ಮಲೆನಾಡು ಮಳೆ ಅಬ್ಬರ; ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ KSRTC ಬಸ್!
- ಮಲೆನಾಡಲ್ಲಿ ಮುಂದುವರಿದ ಗಾಳಿ-ಮಳೆ
- ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಸರ್ಕಾರಿ ಬಸ್
- ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿಯಲ್ಲಿ ಘಟನೆ
ಚಿಕ್ಕಮಗಳೂರು (ಸೆ.13) : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮಳೆ ಅಬ್ಬರ ಇಂದು ಕೂಡ ಮುಂದುವರಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ ಗಾಳಿ ಮಳೆ ಸಹಿತ ಭರ್ಜರಿ ಮಳೆ ಸುರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಚರಂಡಿಗೆ ಇಳಿದಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನಲ್ಲೂ ನಿರಂತರ ಮಳೆ: ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ!
ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಮೂಡಿಗೆರೆ(Moodigere) ತಾಲೂಕಿನ ಗುತ್ತಿಹಳ್ಳಿ(Guttihalli) ಗ್ರಾಮದಲ್ಲಿKSRTC ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಇಳಿದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ರಸ್ತೆ ಬದಿಯ ದಿಣ್ಣೆಗೆ ಒರಗಿ ಬಸ್ಸಿನ ಅರ್ಧಭಾಗ ವಾಲಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಚರಂಡಿಗೆ ಸಿಲುಕಿಕೊಂಡಿದ್ದರಿಂದ ಪ್ರಯಾಣಿಕರು ಬಸ್ಸಿನಲ್ಲೇ ಸಿಲುಕುವಂತಾಗಿತ್ತು. ಬಸ್ ನ ಮುಖ್ಯ ಡೋರ್ ತೆಗೆಯಲು ಸಾಧ್ಯವಾಗದೆ ಯಾರೂ ಇಳಿಯಲು ಆಗದೆ ಪರದಾಡುವಂತಾಗಿತ್ತ. ಬಳಿಕ
ಡ್ರೈವರ್ ಸೀಟಿನಿಂದ ಎಲ್ಲಾ ಪ್ರಯಾಣಿಕರು ಇಳಿಯಬೇಕಾಯಿತು.ಬಸ್ಸಿನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಡೋರ್ ನಿಂದಲೇ ಇಳಿದರು.
ಇಂದು ಬೆಳಗ್ಗೆ ಗುತ್ತಿಹಳ್ಳಿಯಿಂದ ಹೊರಟ ಬಸ್ಸು ಬೆಟ್ಟಗೆರೆ ಮೂಲಕ ಮೂಡಿಗೆರೆಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ, ಮೂಡಿಗೆರೆ ತಾಲೂಕಿನ ಹಲವೆಡೆ ಮಳೆ ಇನ್ನೂ ತಗ್ಗಿಲ್ಲವಾದ್ದರಿಂದ ರಸ್ತೆಯು ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವಾಗಿದೆ. ಪ್ರಯಾಣಿಕರು ಲೋಕೋಪಯೋಗಿ ಇಲಾಖೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ 391.57 ಕೋಟಿ ಹಾನಿ, ಮಳೆಗೆ ಒಟ್ಟು 6 ಮಂದಿ ಬಲಿ