ತೋಟಗಳಿಗೆ ನುಗ್ಗಿದ ಎಚ್‌ಎನ್ ವ್ಯಾಲಿ ನೀರು : ರೈತರ ಆಕ್ರೋಶ
- ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತ
- ಕೆರೆಗಳಿಗೆ ತುಂಬಬೇಕಾದ ಹೆಬ್ಬಾಳ ನಾಗವಾರ ಸಂಸ್ಕರಿತ ಕೊಳಚೆ ನೀರು ರೈತರ ವಾಣಿಜ್ಯ ತೋಟಗಳಿಗೆ ನುಗ್ಗಿ ಬೆಳೆ ನಾಶ
- ಬೆಳೆ ನಾಶವಾಗುತ್ತಿರುವುದು ಇದೀಗ ಅನ್ನದಾತರ ಆಕ್ರೋಶ
ಚಿಕ್ಕಬಳ್ಳಾಪುರ (ಜು.18): ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಕಾರಣಕ್ಕೆ ಕೆರೆಗಳಿಗೆ ತುಂಬಬೇಕಾದ ಹೆಬ್ಬಾಳ ನಾಗವಾರ ಸಂಸ್ಕರಿತ ಕೊಳಚೆ ನೀರು ರೈತರ ವಾಣಿಜ್ಯ ತೋಟಗಳಿಗೆ ನುಗ್ಗಿ ಬೆಳೆ ನಾಶವಾಗುತ್ತಿರುವುದು ಇದೀಗ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಚಲಕಾಯಲಪರ್ತಿ ಗ್ರಾಮದ ರೈತರ ತೋಟಗಳಿಗೆ ಎಚ್‌ಎನ್ ವ್ಯಾಲಿ ಸಂಸ್ಕರಿತ ಕೊಳಚೆ ನೀರು ನುಗ್ಗಿರುವ ಪರಿಣಾಮ ಅಪಾರ ಪ್ರಮಾಣದ ಟೊಮೆಟೋ, ದ್ರಾಕ್ಷಿ, ಗುಲಾಬಿ ಹೂವು ಮತ್ತಿತರ ವಾಣಿಜ್ಯ ಬೆಳೆಗಳು ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಕೊಳಚೆ ನೀರು ನುಗ್ಗಿ ಬೆಳೆ ನಷ್ಟ
ಜಿಲ್ಲೆಯಲ್ಲಿ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯಡಿ ಸಮರ್ಪಕವಾಗಿ ಕೆರೆ ಹಾಗೂ ಕಾಲುವೆಗಳ ಸಮಗ್ರ ಅಭಿವೃದ್ಧಿಗೂ ಮೊದಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಗಳ ಮೂಲಕ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯಡಿ ನೀರನ್ನು ಹರಿಸಿದ್ದಾರೆ. ಇದರ ಪರಿಣಾಮ ಕೆರೆಗಳನ್ನು ತುಂಬಬೇಕಿದ್ದ ಕೊಳಚೆ ನೀರು ಈಗ ರೈತರು ಸಾಲ ಸೋಲ ಮಾಡಿ ಲಕ್ಷಾಂತರ ರು, ಬಂಡವಾಳ ಹಾಕಿ ಬೆಳೆದ ಬೆಳೆಗಳಿಗೆ ನುಗ್ಗಿ ಹಾನೀಯಾಗಿದ್ದು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಿದೆ.
ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಮಾಡಲು ತೀರ್ಮಾನ
ರೈತರಲ್ಲಿ ಆತಂಕ, ಆಕ್ರೋಶ: ಮೊದಲೇ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯಡಿ ತ್ಯಾಜ್ಯ ನೀರು ಕೇವಲ ಎರಡು ಹಂತದಲ್ಲಿ ಮಾತ್ರ ಶುದ್ಧೀಕರಿಸಲಾಗುತ್ತಿದೆ. ಹೀಗಾಗಿ ಕೊಳಚೆ ನೀರು ಅಪಾರ ಪ್ರಮಾಣದ ತ್ಯಾಜ್ಯ ಕೊಳಚೆ ನೀರು ಕೆರೆಗಳಿಗೆ ಹರಿಯದೇ ರೈತರ ಬೆಳೆಗಳಿಗೆ ಹರಿದು ಇಡೀ ತೋಟಗಳು ಕೆರೆಗಳಾಗಿರುವುದಕ್ಕೆ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮೊದಲೇ ರಸಾಯನಿಕ ಮಿಶ್ರಿತ ಕೊಳಚೆ ನೀರು ಬಗ್ಗೆ ಜಿಲ್ಲೆಯ ಜನರಲ್ಲಿ ಆತಂಕ ಇರುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳಚೆ ನೀರು ತೋಟಗಳಿಗೆ ನುಗ್ಗಿ ಲಕ್ಷಾಂತರು ರು ಬಂಡವಾಳ ಸುರಿದು ರೈತರು ಬೆಳೆದ ಬೆಳೆಗಳು ನಾಶವಾಗಿರುವುದಕ್ಕೆ ಈಗ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಇತ್ತಕಡೆ ಗಮನ ಹರಿಸಿ ಕೊಳಚೆ ನೀರು ಕೆರೆಗಳಿಗೆ ಹರಿಯುವಂತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮಣ್ಣು ಪರೀಕ್ಷಾ ಕೇಂದ್ರ ತೆರೆಯಲು ನಿರ್ಲಕ್ಷ್ಯ : ರೈತರ ಪರದಾಟ
ಸ್ಥಳಕ್ಕೆ ಬಾರದ ಅಧಿಕಾರಿಗಳು : ಕೋಟ್ಯಂತರ ರು.ಗಳ ವೆಚ್ಚದ ಎಚ್‌ಎನ್ ವ್ಯಾಲಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರಿಗೆ ಮಾರಕವಾಗಿದೆ. ಇಷ್ಟೆಲ್ಲ ಅನಾಹುತವಾದರೂ ಗುತ್ತಿಗೆದಾರರಾಗಲೀ ಅಥವಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದ ಯಾವೊಬ್ಬ ಅಧಿಕಾರಿಯೂ ಇತ್ತ ಧಾವಿಸುತ್ತಿಲ್ಲ.
ಸರ್ಕಾರಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಯೋಜನೆಯನ್ನು ಹೇಗಾದರೂ ಮಾಡಿ ಅನುಷ್ಠಾನಗೊಳಿಸಬೇಕೆಂದು ಹಠಕ್ಕೆ ಬಿದ್ದಂತಿದೆಯೇ ಹೊರತು ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಉಸಿರಿಗಾಗಿ ಹಸಿರು ಟ್ರಸ್ಟ್‌ನ ಮುಖ್ಯಸ್ಥ ಗಂಗಧಾರರೆಡ್ಡಿ ಕಿಡಿಕಾರಿದರು.
ಇನ್ನು ಎಚ್.ಎನ್. ವ್ಯಾಲಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಂದ ರೈತರು ಹೊಲಕ್ಕೆ ಹೋಗಲು ಇದ್ದ ದಾರಿಗಳು ಮುಚ್ಚಿಹೋಗಿವೆಂಬ ಆರೋಪ ಕೇಳಿ ಬಂದಿದೆ.