*   ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಹಾಕುವುದು ಸರಿಯೇ?*   ಇಷ್ಟು ವರ್ಷ ಯಾವುದೇ ರೀತಿಯ ಅಡೆತಡೆ ಇರಲಿಲ್ಲ*   ಎರಡು ತಿಂಗಳಿಂದ ಇದನ್ನು ವಿವಾದದ ವಿಷಯವನ್ನಾಗಿ ಮಾಡಲಾಗಿದೆ 

ಭಟ್ಕಳ(ಫೆ.08): ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ಹಿಜಾಬ್‌(Hijab) ವಿವಾದ ಸಂಘ ಪರಿವಾರ(RSS) ನಡೆಸುತ್ತಿರುವ ಕೋಮುವಾದಿ ಷಡ್ಯಂತ್ರದ ಅಭಿಯಾನದ ಒಂದು ಭಾಗವಾಗಿದೆ ಎಂದು ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾ(Welfare Party of India) ಉತ್ತರ ಕನ್ನಡ ಜಿಲ್ಲಾ ಘಟಕ ಆರೋಪಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಅಬ್ದುಲ್‌ ಜಬ್ಬಾರ ಅಸದಿ, ಪಕ್ಷದ ಮುಖಂಡರು, ಹಿಜಾಬ್‌ ಒಂದು ವಿವಾದದ ವಿಷಯವೇ ಅಲ್ಲ. ಮೊದಲಿನಿಂದಲೂ ಮುಸ್ಲಿಂ(Muslim) ಹೆಣ್ಣುಮಕ್ಕಳು ಶಾಲೆ-ಕಾಲೇಜುಗಳಿಗೆ ಹಿಜಾಬ್‌ ಹಾಕಿಕೊಂಡೇ ಹೋಗುತ್ತಿದ್ದಾರೆ. ಆಕಸ್ಮಿಕವಾಗಿ ಇದನ್ನು ವಿವಾದದ(Controversy) ವಿಷಯವನ್ನಾಗಿ ಮಾಡಲಾಗಿದೆ. ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತವರು. ಹಿಜಾಬ್‌ ಹಾಕಿಕೊಂಡೇ ಶಾಲೆಗೆ ಹೋಗುತ್ತಿದ್ದರು. ಇಷ್ಟು ವರ್ಷ ಯಾವುದೇ ರೀತಿಯ ಅಡೆತಡೆ ಇರಲಿಲ್ಲ. ಈಗ ಎರಡು ತಿಂಗಳಿಂದ ಇದನ್ನು ವಿವಾದದ ವಿಷಯವನ್ನಾಗಿ ಮಾಡಲಾಗಿದೆ. ಮೇಲ್ನೋಟಕ್ಕೆ ಇದೊಂದು ಷಡ್ಯಂತ್ರದ ಅಭಿಯಾನದ ಭಾಗವಾಗಿ ಗೋಚರಿಸುತ್ತದೆ ಎಂದು ಹೇಳಿದರು.

ಹಿಜಾಬ್‌ VS ಕೇಸರಿ ಶಾಲು ಕದನ: ಕೋರ್ಟ್‌ ಮೇಲೆ ನಮಗೆ ಅಪಾರ ನಂಬಿಕೆಯಿದೆ: ಯಶ್‌ಪಾಲ್‌

ಉಡುಪಿಯಲ್ಲಿ(Udupi) ಪ್ರಾರಂಭವಾದ ಈ ಹಿಜಾಬ್‌ ಗೊಂದಲ ಕುಂದಾಪುರ ಮಾರ್ಗವಾಗಿ ಬೈಂದೂರು ಅದೇ ರೀತಿಯಾಗಿ ಇಡೀ ರಾಜ್ಯದಲ್ಲಿ(Karnataka) ಹರಡುತ್ತಾ ಹೋಗುತ್ತಿದೆ. ಉಡುಪಿ ಮತ್ತು ಇತರ ಕಡೆಗಳ ಅಂದರೆ ಕುಂದಾಪುರ ಇತ್ಯಾದಿ ಕಾಲೇಜುಗಳ ಸಮಸ್ಯೆಗಳಲ್ಲಿ ವ್ಯತ್ಯಾಸವಿದೆ. ಕುಂದಾಪುರ ಹಾಗೂ ಇತರ ಕಡೆಗಳ ಕಾಲೇಜುಗಳಲ್ಲಿ ಪ್ರಾರಂಭದಿಂದಲೂ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌ ಹಾಕಿಕೊಂಡೇ ಕಾಲೇಜುಗಳಿಗೆ ಹೋಗುತ್ತಿದ್ದರು. ಇದೀಗ ದಿಢೀರ್‌ ಆಗಿ ಹಿಜಾಬ್‌ ತೆಗೆಯದೆ ಕಾಲೇಜಿಗೆ(College) ಪ್ರವೇಶ ಇಲ್ಲ ಎಂದು ಕಾಲೇಜಿನ ಗೇಟ್‌ ಮುಚ್ಚಿ ಬಿಟ್ಪರೆ ವಿದ್ಯಾರ್ಥಿನಿಯರಿಗೆ(Students) ಎಷ್ಟೊಂದು ಆಘಾತ, ಅಪಮಾನವಾಗಿರಬಹುದು ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ವಾರ್ಷಿಕ ಪರೀಕ್ಷೆಗಳಿಗೆ ಇನ್ನು ಎರಡೇ ತಿಂಗಳು ಬಾಕಿ ಇರುವಾಗ ಹಿಜಾಬ್‌ ವಿಷಯವನ್ನೇ ದೊಡ್ಡದು ಮಾಡಿ ಅವರನ್ನು ಕಾಲೇಜಿನಿಂದ ಹೊರಗೆ ಹಾಕಿದರೆ ಅವರು ಮಾನಸಿಕ ಸಮತೋಲನ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂತಹ ಸನ್ನಿವೇಶವನ್ನು ಊಹಿಸಿದರೆ ಇದೊಂದು ಕೋಮುವಾದಿ(Communalist) ಸಂಘ ಪರಿವಾರದ ಷಡ್ಯಂತ್ರದ ಭಾಗವಾಗಿದ್ದು, ಒಂದು ದೊಡ್ಡ ಅಭಿಯಾನವನ್ನೇ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಉ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್‌ ಶೇಕ್‌, ಜಿಲ್ಲಾ ಉಪಾಧ್ಯಕ್ಷ ಶೌಖತ್‌ಖತೀಬ್‌, ಮುಖಂಡರಾದ ಫಾರೂಖ್‌ ಮಾಸ್ಟರ್‌, ನವೀದ್‌ ಶಾಬಂದ್ರಿ ಮತ್ತಿತರರಿದ್ದರು.

ಸರ್ಕಾರದ ಆದೇಶಕ್ಕೆ ಸೆಡ್ಡು, ಹಿಜಾಬ್-ಕೇಸರಿ ಶಾಲು ಮಧ್ಯೆ ನೀಲಿ ಶಾಲು ಎಂಟ್ರಿ

ಚಿಕ್ಕಮಳೂರು: ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ(Uniform) ಪಾಲಿಸುವಂತೆ ಕರ್ನಾಟಕ ಸರ್ಕಾರ(Karnataka Government) ಆದೇಶ ಹೊರಡಿಸಿದೆ. 

Hijab Row ಹಿಜಾಬ್ ವಿವಾದ: ಕಾಂಗ್ರೆಸ್ ವಿರುದ್ಧ ಅಶೋಕ್ ಟೀಕೆ, ಸಿಂಹಗೆ ಖಾದರ್ ಟಾಂಗ್

ಆದರೂ ಸೋಮವಾರ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿ ಬಂದಿದ್ರೆ, ಹಾಗೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು(Kesari Shawl) ಧರಿಸಿ ಬಂದಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದರು.

ಈ ಹಿಜಾಬ್ ಹಾಗೂ ಕೇಸರಿ ಶಾಲು ಹಗ್ಗಾಜಗ್ಗಾಟದ ಮಧ್ಯೆ ನೀಲಿ ಶಾಲು ಬಂದಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಮೊದಲಿನಿಂದಲೂ ಧರಿಸಿ ಬರುತ್ತಿರುವ ಹಿಜಾಬ್‌ಗೆ ವಿರೋಧ ಮಾಡಬಾರದು ಎಂದು ಆಗ್ರಹಿಸಿದ ವಿದ್ಯಾರ್ಥಿಗಳು ‘ನೀಲಿ ಶಾಲು’ ಧರಿಸಿ ಕಾಲೇಜಿಗೆ ಬಂದಿದ್ದಾರೆ. ‘ಜೈ ಭೀಮ್‌’, ‘ಜೈ ಅಂಬೇಡ್ಕರ್‌’ ಎಂದು ಕೂಗಿ ಹಿಜಾಬ್‌ಗೆ ಬೆಂಬಲ ಸೂಚಿಸಿರುವುದು ಹೊಸ ಸಂಚಲನ ಮೂಡಿಸಿದೆ.

ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಘೋಷಣೆ ಕೂಗಿದ್ದಾರೆ. ಹಿಜಾಬ್‌ ವಿರೋಧಿಸಿ ಕೇಸರಿ ಶಾಲು ಹಾಕಿಕೊಂಡು ಬರುತ್ತಿದ್ದ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.