ಹಿರೇಕೆರೂರು(ಡಿ.01): ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹೆಲಿಕಾಪ್ಟರ್ ನಲ್ಲಿ ಬರ್ತಾರೆ ಹೋಗುತ್ತಾರೆ. ಅವರು ಬಂದು ನಮ್ಮ ಕ್ಷೇತ್ರ ನೋಡಿಕೊಂಡು ಹೋಗಲಿ, ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದಲ್ಲಿ ಇಂದು ಡಿಕೆಶಿ ಪ್ರಚಾರ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್ ಅವರು ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿ.ಕೆ ಹರಿಪ್ರಸಾದ್ ಮತ್ತೇ ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಹೇಳಿರುವುದು ನಾಟಕವಾಗಿದೆ. ಜನರ ಮನಸ್ಸು ಒಡೆಯಲು ಇವೆಲ್ಲಾ ನಾಟಕ, ನಮಗೆ ಈ‌ ಬಾರಿ ಅಲ್ಪಸಂಖ್ಯಾತ ಮತಗಳು ಹೆಚ್ಚು ಬರುತ್ತವೆ. ನಮ್ಮ ಕ್ಷೇತ್ರದಲ್ಲಿ‌ ಜಾತಿಮತ ಬೇಧ ಏನು ಇಲ್ಲ, ಎಲ್ಲಾ ಸಮಾಜದವರು ನಮ್ಮ ಜೊತೆಯಲ್ಲಿದ್ದಾರೆ ಎಂದು ಈ‌ ಬಾರಿ ಗೆಲುವು ಖಚಿತ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ವೇಳೆ ಮಾತನಾಡಿದ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು, ಬಿ ಸಿ ಪಾಟೀಲ್ ಒಂದು ಆನೆ ಇದ್ದಂತೆ, ಅವರು ಎಲ್ಲ ಚುನಾವಣೆಗಳಿಗಿಂತ ಹೆಚ್ಚು ಅಂತರದಲ್ಲಿ ಗೆಲ್ಲುತ್ತಾರೆ. ಬಿ ಸಿ ಪಾಟೀಲ್ ಹಾಗೂ ಯು.ಬಿ ಬಣಕಾರ್ ಜೋಡೆತ್ತಿನ ರೀತಿ ಕೆಲಸ ಮಾಡುತ್ತಿದ್ದಾರೆ. ಬಿ ಸಿ ಪಾಟೀಲ್ ಈ ಬಾರಿ 40 -50 ಸಾವಿರ ಅಂತರದಿಂದ ಗೆಲ್ಲುತ್ತಾರೆ. ಡಿಸೆಂಬರ್ 12 ರಂದು ಸಚಿವರಾಗೋದು ಗ್ಯಾರಂಟಿ, ಕ್ಷೇತ್ರದ ಜನ ಸ್ವಾಗತಕ್ಕೆ ಸಿದ್ಧವಾಗುವಂತೆ ಕರೆ ನೀಡಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.