Tumakuru: ತಿಪಟೂರು ಠಾಣೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ಭೇಟಿ
ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರರವರು ರಾತ್ರಿ ನಗರಠಾಣೆಗೆ ದಿಡೀರ್ ಭೇಟಿ ನೀಡಿ ಇಲ್ಲಿನ ಪೊಲೀಸರ ಅಸಹಾಯಕತೆ ಹಾಗೂ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಿಪಟೂರು (ಡಿ.18): ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರರವರು ರಾತ್ರಿ ನಗರ ಠಾಣೆಗೆ ದಿಡೀರ್ ಭೇಟಿ ನೀಡಿ ಇಲ್ಲಿನ ಪೊಲೀಸರ ಅಸಹಾಯಕತೆ ಹಾಗೂ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಅಕ್ರಮ ಚಟುವಟಿಕೆಗಳಿಗೆ ನೀವೇ ಶಾಮೀಲಾದರೆ ಸಾರ್ವಜನಿಕರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಕಸಾಯಿಖಾನೆಗಳಿಗೆ ರವಾನೆಯಾಗುತ್ತಿರುವ ಗೋವುಗಳನ್ನು ರಕ್ಷಿಸುವ ಸ್ವಯಂಸೇವಕ ಸಂಘದ ಮುಖಂಡರು ಶುಕ್ರವಾರ ನಗರಠಾಣೆಗೆ ಬಂದು, ನಗರದ ಗಾಂಧೀನಗರದ ಬಳಿ ಅಕ್ರಮವಾಗಿ ಗೋಮಾಂಸ ಮಾರಾಟಕ್ಕೆ ಗೋವುಗಳನ್ನು ಕಡಿದು ಮಾರಲಾಗುತ್ತಿದ್ದರೂ ನೀವು ಕ್ರಮ ಜರುಗಿಸುತ್ತಿಲ್ಲ ಎಂದು ದೂರು ಹೇಳಿ ಕೂಡಲೆ ನಮ್ಮ ಜೊತೆ ಸ್ಥಳಕ್ಕೆ ಆಗಮಿಸಿ ಗೋವುಗಳನ್ನು ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ನಗರಠಾಣಾ ಪೊಲೀಸರು ತಡವಾಗಿ ಅವರ ಮನವಿಗೆ ಸ್ಪಂದಿಸಿ ಕಸಾಯಿಖಾನೆಗೆ ಹೋಗಿದ್ದು, ಆ ಸಂದರ್ಭದಲ್ಲಿ ಪೊಲೀಸರ ಎದುರಿನಲ್ಲೇ ಕಸಾಯಿಖಾನೆ ಕಡೆಯವರು ಗೋರಕ್ಷಣಾ ಸ್ವಯಂಸೇಕರಿಕೆಗೆ ಬೆದರಿಕೆ ಹಾಕಿದ್ದಲ್ಲದೆ, ಕೈಮಿಲಾಯಿಸಿ ಗಲಾಟೆ ಮಾಡಿದರೆಂದು ತಿಳಿದು ಬಂದಿದ್ದು, ಈ ಸಂಬಂಧ ನಗರಠಾಣೆಯಲ್ಲಿ ದೂರನ್ನು ಸಹ ಸ್ವಯಂಸೇವಕರು ದಾಖಲಿಸಿದ್ದಾರೆ.
ಓಲೈಕೆಗಾಗಿ ಉಗ್ರನ ಪರ ಡಿಕೆಶಿ ವಕಾಲತ್ತು: ಸಚಿವ ಆರಗ ಜ್ಞಾನೇಂದ್ರ
ಈ ಸಂದರ್ಭದಲ್ಲಿ ಸ್ವಯಂಸೇವಕರು ಕೂಡಲೆ ಗಲಾಟೆಗೆ ಬಂದವರ ವಿರುದ್ಧ ಕ್ರಮ ಜರುಗಿಸಿ ಬಂಧಿಸಬೇಕೆಂದು ಪಟ್ಟು ಹಿಡಿದಾಗ, ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸಿ ಕಸಾಯಿಖಾನೆ ಕಡೆಯವರ ಪರವಾಗಿ ಮೃದುವಾಗಿ ಮಾತನಾಡಿ ನಾವು ಕ್ರಮ ಜರುಗಿಸುತ್ತೇವೆ ನೀವು ಹೋಗಿ ಎಂದು ಹೇಳಿದ್ದಕ್ಕೆ ಪ್ರತಿಯಾಗಿ, ಸ್ವಯಂಸೇವಕರು ಕೂಡಲೆ ಗೃಹ ಸಚಿವರಿಗೆ ದೂರವಾಣಿ ಮೂಲಕ ನಡೆದ ಘಟನೆಯನ್ನು ತಿಳಿಸಿ ನಿಮ್ಮ ಪೊಲೀಸರು ಕಸಾಯಖಾನೆಯವರನ್ನು ರಕ್ಷಿಸುತ್ತಿದ್ದು, ನೀವು ಕೂಡಲೆ ಇಲ್ಲಿನ ಪೊಲೀಸರ ಮೇಲೆ ಕ್ರಮಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಗೃಹಸಚಿವರು ಸಹ ಶುಕ್ರವಾರವೇ ತಮ್ಮ ಕೇತ್ರಕ್ಕೆ ಬೆಂಗಳೂರಿನಿಂದ ತಿಪಟೂರು ಮಾರ್ಗವೇ ಶಿವಮೊಗ್ಗಕ್ಕೆ ಹೋಗಬೇಕಾಗಿದ್ದು, ಮಾರ್ಗಮಧ್ಯೆ ತಿಪಟೂರು ನಗರಠಾಣೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ನಗರ ವ್ಯಾಪ್ತಿಯಲ್ಲಿ ಅಕ್ರಮ ಗೋ ಹತ್ಯೆ ಸೇರಿದಂತೆ, ಪುಟ್‌ಪಾತ್ ಸಮಸ್ಯೆ, ಅಕ್ರಮ ಚಟುವಟಿಕೆಗಳಿಗೆ ಪೊಲೀಸರ ನೆರವು, ಕಳ್ಳತನಗಳ ಹೆಚ್ಚಳ ಸೇರಿದಂತೆ ಕಾನೂನು ಪಾಲನೆ ಸರಿಯಾಗಿ ಮಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ನಡೆದ ಕಸಾಯಿಖಾನೆ ಗಲಾಟೆಯಲ್ಲಿ ಪೊಲೀಸರಾದ ನಿಮ್ಮ ಮುಂದೆಯೇ ಸ್ವಯಂಸೇವಕರಿಗೆ ಕಸಾಯಿಖಾನೆ ಕಡಯವರು ಬೆದರಿಕೆ ಹಾಕಿ ಕೈಮಾಡಲು ಹೋದ ಬಗ್ಗೆ ಹಾಗೂ ಆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ನಿಮ್ಮ ವೈಫಲ್ಯ ಹಾಗೂ ಅಸಹಾಯಕತೆ ಸರಿಯಲ್ಲ ಎಂದು ಗೃಹ ಸಚಿವರು ನಗರಠಾಣಾ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಜಿಲ್ಲಾ ಎಸ್ಪಿಯವರಿಗೆ ನಡೆದ ಘಟನೆ ಬಗ್ಗೆ ವಿವರವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ ಮತ್ತಿತರರಿದ್ದರು.
ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಚಿಂತನೆ: ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವಗೆ ಜನರ ದೂರು: ಗೃಹ ಸಚಿವರು ನಗರಠಾಣೆಗೆ ಬಂದಿರುವ ವಿಷಯ ಇಲ್ಲಿನ ಕೆಲ ಸಾರ್ವಜನಿಕರಿಗೆ ಹಾಗೂ ಭಜರಂಗದಳದವರಿಗೂ ತಿಳಿದು ಠಾಣೆ ಮುಂದೆ ಜಮಾಯಿಸಿ ಇಲ್ಲಿನ ಪೊಲೀಸರ ದುರ್ವರ್ತನೆ ಹಾಗೂ ಅಸಹಾಯಕತೆ ಬಗ್ಗೆ ಸಚಿವರಿಗೆ ಸಾರ್ವಜನಿಕವಾಗಿ ದೂರು ಹೇಳಿದರು. ನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಪೊಲೀಸರು ಸಹಕಾರ ನೀಡಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಸಚಿವರು ಸುಮಾರು ಒಂದೂವರೆ ತಾಸುಗಳ ಕಾಲ ಪೊಲೀಸ್ ಠಾಣೆಯಲ್ಲಿ ಕೆಲ ಮಾಹಿತಿಗಳನ್ನು ಪಡೆದುಕೊಂಡರು.