ಹಿಂದೂಗಳು ಮನೆಯಲ್ಲಿ ಖಡ್ಗ, ತಲ್ವಾರ್‌ ಇಟ್ಟುಕೊಳ್ಳಿ, ಗೋವು, ಅಕ್ಕ ತಂಗಿಯರ ರಕ್ಷಣೆಗೆ ಆಯುಧ ಬೇಕು ಎಂದು ಮುತಾಲಿಕ್‌ ಆರೋಪ ಮಾಡಿದ್ದಾರೆ. ಆಯುಧ ಇಟ್ಟೋರ ಬಂಧಿಸೋದಾದರೆ ಮೊದಲು ದುರ್ಗೆ, ಹನುಮನ ಬಂಧಿಸಲಿ ಎಂದು ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದ್ದಾರೆ. 

ಬಾಗಲಕೋಟೆ (ಫೆಬ್ರವರಿ 20, 2023): ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ಖಡ್ಗ, ತಲವಾರ್‌, ಮತ್ತಿತರ ಜೀವರಕ್ಷಕ ಆಯುಧಗಳನ್ನು ಇಟ್ಟುಕೊಳ್ಳಬೇಕು. ಆಯುಧಗಳನ್ನು ಇಟ್ಟುಕೊಂಡವರನ್ನೆಲ್ಲಾ ಬಂಧಿಸುವುದಾದರೆ ಮೊದಲು ಕೈಯಲ್ಲಿ ಹತ್ತಾರು ಆಯುಧಗಳನ್ನು ಹಿಡಿದ ದುರ್ಗಾದೇವಿಯನ್ನು, ಗದೆ ಹಿಡಿದ ಹನುಮಂತನನ್ನು ಬಂಧಿಸಲಿ ನೋಡೋಣ ಎಂದು ಶ್ರೀರಾಮ ಸೇನೆ ಮುಖಂಡ ಮುತಾಲಿಕ್‌ ಸವಾಲು ಹಾಕಿ​ದ್ದಾ​ರೆ.

ನಗ​ರ​ದಲ್ಲಿ ಭಾನು​ವಾ​ರ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂ​ಗಳು ಯಾರನ್ನೋ ಹೊಡೆಯಲು ಅಲ್ಲ, ಬದಲಿಗೆ ಗೋವುಗಳು ಹಾಗೂ ನಮ್ಮ ಅಕ್ಕ-ತಂಗಿಯರ ಹಾಗೂ ರಾಷ್ಟ್ರ, ಮಠ-ಮಂದಿರಗಳ ರಕ್ಷಣೆಗೆ ಆಯುಧಗಳನ್ನು ಬಳಸಬೇಕು ಎಂದ​ರು.

ಇದನ್ನು ಓದಿ: ಹಿಂದುಗಳನ್ನು ಕೊಲೆ ಮಾಡಿದವರನ್ನು ಸನ್ಮಾನಿಸುವುದೇ ಇಸ್ಲಾಂ ಸಂಸ್ಕೃತಿ: ಪ್ರಮೋದ್‌ ಮುತಾಲಿಕ್ ಆರೋಪ

ಇದೇ ವೇಳೆ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿದ ಅವ​ರು ಹಿಂದೂ ಕಾರ್ಯಕರ್ತರು, ಹೋರಾಟಗಾರರಿಗೆ ಹಾಗೂ ನನ್ನಂಥವ​ರಿಗೆ ಬಿಜೆಪಿಯಿಂದ ದ್ರೋಹ ಮಾಡಲಾಗಿದೆ. ನಮ್ಮ ರಕ್ತವನ್ನು ಬೆವರಾಗಿ ಹರಿಸಿ ಅಧಿಕಾರದ ಗದ್ದುಗೆಗೆ ಏರಿಸಿದ್ದಕ್ಕಾದರೂ ಕರುಣೆ ಇಲ್ಲದ ಬಿಜೆಪಿಗೆ ಈ ಬಾರಿಯ ಚುನಾ​ವ​ಣೆ​ಯಲ್ಲಿ ಕಾರ್ಕಳದಲ್ಲಿ ಸ್ಪರ್ಧಿಸಿ ಗೆದ್ದು ತೋರಿ​ಸು​ತ್ತೇವೆ ಎಂದು ಹೇಳಿ​ದ​ರು.

ಹಿಂದೂ ಹುಡು​ಗಿ​ಯ​ರಿ​ಗೂ ಉದ್ಯೋ​ಗ​: ಲವ್‌ ಜಿಹಾದ್‌ಗೆ ನಮ್ಮ ಒಬ್ಬ ಹುಡುಗಿ ಹೋದರೆ ನಮ್ಮ ತರುಣರು 10 ಮುಸ್ಲಿಮ್‌ ಹುಡುಗಿ¿ರನ್ನು ಕರೆತರುವ ತಾಕತ್ತು ಹೊಂದಿದ್ದಾರೆ. ಹಾಗೆ ಕರೆತಂದರೆ ಶ್ರೀರಾಮಸೇನೆ ಅಂಥ ಯುವಕರಿಗೆ ಉದ್ಯೋಗ ಒದಗಿಸಲು ನೆರವಾಗುವ ಜತೆಗೆ ರಕ್ಷಣೆಯನ್ನೂ ನೀಡಲಿದೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

ಇದನ್ನೂ ಓದಿ: ಗೋಹತ್ಯೆ, ಮತಾಂತರ ತಡೆಗೆ ಹೋರಾಟ ಅವಶ್ಯಕ: ಪ್ರಮೋದ್‌ ಮುತಾಲಿಕ್‌