ನಾಮ ಇಟ್ಟರೆ ಹಿಂದು​ವಲ್ಲ, ನಡ​ವ​ಳಿಕೆ ಹಿಂದು ಆಗ​ಬೇ​ಕು: ರಘು​ನಂದ​ನ್‌

ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಸೀಜನಲ್‌ ಹಿಂದುಗಳಲ್ಲ. ಜಗತ್ತೇ ಉಲ್ಟಾಹೊಡೆದರೂ ಹಿಂದು ನಾವು ಅನ್ನೋರೇ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಎಂದು ವೇದಿಕೆಯ ಪ್ರಜ್ಞಾ ಪ್ರವಾಹದ ಮುಖ್ಯಸ್ಥ ರಘುನಂದನ್‌ ಹೇಳಿದರು.

Hindu way of life should be adopted says raghunandan at shivamogga rav

ಶಿವಮೊಗ್ಗ (ಡಿ.26) : ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಸೀಜನಲ್‌ ಹಿಂದುಗಳಲ್ಲ. ಜಗತ್ತೇ ಉಲ್ಟಾಹೊಡೆದರೂ ಹಿಂದು ನಾವು ಅನ್ನೋರೇ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಎಂದು ವೇದಿಕೆಯ ಪ್ರಜ್ಞಾ ಪ್ರವಾಹದ ಮುಖ್ಯಸ್ಥ ರಘುನಂದನ್‌ ಹೇಳಿದರು.

ನಗರದ ಎನ್‌ಇಎಸ್‌ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ 3ನೇ ತ್ರೈಮಾಸಿಕ ಪ್ರಾಂತೀಯ ಕಾರ್ಯಕರ್ತರ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವರು ಹಿಂದುಗಳಾಗುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಮಾತ್ರ ಹಿಂದುಗಳಾಗುತ್ತಾರೆ. ಮತ್ತೆ ಕೆಲವರು ನಾಮ ಇಟ್ಟುಕೊಂಡು ಹಿಂದುಗಳಾಗುತ್ತಾರೆ. ನಾಮ ಇಟ್ಟುಕೊಂಡರೆ ಹಿಂದು ಆಗದು. ನಡವಳಿಕೆ ಹಿಂದು ಆಗಿರಬೇಕು. ಕನಸಿನಲ್ಲೂ ನಾನು ಹಿಂದು ಅನ್ನುವವರೇ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಎಂದರು.

News Hour Special: ಹಿಂದೂ ಹಿತಕ್ಕೆ ಧಕ್ಕೆ ತಂದರೆ ಸಹಿಲಿಲ್ಲ: ಜಗದೀಶ್ ಕಾರಂತ 'ಬೆಂಕಿ' ಮಾತು

 

ಜಗತ್ತಿನ ಶ್ರೇಷ್ಠ ಋುಷಿ ಪರಂಪರೆಯ ಪ್ರತಿನಿಧಿಗಳು ಹಿಂದೂಗಳು. ನಮ್ಮ ಪೂರ್ವಜರು ಯುದ್ಧ ಮಾಡಿದವರಲ್ಲ. ಜಗತ್ತಿನ ಕಲ್ಯಾಣಕ್ಕಾಗಿ ಜೀವನ ಕಳೆದವರು ನಮ್ಮ ಪೂರ್ವಜರು. ಹಿಂದು ಧರ್ಮಕ್ಕೆ ಅಪ್ಪ, ಅಮ್ಮ ಇಲ್ಲ. ಶಿವನಿಗೆ ಅಪ್ಪ, ಅಮ್ಮ ಇಲ್ಲ. ಹಾಗೆ ನಾವು ಕೂಡ ಶಿವನ ವಂಶಸ್ಥರು. ಹಿಂದು ಧರ್ಮ ಯಾರೋ ಹುಟ್ಟಿಸಿದ್ದೂ ಅಲ್ಲ. ಆ ಹೆಮ್ಮೆ ನಮಗೆಲ್ಲರಿಗೂ ಇರಬೇಕು ಎಂದು ಕರೆ ನೀಡಿದರು.

ಜಗತ್ತಿನ ಅತ್ಯಂತ ಪ್ರಾಚೀನ, ಶ್ರೇಷ್ಠ ಸಂತತಿ ಹಿಂದು. ಉಳಿದವರಿಗೆ ಯಾವ ಇತಿಹಾಸವಿದೆ? ನಮ್ಮ ಪೂರ್ವಜರು ನೀಡಿದ ಕೊಡುಗೆ ಅಪಾರ. ಋುಷಿ ಪರಂಪರೆ ನಮ್ಮದು ಅಂತ ವಿವೇಕಾನಂದ ಹೇಳಿದ್ದರು. ಯಹೂದಿಗಳನ್ನು ನಮ್ಮವರು ಅಂತ ಆಶ್ರಯ ನೀಡಿದ ಏಕೈಕ ದೇಶ ಭಾರತ. ಹಿಂದು ಧರ್ಮ, ಭಾರತ ದೇಶದ ಬಗ್ಗೆ ವಿವೇಕಾನಂದರಿಗೆ ಅಪಾರ ಹೆಮ್ಮೆಯಿತ್ತು ಕತ್ತುಗಳನ್ನು ಕೊಯ್ಯುವ ನಿಮ್ಮಂಥ ಪರಂಪರೆ ನಮ್ಮದಲ್ಲ ಎಂದು ಹೇಳಿದರು.

ಎಲ್ಲರನ್ನೂ ಪ್ರೀತಿಯಿಂದ ನೋಡುವ ಧರ್ಮ ನಮ್ಮದು. ನಮ್ಮಲ್ಲಿ ಮಾಡುವ ಯುದ್ಧ ಧರ್ಮಯುದ್ಧ. ಯುದ್ಧದಲ್ಲೂ ನೀತಿ-ನಿಯಮವಿದೆ. ಅಲೆಕ್ಸಾಂಡರ್‌ ದಿ ಗ್ರೇಟ್‌ ಅನ್ನೋರು ನೀಚರು. ರಾತ್ರಿ ಹೊತ್ತು, ಮಲಗಿದವರ ಮೇಲೆ ಯುದ್ಧ ಮಾಡಿದವನೇ ಅಲೆಕ್ಸಾಂಡರ್‌. ಯುದ್ಧಭೂಮಿ ಬಿಟ್ಟು ನಗರ, ಜನವಸತಿ ಪ್ರದೇಶದಲ್ಲಿ ಯುದ್ಧ ಮಾಡಿದ್ದನ್ನು ತೋರಿಸಿದ್ದು ಇಸ್ಲಾಮಿ ಜನ. ದೇವಸ್ಥಾನಗಳನ್ನು ಲೂಟಿ ಮಾಡಿದರು. ಆದರೆ, ನಮ್ಮ ಜನ ಅರ್ಥ ಮಾಡಿಕೊಳ್ಳಲಿಲ್ಲ. ಹೀಗಾಗಿ ನಾವು ನಮ್ಮ ಅರ್ಧ ಪ್ರದೇಶ, ಅರ್ಧ ಜನರನ್ನು ಕಳಕೊಂಡೆವು. ಆದರೂ, ನಾವು ನಮ್ಮ ದೇಶ, ಧರ್ಮ ನಾಶವಾಗಿಲ್ಲ. ಅದಕ್ಕೆ ಕಾರಣ ನಮ್ಮವರು ಧರ್ಮ, ದೇಶಕ್ಕಾಗಿ ಹೋರಾಡಿದವರು ಎಂದು ತಿಳಿಸಿದರು.

ಈ ದೇಶದಲ್ಲಿ ಕ್ರಿಶ್ಚಿಯನ್ನರು ಅತಿಕ್ರಮಣ ಮಾಡಿದರು. ಜನ ಗೋವಾದಿಂದ ಪಲಾಯನಗೈದರು. ಆದರೆ, ಅವರು ನಮ್ಮ ಸಂಸ್ಕೃತಿ ಬಿಡಲಿಲ್ಲ. ತಮ್ಮ ದೇವರನ್ನು ಬಿಟ್ಟು ಬರಲಿಲ್ಲ. ಆ ದೇವರನ್ನು ಹೊತ್ತುಕೊಂಡು ಬಂದರು. ರಾಣಿ ಅಬ್ಬಕ್ಕ ಹೋರಾಟದಿಂದ ಮಂಗಳೂರು ಉಳಿಯಿತು. ದೋಂಡಿಯಾ ವಾಘ್‌ ಹೋರಾಟದಿಂದ ಧರ್ಮ ಉಳಿಯಿತು. ಅನೇಕರ ಹೋರಾಟದಿಂದ ಹಿಂದುಸ್ತಾನ ಉಳಿಯಿತು, ಹಿಂದುಗಳು ಉಳಿದರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹರ್ಷ ಕಾಮಥ್‌, ದೋ ಕೇಶವ ಮೂರ್ತಿ, ಡಾ.ತೇಜಸ್ವಿ ಸೇರಿದಂತೆ ಹಿಂದೂ ಜಾಗರಣ ವೇದಿಕೆಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ನೆಲ ಹಿಂದೂಗಳಿಗೆ ಸೇರಿದ್ದು, ಸನಾತನ ಧರ್ಮ ಮಾತ್ರವೇ ಇಲ್ಲಿ ಉಳಿಯೋದು!

‘ಕಾಂತಾರ’ ಸಿನೇಮಾ ಬಂದ ನಂತರ ಹೊಸ ಹುಮ್ಮಸು ಬಂದಿದೆ. ದೈವ ಇದೆ ಅನ್ನೋದು ಗೊತ್ತಾಗುತ್ತಿದೆ. ಅಧ್ಯಾತ್ಮ, ಧರ್ಮ ಭಾರತದಲ್ಲಿ ಹಾಸುಹೊಕ್ಕಾಗಿದೆ. ಆದರೆ, ಒಂದು ದೇವರು ಇಟ್ಟುಕೊಂಡವರು ಜಗಳವಾಡ್ತಿದ್ದಾರೆ. ಇದು ಸರಿಯಲ್ಲ. ಕೋಟ್ಯಂತರ ದೇವರನ್ನು ಇಟ್ಟಕೊಂಡ ಭಾರತದವರು ಚೆನ್ನಾಗಿ ಬದುಕುತ್ತಿದ್ದಾರೆ. ಈ ದೇಶ ಅರ್ಥವಾಗಬೇಕಾದರೆ ಧರ್ಮ, ಅಧ್ಯಾತ್ಮ ಅರ್ಥ ಮಾಡಿಕೊಳ್ಳಬೇಕು

- ರಘು​ನಂದನ್‌, ಪ್ರಜ್ಞಾ ಪ್ರವಾ​ಹ ಮುಖ್ಯ​ಸ್ಥ, ಹಿಂಜಾವೇ

Latest Videos
Follow Us:
Download App:
  • android
  • ios