Asianet Suvarna News Asianet Suvarna News

Karnataka Cabinet : ಸಂಪುಟದಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಕೈಬಿಡಲು ಆಗ್ರಹ

  • ರಾಜ್ಯದ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ 
  • ಸಚಿವ ಸಂಪುಟದಿಂದ ಆರಗ ಜ್ಞಾನೇಂದ್ರ  ಕೈ ಬಿಡುವಂತೆ ಆಗ್ರಹ
Home minister araga Jnanedra  Should quit portfolio Says Mysuru KR Bank Vice President snr
Author
Bengaluru, First Published Dec 6, 2021, 11:45 AM IST

ಮೈಸೂರು(ಡಿ.06):  ರಾಜ್ಯದ ಪೊಲೀಸರ ( karnataka Police) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanedra) ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಕೆ.ಆರ್‌. ಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ್‌ (Basavaraj) ಅವರು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದ್ದಾರೆ.  ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ರಾಜ್ಯ ಪೊಲೀಸರ (Karnataka Police) ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವುದು ಇಡೀ ಪೊಲೀಸ್‌ (Police) ವ್ಯವಸ್ಥೆಯ ಅವಹೇಳನ ಮಾಡಿದಂತಾಗಿದೆ. ಪೋಲಿಸ್‌(Police) ಈ ಇಲಾಖೆಯಲ್ಲೂ ದಕ್ಷ, ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳಿದ್ದಾರೆ. ಅಂತಹ ಅಧಿಕಾರಿಗಳಿಂದಾಗಿ ಇಲಾಖೆ ಜನ ಸಾಮಾನ್ಯರಲ್ಲಿ ಇನ್ನೂ ಗೌರವವಿದ್ದು, ಅವರ ಪ್ರಾಣವನ್ನು ಲೆಕ್ಕಿಸದೆ ಕೊರೋನಾ (Corona) ವಾರಿಯರ್ಸ್‌  ಆಗಿ ಸೇವೆ ಮಾಡಿರುವುದನ್ನು ಗೃಹ ಸಚಿವರು ಅರಿಯಬೇಕು. ಯಾರೋ ಒಬ್ಬಿಬ್ಬರು ತಪ್ಪಿಗೆ ಎಲ್ಲಾ ಪೊಲೀಸರನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಗೃಹ ಸಚಿವರು ಅವಹೇಳನಕಾರಿ ಮಾತುಗಳಿಂದ ಪ್ರಾಮಾಣಿಕ ಪೋಲಿಸ್‌ ಅಧಿಕಾರಿಗಳು ಮತ್ತು ಅವರ ಕುಟುಂಬದವರು ಮಾನಸಿಕವಾಗಿ ನೊಂದಿದ್ದಾರೆ. ಅವರ ಮನಸ್ಸಿಗೆ ಘಾಸಿ ಉಂಟಾಗಿದೆ. ಜವಾಬ್ದಾರಿಯುತವಾಗಿ ಮಾತನಾಡದ ಹಿನ್ನೆಲೆ ಗೃಹ ಸಚಿವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗೃಹ ಸಚಿವರು ಹೇಳಿದ್ದೇನು :

‘ಈ ರೀತಿ ದನ ರೆಗ್ಯುಲರ್ ಕಳ್ಳ ಸಾಗಾಣಿಕೆ ಮಾಡುವವರು ಯಾರೆಂದು ನಿಮ್ಮವರಿಗೆ ಗೊತ್ತಿರುತ್ತೆ. ಲಂಚ (Bribe) ತಿನ್ಕೊಂಡು ಅವರ ಜೊತೆ ಬಿದ್ದಿರ್ತಾರೆ ನಾಯಿ ಹಂಗೆ. ಎಂಜಲು ಕಾಸಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಯೋಗ್ಯತೆ ಇಲ್ಲ ದಿದ್ದರೆ ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ ಮನೆ ಕಡೆ.’ - ಅಕ್ರಮ ಗೋ ಸಾಗಣೆ ಮತ್ತು ಗೋ ಕಳ್ಳರು ಹೆಚ್ಚುತ್ತಿರುವ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು (Senior Police Officer ) ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga jnanendra) ತರಾಟೆಗೆ ತೆಗೆದುಕೊಂಡ ಪರಿಯಿದು. 

ಗೃಹ ಸಚಿವರ ಕ್ಷೇತ್ರದಲ್ಲಿ ಗೋ ಕಳ್ಳರನ್ನು ತಡೆಯಲು ಬಂದ ಹಿಂದೂಪರ ಸಂಘಟನೆಯ ಇಬ್ಬರು ಕಾರ್ಯಕರ್ತರ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಇಲಾಖೆಯ ವಿರುದ್ಧ ಕೆಂಡಾ ಮಂಡಲವಾಗಿರುವ ವೀಡಿಯೋ ಇದೀಗ ವೈರಲ್ ಆಗಿದೆ. ‘ಈ ರೀತಿ ದನ ರೆಗ್ಯುಲರ್ ಕಳ್ಳ ಸಾಗಾಣಿಕೆ ಮಾಡುವವರು ಯಾರೆಂದು ನಿಮ್ಮವರಿಗೆ ಗೊತ್ತಿರುತ್ತೆ. 

ಲಂಚ ತಿನ್ಕೊಂಡು ಅವರ ಜೊತೆ ಬಿದ್ದಿರ್ತಾರೆ ನಾಯಿ (Dog) ಹಂಗೆ. ಪೊಲೀಸರಿಗೊಂದು (police) ಆತ್ಮ ಗೌರವ ಬೇಕಲ್ಲವಾ? ನಾನು ಗೃಹ ಸಚಿವನಾಗಿ(Home Minister) ಇರಬೇಕೋ ಬೇಡವೋ? ನಿಮ್ಮದು ಚಿಕ್ಕಮಗಳೂರು (Chikkamagaluru) ಜಿಲ್ಲೆ, ನನ್ನದು ಶಿವಮೊಗ್ಗ ಜಿಲ್ಲೆ(Shivamogga). ಕೆಟ್ಟು ಹಾಳಾಗಿ ಹೋಗಿದ್ದಾರೆ ಎಲ್ಲ ಪೊಲೀಸ್ರು. ಇಲಾಖೆ ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತಿದೆ. ಸಂಬಳದಲ್ಲಿ ಬದುಕಲು ಆಗದ ಸ್ಥಿತಿಯೇನೂ ಇಲ್ಲ. ಆದರೂ ಎಂಜಲು ಕಾಸಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. 

ಯೋಗ್ಯತೆ ಇಲ್ಲದಿದ್ದರೆ ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ ಮನೆ ಕಡೆ.’ ‘ಕೊಟ್ಟಿಗೆ ಬಂದು ತಲವಾರು ತೋರಿಸಿ ಜಾನುವಾರು ಹೊತ್ತೊಯ್ಯುತ್ತಾರೆ ಎಂದರೆ ಹೇಗೆ?’  ಹೀಗೆ ಆಕ್ರೋಶ ಭರಿತವಾಗಿ ಮಾತುಗಳನ್ನು ಆಡಿದ್ದಾರೆ. ಗೃಹ ಸಚಿವರು ಎಲ್ಲಿ ಈ ಮಾತು ಆಡಿದ್ದಾರೆ, ಯಾರ ಜೊತೆ ಮಾತನ್ನಾಡಿದ್ದಾರೆ ಎಂದು ಗೊತ್ತಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ(Thirthahalli) ಬೆಂಬಲಿಗರ, ಮುಖಂಡರ ಜೊತೆ ಕಚೇರಿಯಲ್ಲಿ ಈ ಮಾತು ಆಡಿದ್ದಾರೆ ಎನ್ನಲಾಗಿದೆ.

ಶೀಘ್ರ ಸಂಪುಟ ವಿಸ್ತರಣೆ: ಯಡಿಯೂರಪ್ಪ ಸುಳಿವು

  ದಾವಣಗೆರೆ: ರಾಜ್ಯ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗುವ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(yediyurappa) ಸುಳಿವು ನೀಡಿದ್ದಾರೆ. ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಆದರೆ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೀರ್ಮಾನಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ತಾಲೂಕಿನ ಆನಗೋಡು ಗ್ರಾಮದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟವಿಚಾರ. ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಮುಖ್ಯಮಂತ್ರಿ ಅವರೇ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಮೊದಲಿಗೆ 29 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಆ ಬಳಿಕ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ಕೊಟ್ಟಾಗಲೆಲ್ಲ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಲೇ ಇದ್ದವು. ಆದರೆ ವರಿಷ್ಠರ ಜತೆ ಆ ಕುರಿತು ಚರ್ಚೆ ನಡೆದಿರುವ ಸಾಧ್ಯತೆಗಳನ್ನು ಬೊಮ್ಮಾಯಿ ತಳ್ಳಿಹಾಕುತ್ತಾ ಬಂದಿದ್ದರು. ಆದರೆ ಇದೀಗ ಸ್ವತಃ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಈ ವಿಚಾರ ಪ್ರಸ್ತಾಪಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Follow Us:
Download App:
  • android
  • ios