:  ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಉತ್ತಮ ಬೋಧಕರೊಂದಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲಾಗುತ್ತಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಸಾಲಿಗ್ರಾಮ : ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಉತ್ತಮ ಬೋಧಕರೊಂದಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲಾಗುತ್ತಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಅವರು ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್‌ ಸಮಿತಿಯ ಮುಖ್ಯಸ್ಥ ಪೊ›. ಶಂಕರ್‌ರಾವ್‌ ಜುನೆರೆ, ಸಂಯೋಜಕ ಪೊ›. ವಿವೇಕ್‌ ಮಿಶ್ರಾ ಹಾಗೂ ಸದಸ್ಯ ಡಾ. ಅಶೋಕ್‌ ಪಾಂಡುರಂಗ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ರಾಜ್ಯದಲ್ಲೇ ಕೆ.ಆರ್‌. ನಗರ ಉತ್ತಮ ಮಹಿಳಾ ಕಾಲೇಜು ಎಂಬ ಹಿರಿಮೆಯೊಂದಿಗೆ ನ್ಯಾಕ್‌ ಸಮಿತಿಯಿಂದ ಎ ಗ್ರೇಡ್‌ ಮಾನ್ಯತೆ ಕೊಂಡಿದೆ ಧನ್ಯವಾದಗಳು ಎಂದರು. ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಉತ್ತಮ ಬೋಧಕರ ತಂಡವಿದ್ದು, ಕಾಲೇಜಿನಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಪ್ರಾಧ್ಯಾಪಕ ವರ್ಗ, ಸಿಬ್ಬಂದಿ ವರ್ಗ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಧನ್ಯವಾದಗಳನ್ನು ತಿಳಿಸಿದರು.

ಸಾಲಿಗ್ರಾಮ ಕಾಲೇಜು ಸಹ ’ ಎ’ ಗ್ರೇಡ್‌ ಮಾನ್ಯತೆ ಪಡೆಯಲಿ ಎಂದು ಶುಭ ಹಾರೈಸಿದರು.

ನ್ಯಾಕ್‌ ತಂಡದವರು: ಕಾಲೇಜಿನ ಪ್ರತಿ ವಿಭಾಗವನ್ನು ವೀಕ್ಷಿಸಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳ ಬಗೆ ಸಮಗ್ರ ಮಾಹಿತಿ ಪಡೆದರು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರಿಂದ ಸಂವಾದ ನಡೆಸಿ ಸರ್ಕಾರಕ್ಕೆ ಅಗತ್ಯ ವಿರುವ ಮೂಲಭೂತ ಸೌಕರ್ಯಗಳ ಕಾಲೇಜಿನ ಸಮಗ್ರ ಅಭಿವೃದ್ಧಿಯ ಮಾಹಿತಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಮಾಹಿತಿ ಪಡೆದರು.

ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಸಮಯದಲ್ಲಿ ಬಸ್‌ ಸೌಲಭ್ಯ, ಸ್ನಾತಕೋತ್ತರ ಪದವಿ, ಕೆಎಎಸ್‌, ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಕ್ರೀಡಾ ಚಟುವಟಿಕೆಗಳ ಕ್ರೀಡಾಂಗಣ, ಕ್ಯಾಂಟೀನ್‌ ಮಹಿಳಾ ವಸತಿ ಗೃಹ ಸೇರಿದಂತೆ ಹಲವು ಬೇಡಿಕೆಗಳು ಸಲ್ಲಿಸಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು, ಕಾಲೇಜಿನ ಆವರಣವು ನವ ವಧುವಿನಂತೆ ಸಿಂಗಾರಗೊಂಡು ಜಗಮಗಿಸುತ್ತಿತ್ತು.

ಪ್ರಾಂಶುಪಾಲರಾದ ಹಂಸವೇಣಿ, ಹಿರಿಯ ಉಪನ್ಯಾಸಕರಾದ ಸಾ.ರಾ. ರಾಮೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳಿ ಸೋಮಣ್ಣ, ಸಿಡಿಸಿ ಕಾರ್ಯಾಧ್ಯಕ್ಷ ಬಾಹುಬಲಿ ಸದಸ್ಯರಾದ ಎಸ್‌.ಕೆ. ಮಧುಚಂದ್ರ, ಎಸ್‌.ಆರ್‌. ಪ್ರಕಾಶ್‌, ಕುಸುಮ, ಜ್ಯೋತಿ, ಜೈಸೇನ್‌ ರಾಮಯ್ಯ, ನಂಜಪ್ಪ ಶೆಟ್ಟಿ, ಅಯಾಜ… ಅಹಮದ್‌, ಪ್ರಾಧ್ಯಾಪಕರಾದ ರಾಜೇಶ್‌, ಶ್ರೀನಿವಾಸ, ಯೋಗೇಶ್‌, ಶೇಖರ್‌, ಮಧು, ಸುಂದರ್‌ರಾಜು, ರಘು, ಮಂಜುನಾಥ್‌, ಚೇತನ್‌ಕುಮಾರ್‌ ಇದ್ದರು.