ್ಯಾತ್ಮಕ ಕುಡಿಯುವ ನೀರಿನ ನಳ ಸಂಕರ್ಪ ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರದಲ್ಲಿ ಚಾಲನಾ ನಾಮ ಫಲಕದಲ್ಲಿ ಶಾಸಕರ ಹೆಸರು ಹಾಕದೆ ಗುತ್ತಿಗೆದಾರರ ಹೆಸರು ಇದ್ದದಕ್ಕೆ ಕಾರ್ಯಕರ್ತರು ಆಕ್ಷೇಪ ವ್ಯಕ್ತ ಪಡಿಸಿದರು. ಈ ಸಂಬಂಧ ಶಾಸಕರು ಅಧಿಕಾರಿಗೆ ಗಮನ ವಹಿಸುವಂತೆ ಸೂಚಿಸಿದರು.

Latest Videos
Follow Us:
Download App:
  • android
  • ios