ಒಂದು ವರ್ಷದ ಹಿಂದೆ ಹಿಂದೂ ಧರ್ಮದ ಮೂಲದ ಬಗ್ಗೆ ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಇದೀಗ ಗಣಪತಿ ಸ್ತೋತ್ರ ಹಾಡಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ 'ವಕ್ರತುಂಡ ಮಹಾಕಾಯ' ಶ್ಲೋಕವನ್ನು ಪಠಿಸಿದರು. 

ತುಮಕೂರು (ಜ.18): ಅಂದಾಜು ಒಂದು ವರ್ಷದ ಹಿಂದೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಆಯೋಜನೆ ಮಾಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದ ಮಾತು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.‘ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟು ಹಾಕಿದರು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಬೌದ್ಧ ಧರ್ಮ ಹುಟ್ಟಿದ್ದು ಭಾರತದಲ್ಲಿ. ಜೈನ ಧರ್ಮವು ಭಾರತದಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ವಿದೇಶಗಳಿಂದ ಬಂದವು' ಎಂದಿದ್ದರು. ಹಿಂದೂ ಧರ್ಮ ಹುಟ್ಟಿಸಿದವರು ಯಾರು ಎಂದು ಅವರ ಹೇಳಿದ್ದ ಮಾತು ಸಾಕಷ್ಟು ವಿರೋಧಕ್ಕೆ ಕಾರಣವಾಯಿತ್ತು.

ಹೀಗಿದ್ದ ಗೃಹಸಚಿವ ಡಾ.ಜಿ ಪರಮೇಶ್ವರ್‌ ಶನಿವಾರ ತುಮಕೂರಿನಲ್ಲಿ ಆರಂಭವಾದ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ವೇದಿಕೆ ಮೇಲೆ ವಿಘ್ನ ನಿವಾರಕನನ್ನು ನೆನೆದಿದ್ದಾರೆ. ಬರೀ ನೆನೆದಿದ್ದು ಮಾತ್ರವಲ್ಲ ಗಣಪತಿ ಸ್ತೋತ್ರವನ್ನೂ ಹಾಡುವ ಮೂಲಕ ಗಮನಸೆಳೆದಿದ್ದಾರೆ.ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ ಎಂದು ಪರಮೇಶ್ವರ್‌ ಶ್ಲೋಕವನ್ನೂ ಹಾಡಿದ್ದಾರೆ.

ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ನಲ್ಲಿ ಪತ್ರಕರ್ತರ ಸಮ್ಮೇಳನ ನಡೆಯುತ್ತಿದೆ. ಈ ವೇಳೆ ವೇದಿಕೆ ವೀಕ್ಷಣೆ ಮಾಡಿದ ಬಳಿಕ ಸ್ತೋತ್ರ ಹೇಳುವ ಮೂಲಕ ಪರಮೇಶ್ವರ್‌ ಶುಭ ಹಾರೈಸಿದಿದ್ದಾರೆ. ಈ ಹಿಂದೆ ಹಿಂದೂ ಧರ್ಮವನ್ನು ಹುಟ್ಟಿಸಿದವರು ಯಾರು ಎಂದು ವಿವಾದ ಸೃಷ್ಟಿಸಿದ್ದ ಪರಮೇಶ್ವರ್‌ ಆ ಬಳಿಕ ನಿರಂತರ ಹಿಂದೂ ದೇವರ ಪೂಜೆ, ಶ್ಲೋಕವನ್ನು ಹಾಡುತ್ತಿದ್ದಾರೆ. ಇತ್ತೀಚೆಗೆ ಅವರ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದೂ ಸುದ್ದಿಯಾಗಿತ್ತು.

ವಿದ್ಯಾರ್ಥಿಗಳ ನಾಲೆಡ್ಜ್‌ ಟೆಸ್ಟ್‌ ಮಾಡಿದ ಪರಮೇಶ್ವರ್‌: ತುಮಕೂರು ವಿವಿ ಟೆನಿಸ್‌ ಕೋರ್ಟ್‌ನ ಪರಿಶೀಲನೆ ವೇಳೆ ವಿದ್ಯಾರ್ಥಿಗಳ ಜೊತೆ ಮಾತಿಗಿಳಿದ ಪರಮೇಶ್ವರ್ ಅವರ ಜ್ಞಾನ ಪರೀಕ್ಷೆ ಮಾಡಿದ್ದಾರೆ. 'ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಅಂದ್ರೆ ಏನು..?' ಎಂದು ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ವ್ಯವಹಾರ ಆಡಳಿತ ಎಂದು ಉತ್ತರಿಸಿದ್ದಾರೆ.

ಈ ವೇಳೆ ಏನಪ್ಪ ಅದು ನನಗೆ ಅರ್ಥ ಆಗ್ಲಿಲ್ಲ ಎಂದಾಗ ಅದೊಂದು ಹೆಚ್ ಆರ್ ಮ್ಯಾನೇಜರ್ ಪೊಸ್ಟ್ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಈ ವೇಳೆ ಹೆಚ್ ಆರ್ ಮ್ಯಾನೇಜರ್ ಅಂದ್ರೆ ಏನು..? ಎಂದು ಮರುಪ್ರಶ್ನೆ ಹಾಕಿದ್ದಾರೆ. ಅದು ಎಂಬಿಎ ಜೂನಿಯರ್ ಎಂದು ವಿದ್ಯಾರ್ಥಿಗಳು ಉತ್ತರಿಸಿದ್ದಾರೆ.

ಹ್ಯೂಮನ್‌ ರಿಸರ್ಚ್ ಪೋಸ್ಟ್‌ಗೆ ಟ್ರೈನಿಂಗ್ ಯಾಕೆ ಬೇಕು? ನಾನೆ ಕೊಡಲಿ ಹಿಡ್ಕೊಂಡು ನಿಂತ್ರೆ ಆಗಲ್ವಾ ಎಂದು ಪರಮೇಶ್ವರ್‌ ಕೇಳಿದ್ದಕ್ಕೆ, ವಿತ್ ಔಟ್ ರೂಲ್ಸ್ ರೆಗ್ಯೂಲೇಷನ್ ಮಾಡುವ ಹಾಗಿಲ್ಲ ಸರ್. ಅದಕ್ಕೆ ಕಾನೂನು ರೆಗ್ಯೂಲೇಷನ್ ಗೊತ್ತಿರಬೇಕು ಎಂದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಇದಾದ ಮೇಲೆ ಏನ್ ಮಾಡ್ತಿರಾ..? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಹೆಚ್ಚಿನವರು ಎಂಬಿಎ ಮಾಡ್ತೀವಿ ಎಂದಿದ್ದಾರೆ. 'ಅದರಲ್ಲಿ ಏನ್ ಏನಿರುತ್ತೆ?' ಎನ್ನುವ ಪ್ರಶ್ನೆಗೆ, 'ಫೈನಾನ್ಸ್, ಹೆಚ್ ಆರ್ ಎಲ್ಲ ಇರುತ್ತೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಫೈನಾನ್ಸ್ ಅಂದ್ರೆ ಏನು..? ನಮ್ಮ ಶೆಟ್ರು ಅಂಗಡಿ ನಡೆಸಲ್ವಾ.. ಅವರಿಗಿಂತ ಫಿನಾನ್ಸ್ ಬೇಕಾ..? ಚೆನ್ನಾಗಿ ಓದಿ, ಚೆನ್ನಾಗಿ ಓದಿದ್ರೆ ಒಳ್ಳೆ ಕೆಲಸ ಸಿಗುತ್ತೆ. ಒಳ್ಳೆ ಕಂಪನಿ ಸಿಗುತ್ತೆ ಎಂದು ಪರಮೇಶ್ವರ್‌ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡೀಲಿ ಸಿಗಲ್ಲ: ಡಿ.ಕೆ.ಶಿವಕುಮಾರ್‌

ಈ ವೇಳೆ ಕೆಲ ವಿದ್ಯಾರ್ಥಿನಿಯರನ್ನು ಮುಂದೆ ಕರೆದು ತುಮಕೂರು ಜಿಲ್ಲಾಧಿಕಾರಿಯವರನ್ನು ತೋರಿಸಿ, ಇವರು ಗೊತ್ತಾ ನಿಮಗೆ ಎಂದು ಪ್ರಶ್ನೆ ಮಾಡಿದ್ದಾರೆ. 'ನಮಗೆ ಗೊತ್ತಿಲ್ಲ' ಎಂದು ವಿದ್ಯಾರ್ಥಿಯರು ಹೇಳಿದ್ದಲಕ್ಕೆ. 'ಹೀಗಾದರೆ ಹೇಗೆ ಇವರು ಡೆಪ್ಯುಟಿ ಕಮೀಷನರ್ ,ಐಎಎಸ್ ಮಾಡಿದ್ದಾರೆ, ಶುಭಕಲ್ಯಾಣ್ ಅಂತ ಇವರ ಹೆಸರು. ಇವರು ಕಮಿಷನರ್ ಇವರು ಐಎಎಸ್ ಮಾಡಿದ್ದಾರೆ, ಅಶ್ವಿಜಾ ಅಂತ ಇವರ ಹೆಸರು. ಅವರ ಯಜಮಾನ್ರು ಇವರು ಅಶೋಕ್ ವೆಂಕಟ್, ಐಪಿಎಸ್ , ಪೊಲೀಸ್ ಸೂಪರಿಟೆಂಡೆಂಟ್‌, ಇವರನ್ನ ಎಸ್ ಪಿ ಅಂತಾರೆ ಇವೆಲ್ಲಾ ಗೊತ್ತಿಲ್ಲವಾ ನಿಮಗೆ. ವಿದ್ಯಾರ್ಥಿಗಳಿಗೆ ನೀವು ತಿಳಿದುಕೊಂಡಿರ್ತಿರಾ.. ಹೊದೆ ಗೀದೆ ಬಿದ್ದವು ಅಂತ ತಿಳಿದುಕೊಂಡಿರ್ತಿರಾ.. ಬಿಬಿಎ ಮಾಡಿ ಐಎಎಸ್ ಮಾಡಿ ನೀವು ಅವರ ತರ ಆಗ್ತಿರಾ.. ಗುಡ್ ಲಕ್ ಎಂದು ವಿದ್ಯಾರ್ಥಿಗಳಿಗೆ ಪರಮೇಶ್ವರ್‌ ಶುಭ ಹಾರೈಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರು ಬದಲಾಗ್ತಾರೋ, ಇಲ್ವೋ?: ಪರಂ, ರಾಜಣ್ಣ, ಸತೀಶ್‌ರಿಂದ ಹೈಕಮಾಂಡ್‌ಗೆ ಪ್ರಶ್ನೆ