ಕಗ್ಗೊಲೆಗಳ ಹಿನ್ನೆಲೆ ಕರ್ನಾಟಕದಲ್ಲಿ ಹಿಂದುತ್ವ ಜಾಗೃತಿ: ಈಶ್ವರಪ್ಪ ಹೇಳಿಕೆ
ಉತ್ಸವಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಯುವಜನ ಇದೇ ಮೊದಲು, ಹಿಂದೂ ಯುವಕರ ಕಗ್ಗೊಲೆ ಯಾವೊಬ್ಬ ಹಿಂದೂ ಯುವಕನೂ ಸಹಿಸುವುದಿಲ್ಲ: ಈಶ್ವರಪ್ಪ
ಶಿವಮೊಗ್ಗ(ಸೆ.10): ಹಿಂದೂ ಯುವಕರ ಕಗ್ಗೊಲೆ ಆಗುತ್ತಿರುವುದನ್ನು ಯಾವೊಬ್ಬ ಹಿಂದೂ ಯುವಕನೂ ಸಹಿಸುವುದಿಲ್ಲ. ಈ ಕಾರಣಕ್ಕೆ ರಾಜ್ಯದಲ್ಲಿ ಹಿಂದುತ್ವ ಜಾಗೃತಿಯಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವವಣಿಗೆಗೆ ಈ ರೀತಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಂಡಿರುವುದು ಇತಿಹಾಸದಲ್ಲಿ ಇದೇ ಮೊದಲು. ಇದಕ್ಕೆ ಕಾರಣ ಹಿಂದು ಸಮಾಜ ಜಾಗೃತಿಗೊಂಡಿರುವುದು ಎಂದರು.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಸುತ್ತಮುತ್ತಲಿನ ಭಾಗದ ಯುವಕರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲರೂ ಶಾಂತ ರೀತಿಯಲ್ಲಿ ಸಾಗುತ್ತಾ ಭಾರತ್ ಮಾತಾಕೀ ಜೈ, ವಂದೇ ಮಾತರಂ, ನಾವೆಲ್ಲ ಹಿಂದು, ವೀರ ಸಾವರ್ಕರ್ ಜಿಂದಾಬಾದ್, ವೀರ ಶಿವಮೂರ್ತಿ ಜಿಂದಾಬಾದ್ ಮುಂತಾದ ಘೋಷಣೆ ಕೂಗುತ್ತ ಮಹಾಪುರುಷರ ನೆನಪು ಮಾಡಿಕೊಳ್ಳುತ್ತಿದ್ದಾರೆ. ಯುವಕರ ಉತ್ಸಾಹ ಸಂತೋಷವನ್ನುಂಟು ಮಾಡಿದೆ ಎಂದರು.
ಪ್ರಾಯಶ್ಚಿತ್ತಕ್ಕಾಗಿ ಕಾಂಗ್ರೆಸ್‌ನಿಂದ ಭಾರತ್ ಜೋಡೋ ಪಾದಯಾತ್ರೆ: ಈಶ್ವರಪ್ಪ ವ್ಯಂಗ್ಯ
ಮೆರವಣಿಗೆಯಲ್ಲಿ ಭಾಗವಹಿಸಿರುವ ಯುವಕರನ್ನು ನೋಡಿದರೆ ಭಾರತಾಂಬೆ ರಕ್ಷಣೆ ಮಾಡುವವರು ಎಂದೆನಿಸುತ್ತಿದೆ. ಎಲ್ಲ ಸಮಾಜದ ಜನರು ಮೆರವಣಿಗೆಗೆ ಸೌಜನ್ಯ ರೀತಿಯಲ್ಲಿ, ಶಾಂತ ರೀತಿಯಲ್ಲಿ ಬೆಂಬಲ ನೀಡಿದ್ದಾರೆ. ಕೋವಿಡ್ ಹಾಗೂ ಇನ್ನಿತರೆ ಕಾರಣಕ್ಕೆ ಕಳೆದ 2 ವರ್ಷದಿಂದ ಮೆರವಣಿಗೆ ನಡೆದಿರಲಿಲ್ಲ. ಕೋವಿಡ್ ಆತಂಕ ಒಂದು ಕಡೆಯಾದರೆ, ಹಿಂದು ಯುವಕರ ಕಗ್ಗೊಲೆಯಿಂದ ಹಿಂದು ಸಮಾಜದಲ್ಲಿ ಉಂಟಾದ ಆಕ್ರೋಶವೆಲ್ಲಾ ಸೇರಿ ಹಿಂದುತ್ವ ಜಾಗೃತಿಯಾಗಿದೆ. ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಅತಿ ಹೆಚ್ಚು ಯುವಕರು ಪಾಲ್ಗೊಂಡಿದ್ದಾರೆ ಎಂದರು.