Hijab Row : ರಾಜೀನಾಮೆ ಕೊಟ್ಟ ಉಪನ್ಯಾಸಕಿ ಚಾಂದಿನಿ, ಅಯೂಬ್ ಖಾನ್‌ಗೆ ಜಾಮೀನಿಲ್ಲ

* ತಾರಕಕ್ಕೆ ಏರಿದ ಹಿಜಾಬ್ ವಿವಾದ
* ರಾಜೀನಾಮೆ ನೀಡಿದ ಅತಿಥಿ ಉಪನ್ಯಾಸಕಿ
* ಹಿಜಾಬ್ ಧರಿಸಿಕೊಂಡು ಬಂದು  ಪಾಠ ಮಾಡುತ್ತಿದ್ದರು
* ಅವಹೇಳಲನಾಕಾರಿ ಹೇಳಿಕೆ ಕೊಟ್ಟ ಖಾನ್ ಗೆ ಇಲ್ಲ ಜಾಮೀನು 

Hijab Row guest lecturer submits resignation tumkur mah

ತುಮಕೂರು(ಫೆ.  18)  ಹಿಜಾಬ್(Hijab) ವಿಚಾರ ತಾಕರಕ್ಕೇರಿದ ಪರಿಣಾಮ ಅಥಿತಿ ಉಪನ್ಯಾಸಕಿ ರಾಜೀನಾಮೆ ನೀಡಿದ್ದಾರೆ. ಹಲವು (Tumkur) ಕಾಲೇಜಿನಲ್ಲಿ ಅಥಿತಿ ಉಪನ್ಯಾಕಿಯಾಗಿ ಪಾಠ ಮಾಡುತ್ತಿದ್ದ ಚಾಂದಿನಿ ರಾಜೀನಾಮೆ ನೀಡಿದ್ದಾರೆ.

ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜಿ ಸೇರಿದಂತೆ ತುಮಕೂರು ನಗರದ ಹಲವು ಕಡೆ ಅಥಿತಿ ಉಪನ್ಯಾಸಕರಾಗಿದ್ದ ಚಾಂದಿನಿ. ಹಿಜಾಬ್ ಧರಿಸಿ ತರಗತಿಗಳಿಗೆ ತೆರಳಿ ಪಾಠ ಮಾಡುತ್ತಿದ್ದರು. ಜೈನ್ ಕಾಲೇಜಿನ ಅತಿಥಿ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬಾಗಲಕೋಟೆ:  ರಾಜ್ಯದಲ್ಲಿ ಹಿಜಾಬ್ ವಿವಾದ ಪ್ರಕರಣ  ವಿಷಯ ಕೋಟ೯ನಲ್ಲಿರೋದ್ರಿಂದ ಮಾತನಾಡೋದು ಸರಿಯಲ್ಲ ಸಾಂಪ್ರದಾಯಿಕ ಮತ್ತು ಸಂವಿಧಾನಾತ್ಮಕ ಹಕ್ಕು ಮೊಟಕುಗೊಳಿಸೋದು ಸರಿಯಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕೋಟ್೯ ವಿಷಯ ಬಿಟ್ಟು ಮಾತನಾಡುತ್ತೇನೆ. ಭಾರತೀಯರಲ್ಲಿ ಹಲವು ಭಾಷಿಕ, ಪ್ರಾಂತಿಕ ಜನರಿದ್ದಾರೆ.. ಭಾರತ ಸಂವಿಧಾನವುಳ್ಳ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಇವತ್ತು ಹಿಜಾಬ್ ವಿವಾದ ಯಾಕೆ? ಇದನ್ನು ಈ ಹಿಂದಿನಿಂದಲೂ ಮಾಡಿಕೊಂಡು ಬರಲಾಗಿತ್ತು...ಈಗ್ಯಾಕೆ ವಿವಾದ? ಎಂದು ಪ್ರಶ್ನೆ ಮಾಡಿದ್ದಾರೆ. 

Nice Road Accident:   ಅಪಘಾತದಲ್ಲಿ ಇಬ್ಬರ ಸಾವು  ಕಾರು ಚಾಲಕನಿಗೆ ಜೈಲು ಶಿಕ್ಷೆ

ಬಜೆಟ್ ನಲ್ಲಿ ಏನು ಕೊಟ್ಟಿಲ್ಲ ಹೀಗಾಗಿ ಜನರನ್ನು ದಾರಿತಪ್ಪಿಸಲಿಕ್ಕೆ ಈ ವಿವಾದ ತಂದಿಟ್ಟಿದ್ದಾರೆ. ಇದು ಬಿಜೆಪಿ ಸಕಾ೯ರದ ಹುನ್ನಾರ. ಆರ್.ಎಸ್ಎಸ್ ಮತ್ತು ಭಜರಂಗದದಳ ಪರಿಷತ್ ನಿಂದ ಹುನ್ನಾರ. ಜನರಿಗೆ ಏನು ಕೊಡದ ಇವರು, ಚುನಾವಣೆ ಸಂದಭ೯ದಲ್ಲಿ ಜನರನ್ನ ಡೈವಟ್೯ ಮಾಡ್ತಿದ್ದಾರೆ. ನಾನು ಜುಟ್ಟ ಹಾಕೋಂಡ ಬತಿ೯ನಿ, ನಾಮ ಹಾಕೋಂಡ ಬತಿ೯ನಿ, ವಿಭೂತಿ ಹಾಕೋಂಡ ಬತಿ೯ನಿ ಅಂದ್ರೆ ಯಾಕೆ ಬೇಡ ಅಂತೀವಾ.?  ಅವರನ್ನು ಹಾಗೆ ನೋಡಿ ಸ್ವಾಮಿ.! ಹಿಜಾಬ್ ಹಾಕಿದ್ರೆ ಯಾಕೆ ಕಂದಕ ನಿಮಾ೯ಣ ಮಾಡ್ತೀರಿ..  ಮಕ್ಕಳಿಗೆ ಶಾಲು ಕೊಡಿಸಿ ಹಾಕಿಕೊಂಡು ಬರಲಿಕ್ಕೆ ಹೇಳಿದ್ರಿ.. ಇದು ಹಿಂದೂ ಮುಸ್ಲಿಂ ರ ಮಧ್ಯೆ ತಂದಿಡುವ ಹುನ್ನಾರವಲ್ಲದೆ ಮತ್ತೇನು? ಎಂದು ಪ್ರಶ್ನೆ ಮಾಡಿದರು.

ಅಯೂಬ್ ಖಾನ್ ಗೆ ಜಾಮೀನಿಲ್ಲ:  ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ  ನೀಡಿದ್ದ  ಅಯೂಬ್ ಖಾನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ  ವಜಾ ಮಾಡಿದೆ.

ಮೈಸೂರಿನ 2ನೇ ಜೆ ಎಂ ಎಫ್ ಸಿ ನ್ಯಾಯಾಧೀಶರು ವಜಾ ಮಾಡಿದ್ದಾರೆ. ಬಾಹುಬಲಿ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಅಯೂಬ್ ಖಾನ್  ವಿರುದ್ಧ ದೂರುಗಳು ಸಲ್ಲಿಕೆಯಾಗಿದ್ದವು.

ಜೈನ ಸಮಾಜದ ಆರಾಧ್ಯ ದೈವ ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಮೇರೆಗೆ ದಿ ಇಂಡಿಯನ್‌ ನ್ಯೂ ನ್ಯಾಷನಲ… ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಆಯಬ್ ಖಾನ್‌ರನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದರು. ಅಯೂಬ್‌ ಖಾನ್‌ ವಿರುದ್ಧ ದಿಗಂಬರ ಜೈನ ಸಮಾಜದಿಂದ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಅವರಿಗೆ ದೂರು ನೀಡಲಾಗಿತ್ತು. ಗೊಮ್ಮಟೇಶ್ವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಖಾಸಗಿ ವಾಹಿನಿಯೊಂದರಲ್ಲಿ ಹಿಜಾಬ್‌ ವಿವಾದ ಕುರಿತ ಚರ್ಚೆ ವೇಳೆ ಸಂಸದ ಪ್ರತಾಪ್‌ ಸಿಂಹ ಅವರನ್ನು ಟೀಕಿಸುವ ಭರದಲ್ಲಿ ಆಯೂಬ್‌ ಖಾನ್‌ ಗೊಮ್ಮಟೇಶ್ವರ ವಿಚಾರ ಪ್ರಸ್ತಾಪಿಸಿದ್ದರು. ‘ನಿಮಗೇನಾದರೂ ದೇಶದ ಬಗ್ಗೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರುವ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ’ ಎಂದು ಹೇಳಿದ್ದರು. ಇದರ ವಿರುದ್ಧ ಜೈನ ಸಮುದಾಯದವರು ರಾಜ್ಯಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಧರ್ಮಸ್ಥಳ, ಪುತ್ತೂರು, ಬೆಳಗಾವಿ, ಮಂಡ್ಯ ಸೇರಿ ರಾಜ್ಯಾದ್ಯಂತ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

 

Latest Videos
Follow Us:
Download App:
  • android
  • ios