ಸಿಂಧನೂರು: ತಾಲೂಕು ಆರೋಗ್ಯಾಧಿಕಾರಿಗೆ ಕೊರೋನಾ, ಆಸ್ಪತ್ರೆ ಸೀಲ್‌ಡೌನ್‌

ತಾಲೂಕು ಆರೋಗ್ಯ ಅಧಿಕಾರಿಗೆ ಕೊರೋನಾ ಕೊರೋನಾ ದೃಢ| ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ| ರಾಯಚೂರು ಜಿಲ್ಲೆಯ ಸಿಂಧನೂರು ನಗರ| ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳ ಕಚೇರಿ ಮತ್ತು ಆಸ್ಪತ್ರೆ  ಸಂಪೂರ್ಣ ಸ್ಯಾನಿಟೈಜೆಷನ್‌ ಮಾಡಿ, ಸೀಲ್‌ಡೌನ್‌|

Hospital Sealdown due to Coronavirus Infected to Health Officer in Sindhanur in Raichur

ಸಿಂಧನೂರು(ಜು.12):  ತಾಲೂಕು ಆರೋಗ್ಯ ಅಧಿಕಾರಿಗೆ ಕೊರೋನಾ ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಸಾರ್ವ​ಜ​ನಿ​ಕ​ರಲ್ಲಿ ಮತ್ತಷ್ಟು ಆತಂಕ ತೀವ್ರಗೊಂಡಿದೆ. ಆರೋಗ್ಯ ಅಧಿಕಾರಿಯ ಪ್ರಾಥಮಿಕ ಸಂಪರ್ಕದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇದ್ದರಿಂದ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ತುರ್ತು ಚಿಕಿತ್ಸೆ ಘಟಕ ಹೊರತುಪಡಿಸಿ ಸಾರ್ವಜನಿಕರಿಗೆ ಸೇವೆ ಸ್ಥಗಿತಗೊಂಡಿದೆ.

ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳ ಕಚೇರಿ ಮತ್ತು ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಜೆಷನ್‌ ಮಾಡಿ, ಸೀಲ್‌ಡೌನ್‌ ಮಾಡಲಾಯಿತು. ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನೇಕ ರೋಗಿಗಳು ತೀವ್ರ ಭಯಗೊಂಡಿದ್ದಾರೆ. ಒಪಿಡಿ ಬಂದ್‌ ಮಾಡಲಾಗಿದೆ. 

ಕಾಲಿಗೆ ಗಾಯ, ಅನಾಥ ವೃದ್ಧೆಯ ನರಳಾಟ: ಸಹಾಯಕ್ಕೆ ಬಾರದ ಸಾರ್ವಜನಿಕರು

ಇತ್ತೀಚೆ​ಗೆ ಮಿನಿವಿಧಾನಸೌಧದಲ್ಲಿ ಸಭೆ ನಡೆಸಿದ ಸಮಯದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದ ತಹಶೀಲ್ದಾರ್‌ ಮಂಜುನಾಥ ಭೋಗಾವತಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಬಾಲಚಂದ್ರ ಲಕ್ಕಂ, ಗ್ರಾಮೀಣ ನಗರ ಮತ್ತು ತುರ್ವಿಹಾಳ ಪಿಎಸ್‌ಐಗಳು ಸಹ ಶನಿವಾರ ರಾಯಚೂರಿಗೆ ತೆರಳಿ ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿದ್ದಾರೆ. ಅಲ್ಲದೆ ವರದಿ ಬರುವತನಕ ಇವರ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕ ಆಸ್ಪತ್ರೆಯ 8 ವೈದ್ಯರು ಹೋಂ ಕ್ವಾರಂಟೈನ್‌ಗೊಳಗಾಗಿದ್ದಾರೆ.
 

Latest Videos
Follow Us:
Download App:
  • android
  • ios