ಬಡಮಕ್ಕಳಿಗೆ ಉನ್ನತ ಶಿಕ್ಷಣ, ಸಾಮಾಜಿಕ ಸಬಲೀಕರಣ ಇನ್ನೂ ಮರೀಚಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿಯೂ ಕಡೆಗಣಿಸಿದ ಪರಿಣಾಮ ಗ್ರಾಮೀಣ ಬಡಜನತೆಯ ಮಕ್ಕಳಿಗೆ ಇನ್ನೂ ಉನ್ನತ ಮಟ್ಟದ ಶಿಕ್ಷಣ, ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಗೊಳ್ಳಲು ಸಾಧ್ಯವಾಗಿಲ್ಲ ಎಂದು ರಾಜ್ಯ ಆಮ್‌ ಆದ್ಮಿ ಪಕ್ಷದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಸಮಾಧಾನ ವ್ಯಕ್ತಪಡಿಸಿದರು.

Higher education for poor children, social empowerment is still a mirage snr

  ಪಾವಗಡ :  ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿಯೂ ಕಡೆಗಣಿಸಿದ ಪರಿಣಾಮ ಗ್ರಾಮೀಣ ಬಡಜನತೆಯ ಮಕ್ಕಳಿಗೆ ಇನ್ನೂ ಉನ್ನತ ಮಟ್ಟದ ಶಿಕ್ಷಣ, ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಗೊಳ್ಳಲು ಸಾಧ್ಯವಾಗಿಲ್ಲ ಎಂದು ರಾಜ್ಯ ಆಮ್‌ ಆದ್ಮಿ ಪಕ್ಷದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಸಮಾಧಾನ ವ್ಯಕ್ತಪಡಿಸಿದರು.

ಅವರು ತಾಲೂಕಿನ ಮರಿದಾಸನಹಳ್ಳಿ, ವೈ.ಎನ್‌.ಹೊಸಕೋಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಅರಳೀಕಟ್ಟೆ ಸಂವಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ಪಾವಗಡಕ್ಕೆ ಆಗಮಿಸಿದ್ದರು. ಇಲ್ಲಿನ ಶ್ರೀಶನಿಮಹತ್ಮಾ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಟ್ಟಣದ ಎಎಪಿಯ ಕಚೇರಿಗೆ ತೆರಳಿ ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಡವರಿಗೆ ಇನ್ನೂ ಉನ್ನತ ಮಟ್ಟದ ಶಿಕ್ಷಣ ಕಲ್ಪಿಸಲು ಆಳುವ ಸರ್ಕಾರಗಳಿಗೆ ಸಾಧ್ಯವೇ ಆಗಿಲ್ಲ. ಕಾರಣ ಜನರಿಂದ ಆಯ್ಕೆಯಾಗುವ ಶಾಸಕರು ಮತ್ತು ಸಂಸದ, ಸಚಿವರು ಬಹುತೇಕ ತಮ್ಮ ಸ್ವಂತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುತ್ತಾರೆ. ಅವರಿಗೆ ಅವರ ಸಂಸ್ಥೆ ಮುಖ್ಯವಾಗಿರುತ್ತದೆ. ಹೀಗಾಗಿ ಅವರು ಸರ್ಕಾರ ಮಟ್ಟದ ಉನ್ನತ ಶಿಕ್ಷಣ ಪ್ರಗತಿಗೆ ಆಸಕ್ತಿ ವಹಿಸುತ್ತಿಲ್ಲ. ಇದರಿಂದ ಬಡವ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಆಸಮಾಧಾನ ಹೊರಹಾಕಿದರು.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ರಚನೆಯಾಗಿ ಏಳು ತಿಂಗಳು ಕಳೆದಿದೆ. ಯಾವುದೇ ಪ್ರಗತಿ ಸಾಧ್ಯವಾಗಲಿಲ್ಲ. ಕಾರಣ ಸರ್ಕಾರದಲ್ಲಿ ಹಣದ ಅಭಾವ ಸೃಷ್ಟಿಯಾಗಿದೆ. ಔಷಧಿ ಖರೀದಿಯ ಹೆಸರಿನಲ್ಲಿ ರಾಜ್ಯ ಸರ್ಕಾರ 600 ಕೋಟಿಗಳಷ್ಟು ಹಣ ಮೀಸಲಿಟ್ಟಿದೆ. ಇದುವರೆವಿಗೂ ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ. ಕಾರಣ ಇನ್ನೂ ಇವರಿಗೆ ಕಮಿಷನ್‌ ಲೆಕ್ಕಾಚಾರ ಹೊಂದಾಣಿಕೆ ಆಗಿಲ್ಲದ ಪರಿಣಾಮ ಟೆಂಡರ್‌ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪಡಿತರ ಧಾನ್ಯ, ವಿದ್ಯುತ್‌ ಹಾಗೂ ಶಕ್ತಿಯೋಜನೆಗೆ ಗ್ಯಾರಂಟಿಯ ಮೂಲಕ ನೀಡುವ ಆದ್ಯತೆ ಉಚಿತ ಔಷಧಿ ಸರಬರಾಜಿಗೆ ಏಕೆ ನೀಡಬಾರದು. ಸರ್ಕಾರಿ ಆಸ್ಪತ್ರೆಯ ವೈದ್ಯರು ಔಷಧಿ ಖರೀದಿಗೆ ಖಾಸಗಿ ಮೆಡಿಕಲ್‌ ಸೆಂಟರ್‌ಗಳಿಗೆ ಬರೆದುಕೊಡುತ್ತಿದ್ದಾರೆ. ಇದರಿಂದ ಬಡವರಿಗೆ ಹೆಚ್ಚು ಹೊರೆಯಾಗುತ್ತಿದೆ. ಸರ್ಕಾರ ಯಾಕಾಗಿ ಬಡರೋಗಿಗಳ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ಬಳಿಕ ತಾಲೂಕಿನ ಮರಿದಾಸನಹಳ್ಳಿಗೆ ತೆರಳಿ ಗ್ರಾಮಸ್ಥರ ಜತೆ ಅಲ್ಲಿನ ಅರಳೀಕಟ್ಟೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅರಳಿಕಟ್ಟೆ ಸಂವಾದ

ಈ ವೇಳೆ ಮಾತನಾಡಿ ಮೂಲಭೂತ ಸಮಸ್ಯೆಗಳ ಬಗ್ಗೆ ಅರಳಿಕಟ್ಟೆ ಸಂವಾದ ಮೂಲಕ ಮಾಹಿತಿ ಪಡೆದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಆಮ್ ಆದ್ಮಿ ಪಾರ್ಟಿಯ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ವೇಳೆ ಗ್ರಾಮದ ಆನೇಕ ಮಹಿಳೆಯರು ಮಾತನಾಡಿ ರಾಜ್ಯ ಸರ್ಕಾರ ನೀಡಿರುವ 2000 ಮಹಿಳೆಯರಿಗೆ ನೀಡುವ ಬದಲು ನಮ್ಮ ಮಕ್ಕಳು ವಿದ್ಯಾವಂತರಾಗಿದ್ದಾರೆ. ಅವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಗ್ಯಾರಂಟಿಗಳ ಜಾರಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ನೀಡಬೇಕಾದ ಸೌಲಭ್ಯವನ್ನು ಕಾಂಪೌಂಡ್ ಕಾಮಗಾರಿಗಳನ್ನು ಬಳಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ದೂಳು ತುಂಬಿದ ರಾಗಿ ನ್ಯಾಯಬೆಲೆ ಅಂಗಡಿಯಲ್ಲಿ ನೀಡುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕೊರತೆ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ರವಾನೆ ಮಾಡುತ್ತಿದ್ದಾರೆ. ಹಾಗೂ ಇತರೆ ತಾಲೂಕಿನ ಜ್ವಲಂತ ಸಮಸ್ಯೆ ಕುರಿತು ಆನೇಕ ಮಂದಿ ಆರೋಪಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಾವಗಡ ರಾಮಾಂಜಿನಪ್ಪ ಮಾತನಾಡಿ ಹಿಂದೆ ಈ ಭಾಗದಲ್ಲಿ ಶಾಸಕ ಸ್ಥಾನಕ್ಕೆ ಪ್ರತಿನಿಧಿಸಿ ತಮ್ಮೆಲ್ಲರ ಆಶೀರ್ವಾದ ಇಲ್ಲದೇ ಸೋತಿದ್ದೇನೆ. ಅಂದಿನಿಂದ ವಿವಿಧ ರೀತಿಯಲ್ಲಿ ಸೇವೆಗಳು ಮಾಡಿಕೊಂಡು ಬರುತ್ತಿದ್ದು, ಮುಂದಿನ ದಿನ ಸಹ ತಾಲೂಕಿನ ಜ್ವಲಂತ ಸಮಸ್ಯೆ ಬಗೆ ಸರ್ಕಾರಕ್ಕೆ ತಿಳಿಸುವ ಕಾರ್ಯಕ್ರಮ ನಮ್ಮ ಆಮ್ ಆದ್ಮಿ ಪಾರ್ಟಿಯ ಮೂಲಕ ಮಾಡಿಕೊಂಡು ಬರುತ್ತೇವೆ. ಬಹಳಷ್ಟು ತಾಲೂಕಿನಲ್ಲಿ ಜ್ವಲಂತ ಸಮಸ್ಯೆಗಳಿವೆ.ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಹೀಗೆ ಹತ್ತು ಹಲವು ಸಮಸ್ಯೆಗಳು ಇದ್ದು,ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳ ಕುರಿತು ಎಎಪಿಯಿಂದ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಈ ವೇಳೆ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಆಮ್ ಆದ್ಮಿ ಪಾರ್ಟಿಯ ಮಹಿಳಾ ಅಧ್ಯಕ್ಷ ಕುಶಲಸ್ವಾಮಿ.ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ. ಜಿಲ್ಲಾಧ್ಯಕ್ಷ ರಾಮಣ್ಣ, ರಾಜ್ಯ ಮಹಿಳಾ ಅಧ್ಯಕ್ಷ ಕುಶಾಲ ಸ್ವಾಮಿ,ಹಿರಿಯ ಮುಖಂಡ ಗೂಳಹಳ್ಳಿ ನಾಗಭೂಷಣ್‌, ಜಿಲ್ಲಾ ಮಹಿಳಾ ಘಟಕದ ರುಕ್ಸಾನ ಬಾನು,ಎಎಪಿ ತಾಲೂಕು ಘಟಕದ ಅಧ್ಯಕ್ಷ ಗೋಪಾಲ್‌ ತಾ,ಮಹಿಳಾ ಘಟಕದ ಸರೋಜಮ್ಮ ರಾಮಾಂಜಿನಪ್ಪ ಹಾಗೂ ಸ್ಥಳೀಯ ಆಮ್‌ ಆದ್ಮಿ ಪಕ್ಷದ ಮುಖಂಡರಾದ ನೇಕಾರ ಶ್ರೀನಿವಾಸ್ ,ಗೋವಿಂದಪ್ಪ,ಮರಿದಾಸನಹಳ್ಳಿಯ ಈರಕ್ಯಾತಪ್ಪ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios