Asianet Suvarna News Asianet Suvarna News

ಚಿಕ್ಕಮಗಳೂರು: ಸನಾತನ ಧರ್ಮ ಹೇಳಿಕೆ ಖಂಡಿಸಿ ಉದಯನಿಧಿ ಪ್ರತಿಕ್ರತಿ ದಹಿಸಿ ಪ್ರತಿಭಟನೆ

ಸನಾತನ ಹಿಂದೂ ಧರ್ಮದ ಅವಹೇಳನಕಾರಿ ಹೇಳಿಕೆ ಖಂಡಿಸಿ ಸಚಿವ ಉದಯನಿಧಿ ಸ್ವಾಲಿನ್ ಅಣುಕು ಶವಯಾತ್ರೆ ನಡೆಸಿ, ಅಣುಕು ಮೃತದೇಹಕ್ಕೆ ಹಗ್ಗ ಕಟ್ಟಿ, ಮೃತದೇಹದ ಮೇಲೆ ಮಂಡಕ್ಕಿ ತೂರಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ತದನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಪರ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ. 

Hindu Activists Protest Against Udhayanidhi Stalin Statement in Chikkamagaluru grg
Author
First Published Sep 6, 2023, 11:00 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.06):  ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಇಂದು ಚಿಕ್ಕಮಗಳೂರು  ನಗರದ ಅಜಾದ್ ವೃತದಲ್ಲಿ ಪ್ರತಿಭಟನೆ ನಡೆಸಿದರು. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅಣುಕು ಶವಯಾತ್ರೆ ನಡೆಸಿ ಪ್ರತಿಕ್ರತಿ ದಹಿಸಿ ಆಕ್ರೋಶ ಹೊರಹಾಕಿದರು. 

ಸ್ಟಾಲಿನ್ ಅಣುಕು ಮೃತದೇಹಕ್ಕೆ ಹಗ್ಗ ಕಟ್ಟಿ ಎಳೆದು ಆಕ್ರೋಶ : 

ಸನಾತನ ಹಿಂದೂ ಧರ್ಮದ ಅವಹೇಳನಕಾರಿ ಹೇಳಿಕೆ ಖಂಡಿಸಿ ಸಚಿವ ಉದಯನಿಧಿ ಸ್ವಾಲಿನ್ ಅಣುಕು ಶವಯಾತ್ರೆ ನಡೆಸಿ, ಅಣುಕು ಮೃತದೇಹಕ್ಕೆ ಹಗ್ಗ ಕಟ್ಟಿ, ಮೃತದೇಹದ ಮೇಲೆ ಮಂಡಕ್ಕಿ ತೂರಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ತದನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಪರ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ. ಭಾರತೀಯ ಸಂವಿಧಾನದಂತೆ ಪ್ರತಿಜ್ಞಾ ವಿಧಿಯನ್ನು ತಮಿಳುನಾಡಿನ ಸರ್ಕಾರದ ಮಂತ್ರಿಯಾಗಿ ಸ್ವೀಕರಿಸಿದ ಉದಯ ನಿಧಿ ಸ್ಟಾಲಿನ್ರವರು ಸೆಪ್ಟೆಂಬರ್ 2ರಂದು ನಡೆದ ಸತತ ಅಬಾಲಿಷನ್ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ ಸನಾತನ ಇಂದು ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತೆಯೂ ಹಿಂದು ಧರ್ಮವನ್ನು ಸೊಳ್ಳೆ, ಮಲೇರಿಯ, ಡೆಂಗ್ಯೂನಂತಹ ಕಾಯಿಲೆಗೆ ಹೋಲಿಸಿ ಭಾಷಣ ಮಾಡಿರುವುದನ್ನು ಖಂಡಿಸಿದರು.

ಚಿಕ್ಕಮಗಳೂರು: ಗೋವಾದಲ್ಲಿ ಪತ್ನಿ ಜೊತೆ ಫುಲ್ ರೌಂಡ್ಸ್, ಮನೆಗೆ ಬಂದ ಮರುದಿನವೇ ಹೆಂಡ್ತಿ ಕೊಂದ ಗಂಡ..!

ಅವಮಾನ ಅಪಮಾನ ಮಾನಹಾನಿ: 

ಸನಾತನ ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತಹ ಹೇಳಿಕೆ ನೀಡಿ ಹಿಂದುಗಳನ್ನು ಬೆದರಿಸುವ ,ಭಯ ಹುಟ್ಟಿಸುವಂತಹ ಧರ್ಮದ ಆಧಾರದಲ್ಲಿ ಮೂಲೋಚ್ಚಾಟನೆ ಮಾಡುವಂತಹ ಅಪರಾಧಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.ಧರ್ಮದ ಆಧಾರದಲ್ಲಿ ಸನಾತನಿಗಳ ಡೆಂಗ್ಯೂ, ಮಲೇರಿಯಾ ಗಳಿಗೆ ಹೋಲಿಸಿ ಉದ್ದೇಶಪೂರ್ವಕ ಅವಮಾನ ಅಪಮಾನ ಮಾನಹಾನಿ ಮಾಡಿದ್ದಾರೆ. ವಿಶ್ವದಾದ್ಯಂತ ಇರುವ ಹಿಂದುಗಳ ಭಾವನೆಯನ್ನು ಧಾರ್ಮಿಕತೆಯನ್ನು ಕಾಸಿಗೊಳಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತಮ್ಮ ಈ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕದಡಿ ಅಶಾಂತಿಯನ್ನು ದುರುದ್ದೇಶ ಪೂರ್ವಕವಾಗಿ ಮಾಡಿಸುವ ಪ್ರಯತ್ನ ಮಾಡಿದ್ದು ಸಂವಿಧಾನ ಬದ್ಧವಾದ ಸಚಿವ ಸ್ಥಾನ ಅಲಂಕರಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಧರ್ಮವೊಂದನ್ನು ಮೂಲೋಚ್ಚಾಟನೆ ಮಾಡುವ ಸಾರ್ವಜನಿಕ ಕರೆ ನೀಡುವ ಮೂಲಕ ದ್ವೇಷ ಪೂರ್ಣ ಭಾಷಣ ಮಾಡಿ ಸಂವಿಧಾನ ಪ್ರತಿಜ್ಞೆ ಉದ್ದೇಶಪೂರ್ವಕ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.

ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಿ ಸನಾತನ ಹಿಂದು ಧರ್ಮವನ್ನು ವಿದ್ವೇಶಕ್ಕೆ ಒಳಪಡಿಸುವ ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇಷದ ವಾತಾವರಣ ನಿರ್ಮಾಣ ಮಾಡುವ ಭಾಷಣ ಮಾಡಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ವಿ.ಎಚ್.ಪಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ರಂಗನಾಥ್ ಜಿಲ್ಲಾ ಸಂಯೋಜಕ ಸಿ.ಡಿ ಶಿವಕುಮಾರ್, ಶಾಮ್, ಯೋಗೀಶ್ರಾಜ್ ಅರಸ್,  ದಿಲೀಪ್ ಶೆಟ್ಟಿ, ಸುನಿಲ್ ಆಚಾರ್ಯ ಭಾಗವಹಿಸಿದ್ದರು.

Follow Us:
Download App:
  • android
  • ios