ಬೆಂಗಳೂರು[ಸೆ. 04] ಪ್ರವಾಹ ಇಳಿಯಿತು ಎಂದು ಕರ್ನಾಟಕದ ಜನ ನಿಟ್ಟುಸಿರು ಬಿಡುತ್ತಿರುವಾಗಲೇ ವರುಣ ಮತ್ತೆ ತನ್ನ ಆರ್ಭಟ ಆರಂಭಿಸಿದ್ದಾನೆ. ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ

ಕೊಡಗು ಮತ್ತು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಬುಧವಾರದಿಂದ ಮುಂದಿನ 48 ಗಂಟೆಯವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೊಡಗಿನ ಭಾಗಮಂಡಲದಲ್ಲಿ ಭಾರಿ ಮಳೆಯಾಗಿದ್ದು, ನದಿಗಳು ಮತ್ತೆ ಉಕ್ಕಿ ಹರಿಯುತ್ತಿವೆ.  200 ಮಿ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಚೌತಿ ಮಳೆ: ಕರಾವಳಿಯಲ್ಲಿ ಇನ್ನೂ ಮೂರು ದಿನ ಆರೆಂಜ್‌ ಅಲರ್ಟ್‌

ಪ್ರವಾಸಿಗರು ಕೆಲವು ದಿನಗಳ ಕಾಲ ಪ್ರವಾಸಿ ತಾಣಗಳಿರುವ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುವುದನ್ನು ಮುಂದೂಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಒಂದಿಷ್ಟು ಮುನ್ನೆಚ್ಚರಿಕೆ ಪಾಯಿಂಟ್ಸ್ ತಲೆಯಲ್ಲಿ ಇಟ್ಕೊಳ್ಳಿ

1. ವೃದ್ಧರು, ಮಕ್ಕಳು, ಅಬಲರು, ಗರ್ಭಿಣಿ-ಬಾಣಂತಿಯರು ಸುರಕ್ಷಿತ ಪ್ರದೇಶಕ್ಕೆ ತೆರಳುವುದು ಒಳಿತು

2. ದನ ಕರುಗಳನ್ನು ಕೊಟ್ಟಿಗೆಯಲ್ಲಿ ಬಂಧಿಸಿ ಇಡಬೇಡಿ.

3. ಅತಿ ಮುಖ್ಯವಾದ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿಕೊಳ್ಳಿ’

4.  ತುರ್ತು ಸಹಾಯವಾಣಿಗಳ ಸಂಖ್ಯೆ ಸದಾ ನಿಮ್ಮೊಂದಿಗೆ ಇರಲಿ

5. ಮಳೆ ವಾತಾವರಣ ಮತ್ತು ಹತ್ತಿರದ ಹಳ್ಳ ಕೊಳ್ಳಗಳ ನೀರಿನ ಪ್ರಮಾಣದ ಮೇಲೆ ನಿಗಾ ಇರಿಸಿಕೊಳ್ಳಿ

6. ತುರ್ತು ಸಂದರ್ಭ ಎದುರಾಗುವ ಸೂಚನೆ ಸಿಕ್ಕರೆ ಎರಡು- ಮೂರು ದಿನಕ್ಕೆ ಬೇಕಾಗುವಷ್ಟು ಆಹಾರ ಸಿದ್ಧಮಾಡಿಕೊಂಡಿರಿ. ಕೆಡದಿರುವ ಒಣ ಆಹಾರವಾದರೆ ಉತ್ತಮ

7. ಮಕ್ಕಳು ಮತ್ತು ವಯೋವೃದ್ಧರ ಬಗ್ಗೆ ನಿಗಾ ವಹಿಸಿ.. ಸಂಜೆಯಾದ ನಂತರ ಮಳೆಯಲ್ಲಿ ಹೊರಹೋಗದಂತೆ ಜಾಗೃತೆ ವಹಿಸಿ