ತುಮಕೂರು(ಮೇ.08): ಅಪಘಾತವಾಗಿ ಗಾಯಾಳುಗಳು ಆಸ್ಪತ್ರೆಗೆ ಬಂದರೂ ಮೊದಲು‌ ದುಡ್ಡು ಕಟ್ಟಿ ಆಮೇಲೆ ಚಿಕಿತ್ಸೆ ಎಂದು ಹೇಳುವ ಮೂಲಕ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಘಟನೆ ಇಂದು(ಶುಕ್ರವಾರ) ‌ನಗರದ ಹೊರವಲಯದ ಶ್ರೀ ದೇವಿ ಆಸ್ಪತ್ರೆಯಲ್ಲಿ ನಡೆದಿದೆ.

ಇದೇ ಆಸ್ಪತ್ರೆ ಮುಂದೆ ಲಾರಿ ಹಾಗೂ ಇನೋವಾ ನಡುವೆ ಅಪಘಾತವಾಗಿತ್ತು. ಕಾರಿನಲ್ಲಿ ಪತಿ, ಪತ್ನಿ ಹಾಗೂ ಒಂದು ವರ್ಷದ ಮಗುವಿತ್ತು. ಆದರೆ, ಅಪಘಾತದಲ್ಲಿ ಪತಿ, ಪತ್ನಿ ಗಾಯಗೊಂಡಿದ್ದರು, ಇದನ್ನ ಗಮನಿಸಿದ ಸ್ಥಳೀಯರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು.

ಸಾಯುವ ಮುನ್ನ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ

ಆದರೆ ದುಡ್ಡಿನ ಅಮಿಲಿನಿಂದ ಹೊರಬಾರದ ಆಸ್ಪತ್ರೆ ಸಿಬ್ಬಂದಿ ಮೊದಲು ಹಣ ಕಟ್ಟಿ ಬಳಿಕ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದರು. ಕೊನೆಗೆ ಸ್ಥಳೀಯರು ಹಣ ಕಟ್ಟಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. 
ಹೀಗಾಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಸ್ಪತ್ರೆ ಕೋವಿಡ್- 19 ಆಗಿದ್ದು, ಸದ್ಯ ಶ್ರೀ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗಿತ್ತು ಆದರೆ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.