Asianet Suvarna News Asianet Suvarna News

ಉತ್ತರ ಕನ್ನಡ: ವಿದ್ಯುತ್ ಲೈನ್ ಕಿತ್ತು ಹಾಕಿದ ರೈತನ ವಿರುದ್ಧ ಕ್ರಮಕ್ಕೆ ಮುಂದಾದ ಹೆಸ್ಕಾಂ

ಈ ಬಗ್ಗೆ ಮಾಹಿತಿ ಪಡೆದುಕೊಂಡ ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ತೆಗೆದು ಹಾಕಲಾದ ವಿದ್ಯುತ್ ಲೈನ್ ಸರಿಪಡಿಸಿದ್ದಾರಲ್ಲದೇ, ತಪ್ಪಿತಸ್ಥ ರೈತನಿಂದ ದಂಡ ವಸೂಲಿ ಮಾಡಲು ಸಜ್ಜಾಗಿದ್ದಾರೆ. 

HESCOM Action against the Farmer who cut the Power Line at Mundgod in Uttara Kannada grg
Author
First Published Jan 7, 2024, 9:18 PM IST

ಮುಂಡಗೋಡ(ಜ.07): ವಿದ್ಯುತ್ ಇಲಾಖೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ವಿದ್ಯುತ್ ಲೈನ್ ತೆಗೆದು ಬೋರ್‌ವೆಲ್ ಕೊರೆಸಿ ಇತರೇ ರೈತರಿಗೆ ತೊಂದರೆ ಮಾಡಿದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಮುಂಡಗೋಡ ಹೆಸ್ಕಾಂ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ತಾಲೂಕಿನ ಇಂದೂರ (ಕೊಪ್ಪ) ಗ್ರಾಮದಲ್ಲಿ ಮಂಜುನಾಥ ಎಂಬ ರೈತರೊಬ್ಬರು ತಮ್ಮ ಗದ್ದೆಯಲ್ಲಿ ಬೋರ್‌ವೆಲ್ ಕೊರೆಸುವ ಸಂದರ್ಭದಲ್ಲಿ ವಿದ್ಯುತ್ ಇಲಾಖೆಗೆ ಯಾವುದೇ ರೀತಿ ಮಾಹಿತಿ ನೀಡದೆ ಗದ್ದೆಯಲ್ಲಿ ಅಡ್ಡಲಾಗಿದ್ದ ವಿದ್ಯುತ್ ಲೈನ್ ತೆಗೆದು ಹಾಕಿದ್ದಾರೆ. ಇದರಿಂದ ಸುತ್ತಮುತ್ತಲಿನ ಇತರೆ ರೈತರ ಗದ್ದೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗದ್ದೆಗಳಿಗೆ ನೀರು ಹಾಯಿಸಲಾಗದೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಶನಿವಾರ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ತೆಗೆದು ಹಾಕಲಾದ ವಿದ್ಯುತ್ ಲೈನ್ ಸರಿಪಡಿಸಿದ್ದಾರಲ್ಲದೇ, ತಪ್ಪಿತಸ್ಥ ರೈತನಿಂದ ದಂಡ ವಸೂಲಿ ಮಾಡಲು ಸಜ್ಜಾಗಿದ್ದಾರೆ. 

ಉತ್ತರಕನ್ನಡ: ಅಟ್ಟಣಿಗೆ ಯಕ್ಷಗಾನ, 8 ವೇದಿಕೆಗಳಲ್ಲಿ ನಡೆದ "ಜಲಂಧರ ಕಾಳಗ" ಪ್ರಸಂಗ

ಇಲಾಖೆಗೆ ಮಾಹಿತಿ ನೀಡದೆ ವಿದ್ಯುತ್ ಲೈನ್ ಕಿತ್ತೆಸೆದು ಅನಧಿಕೃತವಾಗಿ ಬೋರ್‌ವೆಲ್ ಕೊರೆಸಿದ್ದಲ್ಲದೇ, ಇತರೆ ರೈತರಿಗೆ ತೊಂದರೆ ಮಾಡಿರುವ ರೈತ ಮಂಜುನಾಥಗೆ ನೋಟಿಸ್ ನೀಡಲಾಗುವುದು. ಯಾವುದೇ ಮುಲಾಜಿಲ್ಲದೇ ವಿದ್ಯುತ್ ಇಲಾಖೆಗೆ ಆದ ನಷ್ಟವನ್ನು ಅವರಿಂದ ಭರಿಸಿಕೊಳ್ಳಲಾಗುವುದು ಎಂದು ಮುಂಡಗೋಡ ಹೆಸ್ಕಾಂ ಎಇಇ ವಿನಾಯಕ ಪೇಟಕರ ತಿಳಿಸಿದ್ದಾರೆ.  

Follow Us:
Download App:
  • android
  • ios