‘ಕೆಟ್ಟ ಸಮ್ಮಿಶ್ರ ಸರ್ಕಾರ ತೆಗೆಯಲು ನಾವು ಮಾಡಿರುವ ತ್ಯಾಗ ತಾಲೂಕಿಗೆ ವರ’

ದೋಸ್ತಿ ಸರ್ಕಾರದಲ್ಲಿ ಪಾಲುದಾರರು ಸುಳ್ಳು ಹೇಳುತ್ತಾ ತಾಲೂಕಿಗೆ ಯಾವುದೇ ಅನುದಾನ ನೀಡದೇ ಅನ್ಯಾಯ ಮಾಡಿದರು| ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಅಭಿವೃದ್ಧಿಗೆ ಅನುದಾನ ನೀಡುವ ಕಾಮಧೇನು ಆಗಿದ್ದು, ಕೇವಲ ನೂರು ದಿನಗಳಲ್ಲಿ ತಾಲೂಕಿಗೆ .250 ಕೋಟಿಗಿಂತ ಹೆಚ್ಚು ಅನುದಾನ ನೀಡಿದ್ದಾರೆ| ತಾಲೂಕಿನ ಅಭಿವೃದ್ಧಿಯ ಯುಗ ಆರಂಭವಾದ್ದು, ನಾನು ರಾಜೀನಾಮೆ ಕೊಟ್ಟಿದಕ್ಕೂ ಸಾರ್ಥಕವಾಯಿತು ಎಂದ ಪಾಟೀಲ|
 

Hirekerur BJP Candidate B C Patil Talks Over ByElection

ಹಿರೇಕೆರೂರು[ಡಿ.01]:  ಕೆಟ್ಟ ಸಮ್ಮಿಶ್ರ ಸರ್ಕಾರ ತೆಗೆಯಲು ನಾವು ಮಾಡಿರುವ ತ್ಯಾಗ ತಾಲೂಕಿಗೆ ವರವಾಗಿ ಪರಿಣಮಿಸಿದ್ದು, ಕ್ಷೇತ್ರದಲ್ಲಿ ಎಲ್ಲೆಡೆ ಬಿಜೆಪಿ ಪರವಾದ ಅಲೆ ಬೀಸುತ್ತಿದೆ. ನನ್ನ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಟ್ಟೀಹಳ್ಳಿ ತಾಲೂಕಿನ ಬಸರೀಹಳ್ಳಿ, ಸೋಮನಹಳ್ಳಿ, ಕಳಗೊಂಡ, ನೂಲಗೇರಿ, ಬುರಡೀಕಟ್ಟಿ, ಡಮ್ಮಳ್ಳಿ, ಸೀತೆಕೊಂಡ, ಜಾವಳ್ಳಿ, ಹೊಲಬಿಕೊಂಡ, ಕಾಲ್ವೀಹಳ್ಳಿ, ಆರೀಕಟ್ಟಿ, ಬೆಟಕೇರೂರ, ಅರಳಿಕಟ್ಟಿ, ದೂಪದಹಳ್ಳಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೋಸ್ತಿ ಸರ್ಕಾರದಲ್ಲಿ ಪಾಲುದಾರರು ಸುಳ್ಳು ಹೇಳುತ್ತಾ ತಾಲೂಕಿಗೆ ಯಾವುದೇ ಅನುದಾನ ನೀಡದೇ ಅನ್ಯಾಯ ಮಾಡಿದರು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಅಭಿವೃದ್ಧಿಗೆ ಅನುದಾನ ನೀಡುವ ಕಾಮಧೇನು ಆಗಿದ್ದು, ಕೇವಲ ನೂರು ದಿನಗಳಲ್ಲಿ ತಾಲೂಕಿಗೆ .250 ಕೋಟಿಗಿಂತ ಹೆಚ್ಚು ಅನುದಾನ ನೀಡಿದ್ದಾರೆ. ತಾಲೂಕಿನ ಅಭಿವೃದ್ಧಿಯ ಯುಗ ಆರಂಭವಾದ್ದು, ನಾನು ರಾಜೀನಾಮೆ ಕೊಟ್ಟಿದಕ್ಕೂ ಸಾರ್ಥಕವಾಯಿತು. ಯು.ಬಿ. ಬಣಕಾರ ಅವರ ತ್ಯಾಗವೂ ದೊಡ್ಡದೇ. ತಾಲೂಕಿನ ಅಭಿವೃದ್ಧಿಗೆ ನಾವು ಇಬ್ಬರೂ ಒಂದಾಗಿದ್ದೇವೆ. ಇಬ್ಬರು ಒಟ್ಟಾಗಿ ತಾಲೂಕನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗುತ್ತೇವೆ. ಗೆಲುವಿನ ಅಂತರ ಹೆಚ್ಚಿಸಲು ಎಲ್ಲರೂ ಶ್ರಮವಹಿಸಿ ದುಡಿಯೋಣ ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಅವರ ಗೆಲುವು ನಿಶ್ಚಿತವಾಗಿದೆ. ನಮ್ಮ ತಾಲೂಕಿನ ಮೇಲೆ ಯಡಿಯೂರಪ್ಪನವರು ವಿಶೇಷ ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಅತಿ ಹೆಚ್ಚಿನ ಮತದಿಂದ ಬಿ.ಸಿ. ಪಾಟೀಲರನ್ನು ಆಯ್ಕೆ ಮಾಡಿ ಕಳಿಸುವ ಮೂಲಕ ಅವರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವ ಜತೆಗೆ ಯಡಿಯೂರಪ್ಪನವರ ಕೈ ಬಲಪಡಿಸಬೇಕು ಎಂದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಸ್‌.ಆರ್‌. ಅಂಗಡಿ, ಜಿಪಂ ಸದಸ್ಯ ಎನ್‌.ಎಂ. ಈಟೇರ, ಶಿವರಾಜ ಹರಿಜನ, ತಾಪಂ ಅಧ್ಯಕ್ಷ ರಾಜು ಬಣಕಾರ, ಎಸ್‌.ಎಸ್‌. ಪಾಟೀಲ, ಲಿಂಗರಾಜ ಚಪ್ಪರದಳ್ಳಿ, ಮಹೇಶ ಗುಬ್ಬಿ, ಕುಮಾರ ಪ್ಯಾಟೇರ್‌, ಅನಿಲ್‌ ಪಾಟೀಲ, ರವಿ ಖಂಡಿಬಾಗೂರ, ರುದ್ರಗೌಡ ಹಳ್ಳಪ್ಪಗೌಡರ, ನಾಗರಾಜ ಹಿರೇಮಠ, ಶಿವಕುಮಾರ ಹಿರೇಮಠ, ರಾಘು ರಂಗಕ್ಕನವರ, ಮನೋಜ ಹಾರ್ನಳ್ಳಿ, ಡಿ.ಸಿ. ಪಾಟೀಲ, ಪ್ರತಾಪ ಕೆ.ಜಿ, ಸಂತೋಷ ಹಳಪ್ಪಗೌಡರ, ವಿಜಯಕುಮಾರ ಮಡಿವಾಳರ ಸೇರಿದಂತೆ ಇತರರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Latest Videos
Follow Us:
Download App:
  • android
  • ios