ಶಿವಮೊಗ್ಗದಲ್ಲಿ ತಗ್ಗಿದ ಕೋವಿಡ್ ಸೋಂಕು

ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಆದರೆ ಶಿವಮೊಗ್ಗದಲ್ಲಿ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. 

highest number of corona cases reports in shikaripura

ಶಿವಮೊಗ್ಗ (ಆ.19): ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 223 ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದ್ದರೆ, 50 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 4766 ಮಂದಿಯಲ್ಲಿ ಪಾಸಿಟಿವ್‌ ಕಂಡುಬಂದಿದೆ. ಇವರಲ್ಲಿ ಈಗಾಗಲೇ 2878 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಒಟ್ಟು 1809 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 232 ಮಂದಿ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದಂತೆ 895 ಮಂದಿ ಕೋವಿಡ್‌

ಆರೈಕೆ ಕೇಂದ್ರದಲ್ಲಿ, 248 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 322 ಮಂದಿ ಮನೆಯಲ್ಲಿಯೇ ಐಸೋಲೇಶನ್‌ಗೆ ಒಳಗಾಗಿದ್ದಾರೆ. 112 ಮಂದಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮಾದರಿ.

ಮಂಗಳವಾರ ಪತ್ತೆಯಾದ ಪ್ರಕರಣಗಳಲ್ಲಿ ಶಿವಮೊಗ್ಗ- 55, ಭದ್ರಾವತಿ-66, ಶಿಕಾರಿಪುರ- 70, ತೀರ್ಥಹಳ್ಳಿ- 9, ಹೊಸನಗರ -6, ಸೊರಬ -11, ಹೊರ ಜಿಲ್ಲೆಯಿಂದ ಶಿವಮೊಗ್ಗಕ್ಕೆ ಬಂದಿದ್ದ 6 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ.

66 ಲಕ್ಷ ಜನಸಂಖ್ಯೆಯ ಪುಣೆಯ ಅರ್ಧಕ್ಕರ್ಧ ಜನರಲ್ಲಿ ಕೊರೋನಾ ಪ್ರತಿಕಾಯ ಪತ್ತೆ!.

ಜಿಲ್ಲೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಇಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 79ಕ್ಕೆ ಹೆಚ್ಚಳವಾಗಿದೆ. 1885 ಕಂಟೈನ್ಮೆಂಟ್‌ ವಲಯಗಳಿವೆ. 654 ಡೀನೋಟಿಫೈಡ್‌ ಕಂಟೈನ್ಮೆಂಟ್‌ ಜೋನ್‌ ಗುರುತಿಸಲಾಗಿದೆ.

Latest Videos
Follow Us:
Download App:
  • android
  • ios