ಹಿರಿಯೂರು ತರಕಾರಿ ವ್ಯಾಪಾರಿ ಮಗಳಿಗೆ ಚಿನ್ನದ ಪದಕ, ಸಾಧನೆಗೆ ಸಲಾಂ!
ಈಕೆಯ ಸಾಧನೆಯನ್ನು ಕೊಂಡಾಡಲೇಬೇಕು/ ತರಕಾರಿ ಮಾರುವ ಬಡ ವ್ಯಾಪಾರಿ ಮಗಳಿಗೆ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯಲ್ಲಿ ಚಿನ್ನದ ಪದಕ/ ಚಿತ್ರದುರ್ಗ ಜಿಲ್ಲೆಯ ಯುವತಿಯ ಸಾಧನೆಗೆ ಸಲಾಂ
ಚಿತ್ರದುರ್ಗ(ಫೆ. 07) ವಿದ್ಯೆ ಎಂಬುದು ಯಾರ ಸ್ವತ್ತು ಅಲ್ಲ ಅದಕ್ಕೆ ನಿದರ್ಶನವೆಂಬಂತೆ ಕೋಟೆನಾಡಿನ ಹಿರಿಯೂರಿನ ವಿದ್ಯಾರ್ಥಿನಿ ಲಲಿತಾ ತನ್ನ ತಂದೆ ತಾಯಿ ತರಕಾರಿ ಮಾರಿ ಕಷ್ಟದಲ್ಲಿ ವಿಧ್ಯಾಭ್ಯಾಸ ಮಾಡಿಸಿದಕ್ಕೂ ಸಾರ್ಥಕವೆಂಬಂತೆ ಬೆಂಗಳೂರಿನ ಪ್ರಸಿದ್ದ ವಿಟಿಯು ವಿಶ್ವವಿದ್ಯಾಲಯದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕಠಿಣ ಪರಿಶ್ರಮ, ನಮ್ಮ ತಂದೆ ತಾಯಿಯರ ಕಷ್ಟದ ದಿನಗಳೇ ನನ್ನ ಈ ಸಾಧನೆಗೆ ಸ್ಫೂರ್ತಿ. ನಾನೇನು ಮಾಡಿರೋದು ಇನ್ನೂ ಚಿಕ್ಕದು ಮುಂದೆ ಇನ್ನೂ ದೊಡ್ಡದಾದ ಕೆಲಸ ಮಾಡಬೇಕೆನ್ನುವ ಮಹಾದಾಸೆಯಿದೆ ಮಾಡುತ್ತೇನೆ. ತಂದೆ ತಾಯಿಗೆ ಕೀರ್ತಿ ತರುತ್ತೇನೆ ಅಂತಾರೆ.
ಎಟಿಎಂ ಗಾರ್ಡ್ ಪುತ್ರನಿಗೆ ಚಿನ್ನದ ಪದಕ, ನೋಡಿ ಸಾಧಕ
ಇನ್ನೂ ಈ ಬಗ್ಗೆ ತಂದೆ ತಾಯಿಯನ್ನ ಕೇಳಿದ್ರೆ ಸಂತೋಷದಿಂದ ಕಷ್ಟದ ದಿನಗಳು ನೆನೆಯುತ್ತ ಕಣ್ಣುಗಳು ಒದ್ದೆಯಾಗಿಯೇ ಬಿಡುತ್ತವೆ. ಒಟ್ಟಾರೆಯಾಗೆ ಯಾವುದೇ ವಿದ್ಯಾರ್ಥಿಗಳು ತಂದೆ ತಾಯಿಗೆ ಉತ್ತಮೆ ಕೀರ್ತಿ ತಂದು ಕೊಡಿ ಅವರ ಕಷ್ಟಕ್ಕೆ ಆಸರೆಯಾಗಿ ಎಂದು ತಿಳಿಸಿದರು.
ಮೊದಲ ಮಗಳು ಲಲಿತಾ ವಿಟಿಯುಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾಳೆ. ಎರಡನೇ ಮಗಳು ಭುವನಾ ಬೆಂಗಳೂರಿನ ಡ್ರೀಮ್ ಜೋನ್ ಕಾಲೇಜಿನಲ್ಲಿ ಫ್ಯಾಷನ್ ಡಿಸೈನರ್ ಕೋರ್ಸ್ ಮಾಡುತ್ತಿದ್ದಾಳೆ. ಕೊನೆಯ ಮಗಳು ತುಳಸಿ ಹಿರಿಯೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಡಿಪ್ಲೋಮಾ ಓದುತ್ತಿದ್ದಾಳೆ ಎಂದು ರಾಜೇಂದ್ರ ಹಾಗೂ ಆರ್.ಚಿತ್ರಾ ದಂಪತಿ ವಿವರಿಸುತ್ತಾರೆ.
"