ಅಕ್ರಮ ಚಟುವಟಿಕೆಗಳ ತಾಣವಾದ ಹೈಟೆಕ್ ಮೀನು ಮಾರುಕಟ್ಟೆ
ನಗರದಲ್ಲಿರುವ ಹೈಟೆಕ್ ಮೀನು ಮಾರುಕಟ್ಟೆಸುತ್ತಲೂ ಜಾಲಿಗಿಡಗಳು ಬೆಳೆದಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
ಯಾದಗಿರಿ (ಮೇ.29) : ನಗರದಲ್ಲಿರುವ ಹೈಟೆಕ್ ಮೀನು ಮಾರುಕಟ್ಟೆಸುತ್ತಲೂ ಜಾಲಿಗಿಡಗಳು ಬೆಳೆದಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
ಹೈಟೆಕ್ ಮೀನು ಮಾರುಕಟ್ಟೆ(Hitech fish market yadgir)ಯ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೈಟೆಕ್ ಮೀನು ಮಾರುಕಟ್ಟೆಯು 1 ಕೋಟಿ ರು. ವೆಚ್ಚದಲ್ಲಿ ಕಳೆದ ವರ್ಷದಲ್ಲಿ ಸಿದ್ಧಗೊಂಡಿದ್ದು, ಮನವಿ ಮೂಲಕ ಒತ್ತಾಯ ಮಾಡಿದ ನಂತರ ಅಂದಿನ ಸಚಿವ ಎಸ್. ಅಂಗಾರ ಸ್ಥಳಕ್ಕೆ ಆಗಮಿಸಿ ಹೈಟೆಕ್ ಮೀನು ಮಾರುಕಟ್ಟೆಉದ್ಘಾಟಿಸಿದ್ದರು.
ಶಹಾಪುರದ ರೈತ ಭವನ ಈಗ ಪಾಳು ಬಂಗಲೆ; ಅನೈತಿಕ ಚಟುವಟಿಕೆ ತಾಣ!
ಆದರೆ, ರಸ್ತೆ ಇಲ್ಲದ ಕಾರಣಕ್ಕೆ ಅದು ಇನ್ನು ಪ್ರಾರಂಭಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದುವರೆಗೆ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗದೆ ಇರುವುದು ಶೋಚನಿಯ ಸಂಗತಿ. ರಾತ್ರಿ ವೇಳೆ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕುಡುಕರು ಮದ್ಯ ಸೇವಿಸಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಡಿದ್ದು ಕಂಡುಬರುತ್ತಿದೆ. ಕಟ್ಟಡದ ಸುತ್ತಲೂ ಜಾಲಿ ಗಿಡುಗಳು ಬೆಳೆದಿದ್ದು, ಕಿಡಿಗೇಡಿಗಳು ಕಲ್ಲು ಹೊಡೆದು ಕಿಟಕಿ ಹಾಳು ಮಾಡುವ ಸಂಭವಗಳಿ ಇವೆ.
ಮಾರುಕಟ್ಟೆಯಲ್ಲಿ ಮೀನು ಸಂಗ್ರಹಣೆ ಮಾಡಲು ಕೋಲ್ಡ್ ಸ್ಟೋರೆಜ್ ಇದ್ದು, ಎಸಿ ಅಳವಡಿಸಲಾಗಿದೆ. ಇದಕ್ಕೂ ಸಹ ಕಿಡಿಗೇಡಿಗಳಿಂದ ಅಪಾಯ ತಗುಲುವ ಸಾಧ್ಯತೆ ಇದೆ. ಬಳಕೆಗೆ ಬರುವ ಮೊದಲೆ ಮಾರುಕಟ್ಟೆಹಾಳಾಗಿ ಹೋಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ 45 ಡಿಗ್ರಿ ಸೆಲ್ಸಿಯಸ್ ಬಿಸಿಲಿದೆ. ಎಲ್ಲರೂ ನೆರಳಲ್ಲಿ ಇರುವಂತೆ ಜಿಲ್ಲಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡುತ್ತಾರೆ.
ಆದರೆ, ಶಾಸ್ತಿ್ರ ವೃತ್ತದಲ್ಲಿ ಬಿಸಿಲಿನಲ್ಲಿಯೇ ಮೀನು ಮಾರಾಟಗಾರರು ಬದುಕುತ್ತಿದ್ದಾರೆ. ಅವರ ಉಪಜೀವನವೇ ಮೀನು ಮಾರಾಟವಾಗಿದೆ. ಇವರಿಗೆ ಮೀನು ಮಾರುಕಟ್ಟೆಯ ಸ್ವಚ್ಛತೆಯನ್ನು ಕಾಪಾಡಿ, ಸರಿಯಾದ ರಸ್ತೆ ವ್ಯವಸ್ಥೆ ಮಾಡಿಸಿ, ಬಳಕೆಗೆ ತಿಳಿಸಿದಲ್ಲಿ ಮೀನು ಮಾರುವ ಮಹಿಳೆಯರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದಿದ್ದಾರೆ.
ಯಾದಗಿರಿ ಜಿಲ್ಲೆಗೆ ಒಲಿದ ಸಚಿವ ಸ್ಥಾನದ ಗರಿ: ಸಣ್ಣ ಕೈಗಾರಿಕಾ ಸಚಿವರಾಗಿ ದರ್ಶನಾಪುರ
ಕೂಡಲೇ ಈ ಬಗ್ಗೆ ಗಮನಹರಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲದಿದ್ದಲ್ಲಿ ಬಿಸಿಲಿನಲ್ಲಿ ಕುಳಿತು ವ್ಯಾಪಾರ ಮಾಡುವ ಮಹಿಳೆಯರಿಗೆ ಏನಾದರೂ ಹೆಚ್ಚು ಕಮ್ಮಿ ಆದಲ್ಲಿ ಮೀನುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.