ಕಲಬುರಗಿ: ಎಸ್.ಎಲ್. ಭೈರಪ್ಪಗೆ ಗೌರವ ಡಾಕ್ಟರೇಟ್ ಪ್ರದಾನ
ಎಸ್.ಎಲ್. ಭೈರಪ್ಪ ಅವರಿಗೆ ಮೈಸೂರಿನ ಅವರ ಸ್ವಗ್ರಹದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ| ನನ್ನ ಕಾದಂಬರಿ ಬರಹಕ್ಕೆ ಪಾಶ್ಚಾತ್ಯ ಕಾದಂಬರಿಗಳು ಮಾದರಿಯಲ್ಲ, ರಾಮಾಯಣ ಮತ್ತು ಮಹಾಭಾರತಗಳೇ ನನ್ನ ಮುಂದಿದ್ದ ಮಾದರಿಗಳು: ಎಸ್.ಎಲ್.ಭೈರಪ್ಪ|
ಕಲಬುರಗಿ(ನ.09): ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರಿಗೆ ಮೈಸೂರಿನ ಅವರ ಸ್ವಗ್ರಹದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ, ಪ್ರೊ.ರಾಜೇಶ್ವರಿ ಮಹೇಶ್ವರಯ್ಯ, ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ಬಸವರಾಜ ಡೋಣೂರ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ವಿಕ್ರಮ ವಿಸಾಜಿ, ಕ್ಲಾಸಿಕಲ್ ಕನ್ನಡದ ನಿರ್ದೇಶಕ ಬಿ.ಬಿ. ಪೂಜಾರಿ, ಸಹಾಯಕ ಕುಲಸಚಿವ ಅಜೀಂ ಪಾಶಾ, ಪ್ರಧಾನ ಗುರುದತ್ತ, ಆರ್.ವಿ.ಎಸ್. ಸುಂದರಂ ಮತ್ತಿರರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಡಾ. ಎಸ್. ಎಲ್ ಭೈರಪ್ಪಗೆ ಮತ್ತೊಂದು ಗೌರವ
ನನ್ನ ಕಾದಂಬರಿ ಬರಹಕ್ಕೆ ಪಾಶ್ಚಾತ್ಯ ಕಾದಂಬರಿಗಳು ಮಾದರಿಯಲ್ಲ, ರಾಮಾಯಣ ಮತ್ತು ಮಹಾಭಾರತಗಳೇ ನನ್ನ ಮುಂದಿದ್ದ ಮಾದರಿಗಳು. ನನ್ನ ಸಾಹಿತ್ಯದ ಬೇರುಗಳು ಭಾರತ ಸಂಸ್ಕೃತಿಯಲ್ಲಿವೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇತ್ತೀಚೆಗೆ ಮಾಡಿದ ಸಾಧನೆ ಅಮೋಘವಾದುದು ಎಂದು ಭೈರಪ್ಪ ಹೇಳಿದರು.
ಅಳಿವಿನಂಚಿನಲ್ಲಿನ ಭಾಷೆಗಳ ಅಧ್ಯಯನ ಕೇಂದ್ರದಿಂದ ಪ್ರಕಟಗೊಂಡ ಬೆಳರಿ, ಬೆಟ್ಟಕುರುಬ, ಸಂಕೇತಿ, ಎರವ, ಅರೆಭಾಷೆ, ಪಟ್ಟೆಗಾರ ಕೃತಿಗಳನ್ನು ಮತ್ತು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದಿಂದ ಪ್ರಕಟಗೊಂಡ ಸಂಸ್ಕೃತಿ ಚಿಂತಕ ಬಿ.ಎ. ವಿವೇಕ ರೈ ರಚಿಸಿದ ಹ್ಯಾಂಡ್ ಬುಕ್ ಆಫ್ ಕನ್ನಡ ಹಾಗೂ ಖ್ಯಾತ ಭಾಷಾ ತಜ್ಞೆ ಡಾ.ರಾಜೇಶ್ವರಿ ಮಹೇಶ್ವರಯ್ಯ ರಚಿಸಿರುವ ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾಗಿ ಕೃತಿಯನ್ನು ಭೈರಪ್ಪನವರು ಬಿಡುಗಡೆ ಮಾಡಿದರು.