ಚಿಕನ್‌ ದರ ಮೇಲೆತ್ತಲು 1 ಕೋಟಿ ಕೋಳಿ ಮೊಟ್ಟೆ ನಾಶಕ್ಕೆ ನಿರ್ಧಾರ!

ಚಿಕನ್‌ ದರ ಮೇಲೆತ್ತಲು 1 ಕೋಟಿ ಕೋಳಿ ಮೊಟ್ಟೆನಾಶಕ್ಕೆ ನಿರ್ಧಾರ!| ಭಾರತದಲ್ಲಿ ಚಿಕನ್‌ ಬೆಲೆ ಕೆಜಿಗೆ 180 ರು.ನಿಂದ 230 ರು.ವರೆಗೆ ಇದೆ

Indonesia Says Throw Eggs Away to Support Chicken Meat Prices

ಜಕರ್ತ[ಸೆ.06]: ಇಂಡೋನೇಷ್ಯಾದಲ್ಲಿ ಬೇಡಿಕೆ ಕುಸಿದ ಪರಿಣಾಮ ಚಿಕನ್‌ ಬೆಲೆ ಪಾತಾಳಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಚಿಕನ್‌ ದರದಲ್ಲಿ ಪುನಶ್ಚೇತನ ತರುವ ನಿಟ್ಟಿನಲ್ಲಿ ಇಂಡೋನೇಷ್ಯಾ ಸರ್ಕಾರ 1 ಕೋಟಿ ಕೋಳಿ ಮೊಟ್ಟೆಗಳನ್ನು ನಾಶ ಮಾಡುವ ಅಥವಾ ಅವುಗಳನ್ನು ಯಾರಿಗಾದರೂ ನೀಡುವ ಬಗ್ಗೆ ಚಿಂತನೆ ನಡೆಸಿದೆ.

ದೇಶದಲ್ಲಿ ಪ್ರತೀ ಕೇಜಿ ಚಿಕನ್‌ ದರ 30,050 ರುಪಯ್ಯ(2.10 ಡಾಲರ್‌- 150 ರು.) ಆಗಿದ್ದು, ಇದು ಮೂರು ವರ್ಷದ ಕನಿಷ್ಠ ದರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಬೇಯಿಸಿದ ಮೊಟ್ಟೆಗೆ 1700 ರು.!, ಬಾಳೆಹಣ್ಣಿನ ಬಳಿಕ ಮೊಟ್ಟೆ ಕಥೆ!

ಮೊಟ್ಟೆಗಳ ನಾಶ ಅಥವಾ ಮೊಟ್ಟೆಗಳನ್ನು ಯಾರಿಗಾದರೂ ನೀಡಿದ್ದಲ್ಲಿ, ಕೋಳಿ ಮಾಂಸದ ಪೂರೈಕೆಯಲ್ಲಿ ಕೊರತೆ ಉಂಟಾಗಿ ಮಾರುಕಟ್ಟೆಯಲ್ಲಿ ಚಿಕನ್‌ಗೆ ಹೆಚ್ಚು ಬೇಡಿಕೆ ಎದುರಾಗಲಿದ್ದು, ಇದರಿಂದ ಚಿಕನ್‌ ಬೆಲೆಯನ್ನು ಏರಿಸಬಹುದು ಎಂಬುದು ಇಂಡೋನೇಷ್ಯಾ ಸರ್ಕಾರದ ಲೆಕ್ಕಾಚಾರ.

ಸದ್ಯ ಭಾರತದಲ್ಲಿ ಚಿಕನ್‌ ಬೆಲೆ ಕೆಜಿಗೆ 180 ರು.ನಿಂದ 230 ರು.ವರೆಗೆ ಇದೆ.

Latest Videos
Follow Us:
Download App:
  • android
  • ios