Asianet Suvarna News Asianet Suvarna News

ಉತ್ತರಕನ್ನಡ: ಶಿವ ದೇವಾಲಯದ ಅವಶೇಷಗಳ‌ನ್ನು ಪುಡಿ ಪುಡಿ ಮಾಡಿದ ಅನ್ಯಕೋಮಿನ‌ ದುಷ್ಕರ್ಮಿಗಳು..!

ಸೆ.18ರಂದು ಈ ಸ್ಥಳಕ್ಕೆ ಭೇಟಿ ನೀಡಿದ ದಾಂಡೇಲಿ ಮೂಲದ 6 ಮಂದಿ ಅನ್ಯಕೋಮಿನ ಯುವಕರು ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದಲ್ಲದೇ, ಅಲ್ಲಿ ತೆಂಗಿನ ಕಾಯಿಯನ್ನಿಟ್ಟು ಕಲ್ಲಿನಿಂದ ಒಡೆದು ಜಜ್ಜಿ ಹಾಕಿದ್ದಾರೆ. ಇದರಿಂದ ಹಿಂದೂ ಸಂಘಟನೆಗಳು‌ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Hindu Temple Damaged by Other Religion Miscreants in Uttara Kannada grg
Author
First Published Sep 23, 2023, 12:00 AM IST

ಭರತ್‌ ರಾಜ್ ಕಲ್ಲಡ್ಕ

ಉತ್ತರಕನ್ನಡ(ಸೆ.23): ರಾಜ್ಯದ ಕರಾವಳಿ ಭಾಗದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೃತ್ಯ‌‌‌ ಮತ್ತೆ ಮತ್ತೆ ನಡೆಯುತ್ತಿದೆ. ಇತ್ತೀಚೆಗಷ್ಟೇ ದಲಿತ ಮುಖಂಡನೋರ್ವ ಏಸುವನ್ನು ಪ್ರಶಂಸಿಸಿ ಹಿಂದೂ ದೇವರು, ದೇವತೆಗಳ ವಿರುದ್ಧ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದ. ಇದೀಗ ಅನ್ಯಕೋಮಿನ‌ ದುಷ್ಕರ್ಮಿಗಳು ಶಿವ ದೇವಾಲಯದ ಅವಶೇಷಗಳ‌ನ್ನು ಕಲ್ಲಿನಿಂದ ಪುಡಿ ಮಾಡುವ ಕೃತ್ಯ ಎಸಗಿ ಅಟ್ಟಹಾಸ ಮೆರೆದಿದ್ದಾರೆ‌. ಇದರಿಂದ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಈ ಯುವಕರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ..

ಹೌದು, ರಾಜ್ಯದ ಕರಾವಳಿ ಜಿಲ್ಲೆಯಾದ ಉತ್ತರಕನ್ನಡ‌‌ದಲ್ಲಿ ದುಷ್ಕರ್ಮಿಗಳಿಂದ ಮತ್ತೆ ಶಾಂತಿ ಕೆಡಿಸುವ ಪ್ರಯತ್ನಗಳು ನಡೆದಿವೆ. ಇತ್ತೀಚೆಗಷ್ಟೇ ದಲಿತ ಮುಖಂಡ ಎಂದೆನಿಸಿಕೊಂಡಿದ್ದ ಎಲಿಷಾ ಎಲಕಪಾಟಿ ಎಂಬಾತ ಏಸುವನ್ನು ಪ್ರಶಂಸಿಸಿ ಹಿಂದೂ ದೇವರು, ದೇವತೆಗಳ ವಿರುದ್ಧ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದ. ಬಳಿಕ ಎಚ್ಚೆತ್ತುಕೊಂಡ ಹಿಂದೂ ಸಂಘಟನೆಗಳ ಹೋರಾಟದಿಂದ ಆತ ಜೈಲಿನ‌ ಕಂಬಿ ಎಣಿಸುವಂತಾಯ್ತು.‌ ಘಟನೆ ನಡೆದು ತಿಂಗಳು ಕಳೆಯುವುದರಷ್ಟರಲ್ಲೇ ಇದೀಗ ಮತ್ತೆ ಹಿಂದೂ ಧಾರ್ಮಿಕ‌ ಭಾವನೆಗೆ ಧಕ್ಕೆ ತರುವ ಕೆಲಸಗಳು ಅನ್ಯಕೋಮಿನ ದುಷ್ಕರ್ಮಿಗಳಿಂದ‌ ನಡೆದಿದೆ.‌ 

ಬಿಜೆಪಿ ಯೋಜನೆಗಳ ಕ್ರೆಡಿಟ್ ಪಡೆದುಕೊಳ್ಳಲು ಯತ್ನಿಸುವುದು ಕಾಂಗ್ರೆಸ್ಸಿನ ಚಾಳಿ: ರೂಪಾಲಿ ನಾಯ್ಕ್

ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ ನಾಗೋಡಾ ಕ್ರಾಸ್ ಬಳಿ‌ ಕಾಳಿ ನದಿಯ ಸೂಪಾ ಜಲಾಶಯದ ಹಿನ್ನೀರಿನ ಭಾಗದಲ್ಲಿ ನೀರು ಕಡಿಮೆಯಾದಾಗ ಶಿವ ದೇವಾಲಯದ ಅವಶೇಷಗಳು ಹಾಗೂ ಈ ಹಿಂದೆ ಮುಳುಗಡೆಯಾಗಿದ್ದ ಮನೆಗಳ ಅವಶೇಷಗಳು ಕಾಣಿಸಿಕೊಳ್ಳುತ್ತವೆ. ಶಿವ ದೇವಾಲಯದ ಅವಶೇಷಗಳು ಕಂಡಾಗ ಇಲ್ಲಿರುವ ಲಿಂಗ ಹಾಗೂ ನಂದಿ ವಿಗ್ರಹಕ್ಕೆ ಸ್ಥಳೀಯರು ಪೂಜಿಸುತ್ತಾರೆ. ಆದರೆ, ಸೆ.18ರಂದು ಈ ಸ್ಥಳಕ್ಕೆ ಭೇಟಿ ನೀಡಿದ ದಾಂಡೇಲಿ ಮೂಲದ 6 ಮಂದಿ ಅನ್ಯಕೋಮಿನ ಯುವಕರು ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದಲ್ಲದೇ, ಅಲ್ಲಿ ತೆಂಗಿನ ಕಾಯಿಯನ್ನಿಟ್ಟು ಕಲ್ಲಿನಿಂದ ಒಡೆದು ಜಜ್ಜಿ ಹಾಕಿದ್ದಾರೆ. ಇದರಿಂದ ಹಿಂದೂ ಸಂಘಟನೆಗಳು‌ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಅಂದಹಾಗೆ, ಈ ದುಷ್ಕರ್ಮಿಗಳ ಪೈಕಿ ಹುಸೈನ್ ಶೇಖ್ ಎಂಬಾತ ಈ ಕೃತ್ಯವನ್ನು ಸೆಲ್ಫಿ ವಿಡಿಯೋ ಮಾಡಿ ತನ್ನ ಫೇಸ್‌ಬುಲ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದಂತೇ ರಾಮನಗರ ಹಾಗೂ ಜೊಯಿಡಾ ಭಾಗದ ಹಿಂದೂ ಸಮಾಜದ ಜನರು ಹಾಗೂ ಹಿಂದೂ ಸಂಘಟನೆಗಳು ಕೆರಳುವಂತೆ ಮಾಡಿದೆ. ಈ ಹಿನ್ನೆಯಲ್ಲಿ ಸ್ಥಳೀಯ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳ ಮುಖಂಡರು, 
ರಾಮನಗರ‌ ಪೊಲೀಸ್ ಠಾಣೆಗೆ ತೆರಳಿ, ದುಷ್ಕರ್ಮಿಗಳ ಕೃತ್ಯ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಹಿಂದೂ ಸಂಘಟನೆಯ ರಾಜ್ಯ ಮುಖಂಡರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಇಂತಹ ಕೃತ್ಯಗಳು ಹೆಚ್ಚಾಗಿದೆ. ರಾಜ್ಯದ‌ ಮುಖ್ಯಮಂತ್ರಿಗಳು ಟಿಪ್ಪು ಸುಲ್ತಾನನ ಅಭಿಯಾನಿಯಾಗಿದ್ದು, ಆತನನ್ನು ವೈಭವೀಕರಿಸುತ್ತಾರೆ. ಆದರೆ, ಟಿಪ್ಪು ಸುಲ್ತಾನನ ಚಿಂತನೆ ಹೊಂದಿರುವ ದುಷ್ಕರ್ಮಿಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ. ಮುಂದಕ್ಕೆ ಈ ರೀತಿಯಾಗದಂತೆ ಹಿಂದೂಗಳು ಯೋಚನೆ ಮಾಡಬೇಕಿದೆ. ರಾಮನಗರದಲ್ಲಿ ನಡೆದ ಘಟನೆಯಿಂದ‌ ಮುಂದಕ್ಕೆ ಧಾರ್ಮಿಕ ಗಲಭೆಗಳಾಗದಂತೆ ಸರಕಾರ‌ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಶಾಂತಿಯ ಪ್ರತೀಕವಾಗಿದ್ದ ಉತ್ತರನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಪದೇ ಪದೇ ಶಾಂತಿ ಕದಡಿಸುವ ಕೆಲಸಗಳು ನಡೆಯುತ್ತಿವೆ. ಪ್ರತೀ ಬಾರಿ ಹಿಂದೂಗಳ ಧಾರ್ಮಿಕ ಭಾವನೆಗೆ ಏಟು ನೀಡುವ ಕೃತ್ಯಗಳಾಗುತ್ತಿದ್ದು, ಇವುಗಳ‌ನ್ನು ತಡೆಗಟ್ಟದಿದ್ದಲ್ಲಿ ಮುಂದಿನ ದಿನಗಳಲ್ಲಿ ಉತ್ತರಕನ್ನಡ‌ ಜಿಲ್ಲೆಯಲ್ಲೂ ಕೋಮುಗಲಭೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

Follow Us:
Download App:
  • android
  • ios