Asianet Suvarna News Asianet Suvarna News

66 ಲಕ್ಷ ಜನಸಂಖ್ಯೆಯ ಪುಣೆಯ ಅರ್ಧಕ್ಕರ್ಧ ಜನರಲ್ಲಿ ಕೊರೋನಾ ಪ್ರತಿಕಾಯ ಪತ್ತೆ!

ಕೊರೋನಾ ವೈರಸ್‌ನಿಂದ ಅತಿಹೆಚ್ಚು ಬಾಧಿತ ನಗರಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಪುಣೆ| 66 ಲಕ್ಷ ಜನಸಂಖ್ಯೆಯ ಪುಣೆಯ ಅರ್ಧಕ್ಕರ್ಧ ಜನರಲ್ಲಿ ಕೊರೋನಾ ಪ್ರತಿಕಾಯ ಪತ್ತೆ

52 per cent in Pune exposed to COVID 19 finds serosurvey
Author
Bangalore, First Published Aug 19, 2020, 10:54 AM IST

ಪುಣೆ(ಆ.19): ಕೊರೋನಾ ವೈರಸ್‌ನಿಂದ ಅತಿಹೆಚ್ಚು ಬಾಧಿತ ನಗರಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದ ಸೆರೋಲಾಜಿಕಲ್‌ ಸಮೀಕ್ಷೆಯಲ್ಲಿ ಶೇ.51.5 ಜನರ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ಆ್ಯಂಟಿಬಾಡಿ (ರೋಗ ನಿರೋಧಕ ಕೋಶ) ಪತ್ತೆಯಾಗಿದೆ. ಅಂದರೆ ಇವರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಅವರ ದೇಹದಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಉತ್ಪಾದನೆಯಾಗಿದೆ ಎಂದರ್ಥ.

ಬಿಜೆಪಿ ಮಾಜಿ ಶಾಸಕ ಸಿ. ಗುರುಸ್ವಾಮಿ ಕೊರೋನಾಗೆ ಬಲಿ!

ನಗರದ ಐದು ವಾರ್ಡ್‌ಗಳಲ್ಲಿ 18 ವರ್ಷ ಮೇಲ್ಪಟ್ಟ1664 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಅಂಡ್‌ ರೀಸಚ್‌ರ್‍ (ಐಐಎಸ್‌ಇಆರ್‌) ಮೂಲಕ ಸೆರೋ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗೊಳಪಟ್ಟಶೇ.52.8 ಪುರುಷರಲ್ಲಿ ಹಾಗೂ ಶೇ.50.1 ಮಹಿಳೆಯರಲ್ಲಿ ಕೊರೋನಾ ಪ್ರತಿಕಾಯ ಕಂಡುಬಂದಿದೆ.

ರಾಜ್ಯದಲ್ಲಿ ಒಂದೇದಿನ ಕೊರೋನಾಕ್ಕೆ 139 ಬಲಿ: 7665 ಕೇಸ್!

ಇನ್ನು, ಅಪಾರ್ಟ್‌ಮೆಂಟ್‌ ಮತ್ತು ಬಂಗಲೆಗಳಲ್ಲಿ ವಾಸಿಸುವವರಿಗಿಂತ ಗುಡಿಸಲುಗಳಲ್ಲಿ ವಾಸಿಸುವವರಲ್ಲೇ ಪ್ರತಿಕಾಯ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಅಲ್ಲದೆ, ಪ್ರತ್ಯೇಕ ಶೌಚಾಲಯ ಬಳಸುವವರಿಗಿಂತ ಸಾರ್ವಜನಿಕ ಶೌಚಾಲಯ ಬಳಸುವವರಲ್ಲಿ ಹೆಚ್ಚು ಪ್ರತಿಕಾಯ ಕಂಡುಬಂದಿದೆ. ಇದು ಪುಣೆಯ ಮೊದಲ ಸೆರೋ ಸಮೀಕ್ಷೆಯಾಗಿದ್ದು, ಇನ್ನಷ್ಟುವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪುಣೆ ಅಂದಾಜು 66 ಲಕ್ಷ ಜನಸಂಖ್ಯೆ ಹೊಂದಿದೆ.

Follow Us:
Download App:
  • android
  • ios