Asianet Suvarna News Asianet Suvarna News

Conversion Row : 'ಕ್ರಿಸ್‌ ಮಸ್ ಮಾಡಲೇಬೇಕು' ಮಂಡ್ಯದ ಶಾಲೆಗೆ ಹಿಂದು ಸಂಘಟನೆ ಮುತ್ತಿಗೆ

* ಖಾಸಗಿ ಶಾಲೆಯಲ್ಲಿ ಕ್ರಿಸ್ ಮಸ್ ಆಚರಣೆ ಹಿನ್ನೆಲೆ. 
* ಶಾಲೆಗೆ ಮುತ್ತಿಗೆ ಹಾಕಿ ಕ್ರಿಸ್ ಮಸ್ ಆಚರಣೆಗೆ ಅಡ್ಡಿ.
* ಹಿಂದು ಪರ ಸಂಘಟನೆ ಕಾರ್ಯಕರ್ತರಿಂದ ಕ್ರಿಸ್ ಮಸ್ ಆಚರಣೆಗೆ ವಿರೋಧ.
* ಪಾಂಡವಪುರದ ನಿರ್ಮಲಾ ಕಾನ್ವೆಂಟ್ ನಲ್ಲಿ ಘಟನೆ

Hindu organizations picket Christian school alleging students were being converted Mandya mah
Author
Bengaluru, First Published Dec 24, 2021, 11:03 PM IST

ಮಂಡ್ಯ(ಡಿ. 24) ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಕ್ರಿಸ್ ಮಸ್ (Christmas)ಆಚರಣೆಗೆ ದೂಡಲಾಗುತ್ತಿದೆ ಎಂದು ಆರೋಪಿಸಿದ ಹಿಂದು (Hindu) ಸಂಘಟನೆ ಕಾರ್ಯಕರ್ತರು ಶಾಲೆಗೆ ಭೇಟಿ ನೀಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ಪಟ್ಟಣದಿಂದ ಘಟನೆ ವರದಿಯಾಗಿದೆ. ಕ್ರಿಸ್ ಮಸ್ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಆಕರ್ಷಿಸಲಾಗುತ್ತಿದೆ. ಇದರಿಂದ ಮಕ್ಕಳ ನಡುವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ. ಬಾಲ್ಯದಲ್ಲೇ ಕ್ರೈಸ್ತ ಧರ್ಮಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶಾಲಾ, ಕಾಲೇಜುಗಳು ಧರ್ಮಾತೀತವಾಗಿರಬೇಕು. ನಿರ್ಮಲ ಕಾನ್ವೆಂಟ್ ನಲ್ಲಿ ಕ್ರಿಸ್ ಮಸ್ ಆಚರಣೆ ಧರ್ಮ ಪ್ರಚಾರ ಮಾಡಲಾಗುತ್ತಿದೆ. ಕ್ರಿಸ್ ಮಸ್ ಆಚರಣೆ ಮಾಡಲೇಬೇಕು ಅನ್ನೋದಾದ್ರೆ ಹಿಂದೂ ದೇವರ ಭಾವಚಿತ್ರ ಹಾಕಬೇಕು ಎಂದು ಒತ್ತಾಯಿಸಿದರು.

ಕ್ರಿಸ್‌ಮಸ್ ಮಾಡ್ತೀವಿ ಗಣೇಶ ಹಬ್ಬದ ಮಾಡೋದಕ್ಕೆ ಅವಕಾಶ ಇಲ್ಲವೇ ಎಂದು ಶಾಲೆ ಮುಖ್ಯಸ್ಥೆಯನ್ನು ತರಾಟೆ ತೆಗೆದುಕೊಂಡರು.  ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿಗೆ ತರಾಟೆ ತೆಗೆದುಕೊಂಡು  ಕಾರ್ಯಕರ್ತರು ಹಿಂದು ದೆವರ ಪೋಟೋ ಅಳವಡಿಕೆ ಮಾಡಿ. ಶಾಲೆ ಎಂದ ಮೇಲೆ ಅದು ಒಂದು ಧರ್ಮಕ್ಕೆ ಸೀಮಿತವಾಗಬಾರದು ಎಂದರು.

ಏನಿದು ಮತಾಂತರ ನಿಷೇಧ ಕಾಯಿದೆ?

ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಕರಣದ ವಿಡಿಯೋ ಜೋರಾಗಿಯೇ ಹರಿದಾಡಿದೆ. ಪರ  ಮತ್ತು ವಿರೋಧಧ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆ  ಹಾಸನ ಜಿಲ್ಲೆಯಲ್ಲಿಯೂ ಜನರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. 

ಕ್ರೈಸ್ತ ಧರ್ಮಕ್ಕೆ (Christianity ) ಮತಾಂತರ ಆಗುವಂತೆ ಪ್ರೇರಣೆ ನೀಡುತ್ತಾ, ಪ್ರಚಾರ ಮಾಡುತ್ತಿದ್ದ ಪ್ರಚಾರಕರನ್ನು ಸ್ಥಳೀಯ ಯುವಕರು ಪೊಲೀಸರಿಗೆ (Police) ಒಪ್ಪಿಸಿದ ಪ್ರಕರಣ ಶ್ರೀನಿವಾಸಪುರದಿಂದ ವರದಿಯಾಗಿತ್ತು. ಬಹುತೇಕ ಹಿಂದು ಕುಟುಂಬಗಳೇ ವಾಸಿಸುವ ಹನುಮನ ಪಾಳ್ಯ, ಹಳೇಪೇಟೆ ನರಸಿಂಹ ಪಾಳ್ಯದಲ್ಲಿ ಆಂಧ್ರ ಪ್ರದೇಶ (Andhra Pradesh ) ನೋಂದಣಿಯ ವಾಹನದಲ್ಲಿ (Vehicle) ಬಂದ ನಾಲ್ವರು ಮೈಕ್‌ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ತೆಲುಗು (Telugu) ಭಾಷೆಯಲ್ಲಿ ಪ್ರಚಾರ ನಡೆಸುತ್ತಿದ್ದರು. ಮತಾಂತರವಾದರೆ ಸಿಗುವ ಅನುಕೂಲಗಳ ಕುರಿತಾಗಿ ಸಾರ್ವಜನಿಕವಾಗಿ ಪ್ರಚಾರ ಮಾಡುತ್ತ ಮನೆ ಮನೆಗೆ ತೆರಳಿ ಕ್ರೈಸ್ತ ಧರ್ಮದ ಕುರಿತ ಪುಸ್ತಕಗಳನ್ನು ಹಂಚುತ್ತಿದ್ದರು.

ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಧರ್ಮ (Religion) ಪ್ರಚಾರಕರ ಪರವಾದ ಮುಖಂಡನೊಬ್ಬ ಫೋನ್‌ನಲ್ಲಿ (Phone) ಸ್ಥಳೀಯರಿಗೆ ಆವಾಜ್‌ ಹಾಕಿದ್ದಾನೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಆ ಮುಖಂಡ ಸ್ಥಳಕ್ಕಾಗಮಿಸಿ ಧರ್ಮ ಪ್ರಚಾರಕರ ಪರ ವಾದಿಸಿದ್ದು, ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಪರಾರಿ ಆಗಿದ್ದಾನೆ. ಕೊನೆಗೆ ಪ್ರಚಾರಕರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಮತಾಂತರ ಕುರಿತ ಪುಸ್ತಕಗಳನ್ನು ಸಾರ್ವಜನಿಕರು ಸುಟ್ಟು ಹಾಕಿದ್ದಾರೆ. ಶ್ರೀನಿವಾಸಪುರ ಠಾಣೆಯಲ್ಲಿ (Shirinivasapira Police station) ಈ ಸಂಬಂಧ ಪ್ರಕರಣ ದಾಖಲಾಗಿತ್ತು. 

ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಮಸೂದೆ:  ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಮೇಲೆ ಅದು ಅನೇಕ ತಿರುವುಗಳನ್ನು ಪಡೆದುಕೊಂಡಿತ್ತು. ಅಂತಿಮವಾಗಿ ಬಲವಂತದ ಮತಾಂತರಕ್ಕೆ ತಡೆ ಕೋರುವ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗಿದ್ದು ಕರ್ನಾಟಕ ವಿಧಾನಸಭೆ ಪಾಸ್ ಮಾಡಿದೆ. ಇನ್ನು ಪರಿಷತ್ ನಲ್ಲಿ ಪಾಸ್ ಆಗಿ ರಾಜ್ಯಪಾಲರ ಅಂಕಿತಕ್ಕೆ ಹೋದರೆ ಕಾನೂನಾಗುತ್ತದೆ.

 

 

Follow Us:
Download App:
  • android
  • ios