ನಮ್ಮಪ್ಪನ್ನಾಣೆ ರಾಜಕಾರಣಿಗಳು ದೇಶ ಉದ್ಧಾರ ಮಾಡಲ್ಲ ಎಂದ ಶಿಕ್ಷಣ ಸಚಿವರು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 5:38 PM IST
Higher Education Minister GT Devegowda Slams Politicians
Highlights

ಸರ್ಕಾರಿ ಕಾಲೇಜಿನ ಅಧಿಕಾರಿಗಳು, ವಿಸಿ ಗಳು ಹೆಸರು ಕೆಡಿಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳ ಪರಿಸ್ಥಿತಿ ಶೋಚನೀಯವಾಗಿದೆ. ಸರ್ಕಾರ ಕೋಟಿ ಕೋಟಿ ಹಣ ಅನುದಾನ ನೀಡಿದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. 

ಬೆಂಗಳೂರು[ಆ.09]: ನಮ್ಮಪ್ಪನ್ನಾಣೆ ರಾಜಕಾರಣಿಗಳು ದೇಶ ಉದ್ದಾರ ಮಾಡಲ್ಲ, ದೇಶ ಅಭಿವೃದ್ಧಿ ಆಗಬೇಕಾದ್ರೆ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.

ಬೆಂಗಳೂರಿನ ರೇವಾ ಕಾಲೇಜಿನ  3 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳು ಜನಪ್ರತಿನಿಧಿಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ. ಶಿಕ್ಷಣದ ಮಹತ್ವ ರಾಜಕಾರಣಿಗಳಿಗೆ ಗೊತ್ತಿರಲು ಸಾಧ್ಯವಿಲ್ಲ. ಸರ್ಕಾರಿ ಕಾಲೇಜಿನ ಅಧಿಕಾರಿಗಳು, ವಿಸಿ ಗಳು ಹೆಸರು ಕೆಡಿಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳ ಪರಿಸ್ಥಿತಿ ಶೋಚನೀಯವಾಗಿದೆ.

ಸರ್ಕಾರ ಕೋಟಿ ಕೋಟಿ ಹಣ ಅನುದಾನ ನೀಡಿದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸರ್ಕಾರಿ ಕಾಲೇಜುಗಳಲ್ಲಿ ಕಟ್ಟಡಗಳೇ ಇಲ್ಲದೆ ಪಾಠ ನಡೆಸಬೇಕಾಗಿದೆ. ಸರ್ಕಾರಿ ಕಾಲೇಜುಗಳ ವಿಸಿಗಳು ಖಾಸಗಿ ಕಾಲೇಜು ನೋಡಿ ಕಲಿಯಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು. ಘಟಿಕೋತ್ಸವದಲ್ಲಿ 22 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ವಜುಭಾಯಿ ವಾಲಾ ಮುಂತಾದವರು ಉಪಸ್ಥಿತರಿದ್ದರು.

 

loader