ಢಾಕಾ[ನ.18]: ಭಾರತದ ಈರುಳ್ಳಿ ರಫ್ತು ನಿಷೇಧದ ಕ್ರಮದಿಂದ ನೆರೆಯ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರ ಅಡುಗೆ ಕೋಣೆಯಲ್ಲೇ ಅಡುಗೆ ಮಾಡಲು ಈರುಳ್ಳಿ ಇಲ್ಲದ ದುಃಸ್ಥಿತಿ ಏರ್ಪಟ್ಟಿದೆ. ರಾಷ್ಟ್ರಾದ್ಯಂತ ಈ ಹಿಂದೆ 25 ರು. ಬೆಲೆಗೆ ಮಾರಾಟವಾಗುತ್ತಿದ್ದ ಈರುಳ್ಳಿ ದರವು ಇದೀಗ 220 ರು.ಗೆ ಜಿಗಿತ ಕಂಡು, ಜನ ಸಾಮಾನ್ಯರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ.

ಬಾಂಗ್ಲಾ ಪ್ರಧಾನಿಗೂ ತಟ್ತು ಈರುಳ್ಳಿ ಬಿಸಿ: ಅಡುಗೆಗೆ ಈರುಳ್ಳಿ ಬಳಸದಂತೆ ಸೂಚನೆ!

ಈರುಳ್ಳಿಯು ಇದೀಗ ಬಾಂಗ್ಲಾದೇಶದಲ್ಲಿ ರಾಜಕೀಯ ಅಲ್ಲೋಲ-ಕಲ್ಲೋಲ ಸೃಷ್ಟಿಸುವ ಭೀತಿಯೂ ಎದುರಾಗಿದ್ದು, ಟರ್ಕಿ, ಮಯನ್ಮಾರ್‌, ಚೀನಾ ಮತ್ತು ಈಜಿಪ್ಟ್‌ನಿಂದ ಈರುಳ್ಳಿಯನ್ನು ತುರ್ತಾಗಿ ಆಮದು ಮಾಡಿಕೊಳ್ಳಲು ಬಾಂಗ್ಲಾ ವಿಮಾನಗಳ ಮೊರೆ ಹೋಗಿದೆ.

ಕುಷ್ಟಗಿ: ಕುಸಿದ ಬೆಲೆ, ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿರುವ ಈರುಳ್ಳಿ!

ಏತನ್ಮಧ್ಯೆ, ಈ ಬಗ್ಗೆ ಪ್ರತಿಕ್ರಿಯಿಸಿದ ಈ ಬಗ್ಗೆ ಮಾತನಾಡಿದ ಬಾಂಗ್ಲಾ ಪ್ರಧಾನಿಯ ಪತ್ರಿಕಾ ಉಪ ಕಾರ್ಯದರ್ಶಿ ಹಸನ್‌ ಜಾಹೀದ್‌ ತುಷಾರ್‌, ‘ಪ್ರಧಾನಿ ಶೇಖ್‌ ಹಸೀನಾ ಅವರು ತಮ್ಮ ಮನೆಯಲ್ಲಿ ಈರುಳ್ಳಿ ಬಳಕೆಯನ್ನು ಬಂದ್‌ ಮಾಡಿದ್ದಾರೆ’ ಎಂದು ಹೇಳಿದ್ದಾರೆ.