ಮೈಸೂರು(ಡಿ.03): ಪ್ರಕೃತಿಯಲ್ಲಿ ಸಾಕಷ್ಟು ಬೆರಗುಗಳು, ಅಚ್ಚರಿಗಳು ನಡೆಯುತ್ತಲೇ ಇರುತ್ತದೆ. ಕೆಲವೊಂದು ವಿಷಯ ನಂಬೋಕೆ ಸಾಧ್ಯವಿಲ್ಲ ಎನ್ನುವಷ್ಟರಮಟ್ಟಿಗೆ ವಿಚಿತ್ರವಾಗಿರುತ್ತದೆ. ಮೈಸೂರಿನ ಬೆಟ್ಟದಪರದಲ್ಲಿ ಕೋಳಿಯೊಂದು 160 ಗ್ರಾಂ ತೂಕದ ಮೊಟ್ಟೆ ಇಟ್ಟಿದೆ.

ಬೆಟ್ಟದಪುರ: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಹರೀಶ್‌ ಎಂಬವರಿಗೆ ಸೇರಿದ ಚಿಕನ್‌ಸ್ಟಾಲ್‌ನಲ್ಲಿ ಗಿರಿರಾಜ ಕೋಳಿಯೊಂದು ಸುಮಾರು 160 ಗ್ರಾಂ ತೂಕವಿರುವ ಮೊಟ್ಟೆಯನ್ನು ಇಡುವುದರ ಮೂಲಕ ಆಶ್ಚರ್ಯ ಉಂಟು ಮಾಡಿದೆ.

50ಕ್ಕೆ ಜಿದ್ದು ಕಟ್ಟಿ ಗಬಗಬನೆ 41 ಮೊಟ್ಟೆ ತಿಂದ ಭೂಪ, ಆಮೇಲೆ ಏನಾಯ್ತು?

ಸಾಧಾರಣವಾಗಿ ಕೋಳಿಗಳು 60 ಗ್ರಾಂನಿಂದ 100 ಗ್ರಾಂವರೆಗೆ ತೂಕವಿರುವ ಮೊಟ್ಟೆಯನ್ನು ಇಡುತ್ತವೆ. ಸುಮಾರು 3 ಕೆ.ಜಿ ತೂಕವಿರುವ ಈ ಕೋಳಿಯೊಂದು ತುಂಬ ಗಾತ್ರದ ಮೊಟ್ಟೆಯನ್ನು ಇಟ್ಟಿರುವುದು ಎಲ್ಲರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಚಿಕನ್‌ ದರ ಮೇಲೆತ್ತಲು 1 ಕೋಟಿ ಕೋಳಿ ಮೊಟ್ಟೆ ನಾಶಕ್ಕೆ ನಿರ್ಧಾರ!