ಬೆಂಗಳೂರು [ಡಿ.04]:  ಕಾರಿನಲ್ಲಿ ಬಂದು ನಗರದಲ್ಲಿ ಮನೆಗಳ್ಳತನ ಕೃತ್ಯ ಎಸಗುತ್ತಿದ್ದ ಕುಖ್ಯಾತ ಅಂತರ್‌ ರಾಜ್ಯ ಖದೀಮನೊಬ್ಬ ಕೆ.ಆರ್‌.ಪುರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾನೆ.

ಸಿಗೇಹಳ್ಳಿ ನಿವಾಸಿ ಯಶವಂತ ರೆಡ್ಡಿ ಅಲಿಯಾಸ್‌ ವಂಶಿ ರೆಡ್ಡಿ ಬಂಧಿತ, ಚಿನ್ನಾಭರಣ ಸೇರಿದಂತೆ 17.4 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಯಶವಂತರೆಡ್ಡಿ ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವನು. 

ಜನ ವಸತಿ ಪ್ರದೇಶಗಳಲ್ಲಿ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುವುದು ಆತನ ಕೃತ್ಯವಾಗಿತ್ತು. ಹೀಗೆ ಬೆಂಗಳೂರು, ಆಂಧ್ರಪ್ರದೇಶದಲ್ಲಿ ರೆಡ್ಡಿ ವಿರುದ್ಧ ಕಳ್ಳತನ ಕೃತ್ಯಗಳು ದಾಖಲಾಗಿವೆ. ಜನವರಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಬೆನ್ನಹತ್ತಿದ್ದಾಗ ಹೆದರಿ ಆತ ನಗರ ತೊರೆದಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ಆತನನ್ನು ಆಂಧ್ರಪ್ರದೇಶದ ಪೊಲೀಸರು ಸೆರೆ ಹಿಡಿದು ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದು ಸಿಗೇಹಳ್ಳಿಯಲ್ಲಿ ನೆಲೆಸಿದ್ದ ಆತ, ಕೆ.ಆರ್‌.ಪುರ ವ್ಯಾಪ್ತಿಯಲ್ಲಿ ಮನೆಗಳ್ಳತನ ಶುರು ಮಾಡಿದ್ದ.