ಬೆಂಗಳೂರು(ಅ.13): ಕಳೆದ ಲೋಕಸಭೆ ಚುನಾವಣೆಯ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ನಟ ಪ್ರಕಾಶ್‌ ರೈ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತು ಪ್ರಕಾಶ್‌ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಮರಳಿ ಮಣ್ಣಿಗೆ: ಪ್ರಕಾಶ್‌ ರೈ ಲಾಕ್‌ಡೌನ್‌ ದಿನಗಳನ್ನು ಹೀಗೆ ಕಳೆಯುತ್ತಿದ್ದಾರೆ ನೋಡಿ!

2019ರ ಲೋಕಸಭಾ ಚುನಾವಣೆ ವೇಳೆ ಎಂ.ಜಿ ರಸ್ತೆಯಲ್ಲಿ ಅನುಮತಿ ಇಲ್ಲದೇ ನಟ ಪ್ರಕಾಶ್‌ ರೈ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಬಿಬಿಎಂಪಿ ಫ್ಲೈಯಿಂಗ್‌ ಸ್ಕ್ವಾಡ್‌ ಕೇಸ್‌ ದಾಖಲಿಸಿತ್ತು. ನಂತರ ತನಿಖೆ ನಡೆಸಿದ್ದ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು. ಆ ಪ್ರಕರಣ ರದ್ದು ಕೋರಿ ಪ್ರಕಾಶ್‌ ರೈ ಹೈಕೋರ್ಟ್‌ ಮೊರೆ ಹೋಗಿದ್ದರು.