* ಹಲಾಲ್‌ ಮಾಂಸ ಜತೆಗೆ ಇತರ ಉತ್ಪನ್ನಗಳ ನಿಷೇಧಕ್ಕೆ ಕರೆ* ಹಲಾಲ್‌ ಸರ್ಟಿಫಿಕೇಟ್‌ ನೀಡುವವರ ವಿರುದ್ಧವೂ ಹೋರಾಟ* ಮುಸ್ಲಿಮರು ಕೆತ್ತನೆ ಮಾಡಿದ ಮೂರ್ತಿ ಖರೀದಿ ಮಾಡಬೇಡಿ ಎಂದ ಸಂಘಟನೆಗಳು* ಹಿಜಾಬ್ ನಿಂದ ಆರಂಭವಾದ ವಿವಾದ

ಬೆಂಗಳೂರು(ಏ. 08) ಮಾಂಸ ಹಲಾಲ್‌ (Halal) ಕಟ್‌ ವಿರೋಧಕ್ಕೆ ಒಂದಿಷ್ಟುಬೆಂಬಲ ಸಿಕ್ಕ ಬೆನ್ನಲ್ಲೇ ಹಿಂದೂ (Hindu)ಪರ ಸಂಘಟನೆಗಳು ಹಲಾಲ್‌ ಗುರುತಿನ ದಿನಬಳಕೆ ವಸ್ತುಗಳು ಮತ್ತು ಆಹಾರ (Food) ಸಾಮಗ್ರಿಗಳ ಬಾಯ್ಕಾಟ್‌ಗೆ ಮುಂದಾಗಿವೆ. ಜತೆಗೆ ಹಲಾಲ್‌ ಕಡ್ಡಾಯ ಪ್ರಮಾಣ ಪತ್ರ ನೀಡುವ ಸಂಸ್ಥೆಗಳ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ಆರಂಭಿಸಿವೆ.

ಈಗಾಗಲೇ ಹಲಾಲ್‌ ಚಿಹ್ನೆ ಇರುವ ದಿನ ಬಳಕೆ ಮತ್ತು ಆಹಾರ ಸಾಮಗ್ರಿಗಳ ಪಟ್ಟಿಮಾಡಿದೆ. ಪ್ರಮುಖವಾಗಿ ಜಮ್‌ಹತ್‌ ಉಲ್ಮಾ ಹಲಾಲ್‌ ಫೌಂಡೇಷನ್‌ ಇಂಡಿಯಾ ಹಲಾಲ್‌ ಪ್ರಮಾಣ ಪತ್ರ ಐಸ್‌ಕ್ರಿಮ್‌, ಡೈರಿ ಉತ್ಪನ್ನಗಳು, ಹಲಾಲ್‌ ಅಕ್ರಿಡೇಷನ್‌ ಕೌನ್ಸಿಲ್‌ (ಎಚ್‌ಎಸಿ) ಪ್ರಮಾಣ ಪತ್ರ ನೀಡುವ 100ಕ್ಕೂ ಹೆಚ್ಚು ದಿನಸಿ ಸಾಮಗ್ರಿಗಳು ಮತ್ತು ದಿನ ಬಳಕೆ ವಸ್ತುಗಳು, ಮೊಟ್ಟೆಬಳಸಿ ತಯಾರಿಸುವ ಪ್ರಸಿದ್ಧ 10ಕ್ಕೂ ಅಧಿಕ ಚಾಕೊಲೇಟ್‌ ಬ್ರಾಂಡ್‌ಗಳನ್ನು ಗುರುತಿಸಲಾಗಿದೆ.

ಈ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿದ ಹಿಂದು ಜನ ಜಾಗೃತಿ ಸಮಿತಿ (Hindu Janajagruti Samiti) ವಕ್ತಾರ ಮೋಹನ್‌ ಗೌಡ, ‘ಈಗಾಗಲೇ ಹಲಾಲ್‌ ಪ್ರಮಾಣದ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಮಾಹಿತಿ ಹಕ್ಕಿನಡಿ (ಆರ್‌ಟಿಐ) ಅಗತ್ಯ ದಾಖಲಾತಿ ಪಡೆದುಕೊಂಡಿದ್ದೇವೆ. ಹಲಾಲ್‌ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಾನ್ಯತೆ ಇಲ್ಲ. ಜತೆಗೆ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಐ) ಕೂಡಾ ಹಲಾಲ್‌ ಚಿಹ್ನೆ ಬಳಿಸುವ ಅಧಿಕಾರ ನೀಡಿಲ್ಲ. ಹಲಾಲ್‌ ಚಿಹ್ನೆಯು ಅಂಗೀಕೃತವಾಗಿಲ್ಲ. ಈ ಮೂಲಕ ಹಲಾಲ್‌ ಪ್ರಮಾಣ ಪತ್ರ ನೀಡುವ ಸಂಸ್ಥೆಗಳು ಕಾನೂನು ಬಾಹಿರವಾಗಿವೆ’ ಎಂದು ತಿಳಿಸಿದರು.

ಹಲಾಲ್‌ ಉದ್ದೇಶವೇ ಆರ್ಥಿಕ ಜಿಹಾದ್‌, ಹಿಂದೂ ಸಂಘಟನೆಗಳ ಅಭಿಯಾನ ಸಮರ್ಥಿಸಿಕೊಂಡ ಸಿ ಟಿ ರವಿ

ವಿರೋಧಕ್ಕೆ ಕಾರ್ಯಸೂಚಿ: ಕಾನೂನು ಹೋರಾಟಕ್ಕೂ ಮುನ್ನ ಹಲವು ಕಾರ್ಯಸೂಚಿಯನ್ನು ಕೊಳ್ಳಲಾಗಿದೆ. ಮೊದಲು ಆನ್‌ಲೈನ್‌, ನೇರ ಮಾರುಕಟ್ಟೆಯಲ್ಲಿ ಹಲಾಲ… ಉತ್ಪನ್ನಗಳನ್ನು ವಿರೋಧಿಸಲಾಗುವುದು. ಬಳಿಕ ಕರಪತ್ರ ಹಂಚುವ ಮೂಲಕ ಆಹಾರ ಸುರಕ್ಷತಾ ಜಾಗೃತಿಯನ್ನುಮೂಡಿಸಲಾಗುತ್ತದೆ. ಹಲಾಲ್… ಪ್ರಮಾಣ ಪತ್ರ ಹೆಸರಿನಲ್ಲಿ ವಾಮಮಾರ್ಗದಲ್ಲಿ ಸಂಗ್ರಹಿಸುತ್ತಿರುವ ಹಣದ ಬಗ್ಗೆ ತನಿಖೆಗೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುತ್ತದೆ. ಜತೆಗೆ ಹಿಂದು ಮಳಿಗೆದಾರರಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತದೆ. ಬಳಿಕ ನ್ಯಾಯಾಲಯದಲ್ಲಿ ಹಲಾಲ್ ಹೇರಿಕೆ ವಿರುದ್ಧ ಪ್ರಶ್ನಿಸಿ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಹಿಂದೂ ಪರ ಸಂಘಟನೆ ಸದಸ್ಯರು ತಿಳಿಸಿದರು.

ಸಂವಿಧಾನ ಪ್ರಕಾರ ವ್ಯಾಪಾರವನ್ನು ಲಿಂಗ, ಜಾತಿ, ಧರ್ಮದ ಹಿನ್ನೆಲೆಯಲ್ಲಿ ವಿಂಗಡಿಸಿ ಮಾಡುವಂತಿಲ್ಲ. ಇದು ನಿರ್ದಿಷ್ಟಸಮುದಾಯಕ್ಕೆ ಮೋಸ ಮಾಡಿದಂತಾಗುತ್ತದೆ. ಹಲಾಲ್‌ ಪ್ರಮಾಣ ಪತ್ರವು ಸಂವಿಧಾನ ಉಲ್ಲಂಘನೆ ಮಾಡುತ್ತದೆ. ಈಗಾಗಲೇ ವಕೀಲರ ಮೂಲಕ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇನ್ನು ಗ್ರಾಹಕರು ಕೂಡಾ ಹಲಾಲ್‌ ಬಲವಂತ ಹೇರಿಕೆ ಪ್ರಶ್ನಿಸಿ ನ್ಯಾಯಾಲದ ಮೊರೆ ಹೋಗಬಹುದು’ ಎಂದರು

ಮುಸ್ಲಿಮರು ಕೆತ್ತಿದ ವಿಗ್ರಹ ಬೇಡ: ವ್ಯಾಪಾರ ವಾರ್, ಹಲಾಲ್ ಬಳಿಕ ಈಗ ಮತ್ತೊಂದು ವಾರ್ ಶುರುವಾಗಿದೆ. ಮುಸ್ಲಿಮರು ಕೆತ್ತಿದ ವಿಗ್ರಹ ಖರೀದಿಸದಂತೆ ಅಭಿಯಾನ ಮಂಡ್ಯದಲ್ಲಿ ಶುರುವಾಗಿದೆ. ಮುಸ್ಲಿಮರು ಕೆತ್ತಿದ ವಿಗ್ರಹಗಳನ್ನು ದೇಗುಲಗಳಲ್ಲಿ ಪ್ರತಿಷ್ಠಾಪಿಸದಂತೆ ಒತ್ತಾಯ ಕೇಳಿ ಬಂದಿದೆ. ಈ ಒತ್ತಾಯ ಮೇಲುಕೋಟೆ ದೇವಾಲಯದಿಂದಲೇ ಬಂದಿದೆ. 

ಮೇಲುಕೋಟೆಯ 4 ನೇ ಸ್ಥಾನಿಕ ಶ್ರೀನಿವಾಸನ್ ಗುರೂಜಿ ಮನವಿ ಮಾಡಿದ್ದಾರೆ. ವಿಶ್ವಕರ್ಮ ಸಮುದಾಯದಿಂದಲೇ ವಿಗ್ರಹ ಖರೀದಿಗೆ ಒತ್ತಾಯಿಸಿದ್ದಾರೆ. ಏಪ್ರಿಲ್ 15 ರಿಂದ ರಾಜ್ಯ ಪ್ರವಾಸ ಮಾಡಿ ಜಾಗೃತಿ ಮೂಡಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.