ಗೆಲುವಿನ ಸಂಭ್ರಮದ ವೇಳೆ ಶರತ್ ಬಚ್ಚೇಗೌಡ ಬೆಂಬಲಿಗ ಸಾವು
ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಗೆಲುವಿನ ಸಂಭ್ರಮಾಚರಣೆ ವೇಳೆ ಅಭಿಮಾನಿಯೋರ್ವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಹೊಸಕೋಟೆ (ಡಿ.09) : ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಜಯಗಳಿಸಿದ್ದು ಸಂಭ್ರಮಾಚರಣೆ ವೇಳೆ ಬೆಂಬಲಿಗರೋರ್ವರು ಮೃತಪಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶರತ್ ಬಚ್ಚೇಗೌಡ 11,466 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಬಚ್ಚೇಗೌಡ ಅಭಿಮಾನಿ ರಿಯಾಜ್ ಬೇಗ್ [50] ಹೃದಯಾಘಾತದಿಂದ ಮೃತರಾಗಿದ್ದಾರೆ.
ಶರತ್ ಗೆಲುವು ಖಚಿತವಾಗುತ್ತಿದ್ದಂತೆ ಕಟ್ಟಿಗೇನಹಳ್ಳಿಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದರು. ಇದೇ ವೇಳೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಕರ್ನಾಟಕ ಉಪ ಚುನಾವಣೆಯ ಕ್ಷಣ ಕ್ಷಣದ ಅಪ್ ಡೇಟ್‌ಗಳಿಗೆ ಇಲ್ಲಿ ಕ್ಲಿಕ್ಕಿಸಿ
ಕಳೆದ ಕೆಲ ದಿನಗಳ ಹಿಂದಷ್ಟೇ ಶರತ್ ಬಚ್ಚೇಗೌಡ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಅಭಿಮಾನಿಯೋರ್ವರು ಹಾರ ಹಾಕುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ಇದೀಗ ಮತ್ತೋರ್ವ ಅಭಿಮಾನಿ ಸಾವಿಗೀಡಾಗಿದ್ದಾರೆ.
ನಿಜವಾಯ್ತು ನೀಲಿ ಪುಸ್ತಕದ ರಾಜಕೀಯ ಭವಿಷ್ಯ: BSY ಸರ್ಕಾರಕ್ಕಿಲ್ಲ ಕಂಟಕ!..
ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ, ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ಕಾಂಗ್ರೆಸ್‌ನಿಂದ ಪದ್ಮಾವತಿ ಬಿಜೆಪಿಯಿಂದ ಅನರ್ಹರಾಗಿದ್ದ ಎಂಟಿಬಿ ನಾಗರಾಜ್ ಸ್ಪರ್ಧೆ ಮಾಡಿದ್ದರೆ, ತಂದೆ ಬಿಜೆಪಿ ಸಂಸದರಾಗಿದ್ದರು [ಬಚ್ಚೇಗೌಡ] ಪುತ್ರ ಬಂಡಾಯವಾಗಿ ಶರತ್ ಬಚ್ಚೇಗೌಡ ಪಕ್ಷದಿಂದ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ.