Asianet Suvarna News Asianet Suvarna News

Hijab controversy : 'ವಿದ್ಯಾರ್ಥಿಗಳು ಮಾತ್ರ ಇರ್ಲಿಲ್ಲ' ರಜೆ ಘೋಷಣೆಗೆ  ಅಸಲಿ ಕಾರಣ  ಹೇಳಿದ ಸಚಿವ

* ಮೂರು ದಿನ ಹೈಸ್ಕೂಲು ಕಾಲೇಜಿಗೆ ರಜೆ
* ಹಿಜಾಬ್ ವಿವಾದ ತಣ್ಣಗಾಗಿಸಲು ಸರ್ಕಾರದ ಕ್ರಮ
*  ವಿದ್ಯಾರ್ಥಿಗಳ ಜತೆ ಬೇರೆಯವರು ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

Hijab controversy Bommai shuts all schools colleges for 3 days behind reason mah
Author
Bengaluru, First Published Feb 8, 2022, 9:01 PM IST | Last Updated Feb 8, 2022, 9:01 PM IST

ಬೆಂಗಳೂರು( ಫೆ. 08)  ಹಿಜಾಬ್ (Hijab) ಗೊಂದಲ ನಿವಾರಣೆಗಾಗಿ  ರಾಜ್ಯ ಸರ್ಕಾರ (Karnataka Govt) ರಜೆ ಘೋಷಣೆ ಮೊರೆ ಹೋಗಿದೆ. ದೆಹಲಿಯಿಂದಲೇ ಸಿಎಂ ಬೊಮ್ಮಾಯಿ (Basavaraj Bommai)  ರಜೆ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವ ನಾಗೇಶ್ (BC Nagesh) ಮಾತನಾಡಿದ್ದಾರೆ. ಕೋರ್ಟಿನ ತೀರ್ಪನ್ನು ಶಿಕ್ಷಣ ‌ಇಲಾಖೆ ಪರಿಪಾಲನೆ ಮಾಡುತ್ತದೆ. ತೀರ್ಪು ಏನು  ಬರುತ್ತೆ ಅಂತ ಹೇಳುವಂತಹ ಕಾನೂನು‌ ಪಂಡಿತನು  ನಾನು ಅಲ್ಲ ಜೋತಿಷಿ ಸಹ ಅಲ್ಲ. ಮುಖ್ಯಮಂತ್ರಿಗಳು ನಮ್ಮೊಂದಿಗೆ ಚರ್ಚೆ ನಡೆಸುತ್ತಿದ್ದಾರೆ, ಗೃಹ ಮಂತ್ರಿಗಳೊಂದಿಗೆ ಮತ್ತೊಂದು ಸಭೆ ನಡೆಯಲಿದೆ ಎಂದು ತಿಳಿಸಿದರು.

ಶಾಂತಿ ಕೆಡಸುವವರು ಯಾರೆ ಇದ್ರು ಅವರನ್ನು  ಬಿಡೋದಿಲ್ಲ. ಈ ಪರಿಸ್ಥಿತಿ ನಿಭಾಯಿಸುವ ಕೆಲಸ ಸರ್ಕಾರ ಮಾಡ್ತಾ ಇದೆ. ಟಿವಿಗಳಲ್ಲಿ ನಾವು ಕೆಲವೊಂದು ವಿಡಿಯೋಗಳನ್ನು ನೋಡಿದ್ದೇವೆ. ವಿದ್ಯಾರ್ಥಿಗಳಿಗಿಂತ ಬೇರೆ ನಾಗರೀಕರು ಸಹ ಈ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿರೋದನ್ನು ಗಮನಿಸಿದ್ದೇವೆ. ಈ ಪರಿಸ್ಥಿತಿಯನ್ನು‌ಮಿಸ್ ಯೂಸ್ ಮಾಡಿಕೊಳ್ಳೋದಕ್ಕೆ ಅಂತ ಕೆಲವು ಜನರು‌ಇರ್ತಾರೆ . ಹಾಗಾಗಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮೂರು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.

ಹಿಜಾಬ್ ವಿವಾದದ ನಡುವೆ ಸಿಎಂಗೆ ಡಿಕೆಶಿ ಮನವಿ

ಪ್ರಾಥಮಿಕ ಶಾಲೆಗೆ ರಜಾ ಇಲ್ಲ:  ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಕ್ಲಾಸ್ ನಡೆಯಲಿದೆ . ಒಂಭತ್ತನೇ ತರಗತಿಯಿಂದ ಕ್ಲಾಸ್ ಇರುವುದಿಲ್ಲ. ಶಾಲಾ ಕಾಲೇಜುಗಳ ವಾಸ್ತವ ಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗಿದೆ. 

ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ರಜೆ ಘೋಷಣೆ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು(Students), ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಸಿಎಂ ಮನವಿ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ.

ಹಿಜಾಬ್ ವಿವಾದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದ್ದು ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಈ ನಡುವೆ ಶಾಲಾ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. 

ಸಂವಿಧಾನದ ಆಶಯದಂತೆ ನಡೆಯುತ್ತೇವೆ:  ಹಿಜಾಬ್ ಗೊಂದಲವನ್ನು ಮಂಗಳವಾರ ವಿಚಾರಣೆ ನಡೆಸಿದ ಕರ್ನಾಟ ಹೈಕೋರ್ಟ್, ಭಾವೋದ್ರೇಕ ಅಥವಾ ಭಾವನಾತ್ಮಕವಾಗಿ ನಾವು ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಕಾನೂನಿನ ರೀತಿಯಲ್ಲಿಯೇ ಹೋಗುತ್ತೇವೆ ಎಂದು ಹೇಳಿದೆ. ಸಂವಿಧಾನವು ನಮಗೆ ಏನು ಹೇಳುತ್ತದೆಯೋ ಅದರಂತೆಯೇ ನಾವು ಹೋಗುತ್ತೇವೆ. ಸಂವಿಧಾನವೇ ನನಗೆ ಭಗವದ್ಗೀತೆ ಎಂದು ತಿಳಿಸಿದ್ದು ಬುಧವಾರಕ್ಕೆ ವಿಚಾರಣೆ ಮುಂದೂಡಿದೆ.

ಸಮವಸ್ತ್ರವನ್ನು ನಿರ್ಧರಿಸಲು ಕಾಲೇಜುಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ಅಡ್ವೊಕೇಟ್ ಜನರಲ್ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು. ಹಾಗೇನಾದರೂ ಹಿಜಾಬ್ ಧರಿಸಲೇಬೇಕು ಎಂದು ಬಯಸುವ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ.  ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ‘ನಮ್ಮ ಜಾತ್ಯತೀತತೆ ಗೌರವದ ಮೇಲೆ ನಿಂತಿದೆ... ರಾಜ್ಯವು ಎಲ್ಲಾ ಧರ್ಮವನ್ನು ಗೌರವಿಸುತ್ತದೆ. "ಭಾರತದಲ್ಲಿ ಜಾತ್ಯತೀತತೆ ವಿಭಿನ್ನವಾಗಿದೆ  ಎಂದರು. 

Latest Videos
Follow Us:
Download App:
  • android
  • ios