ಮಂಗಳೂರು(ಏ.09): ಅಜ್ಜಾವರದಲ್ಲಿ ಕಳೆದವಾರ ಕೊರೋನಾ ಪಾಸಿಟಿವ್‌ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಆತನ ಮನೆಯವರ ಸಂಪರ್ಕದಲ್ಲಿದ್ದರೆಂಬ ಕಾರಣಕ್ಕೆ ಗ್ರಾ.ಪಂ. ಅಧ್ಯಕ್ಷೆ, ಪಿಡಿಒ ಸಹಿತ ಒಟ್ಟು 44 ಮಂದಿಗೆ ಹೋಂಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ವೈರಸ್‌ ಸೋಕಿತ ವ್ಯಕ್ತಿಯ ಸಹೋದರ ಪಂಚಾಯಿತಿಯಲ್ಲಿ ನಡೆದ ಕೊರೊನಾ ರಕ್ಷಣಾ ಕಾರ್ಯಪಡೆಯ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಸದಸ್ಯರ ವಿಕೃತಿ!

ಆದ್ದರಿಂದ ಸೆಕೆಂಡರಿ ಕ್ವಾರಂಟೈನ್‌ ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ, ಪಿಡಿಒ, ಎಂಟು ಮಂದಿ ಸದಸ್ಯರು ಸೇರಿ ಇದೀಗ 44 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ತಿಳಿಸಿದ್ದಾರೆ.