ಕೊಪ್ಪಳ ಜಿಲ್ಲೆ ಅಂದರೆ ಯಾರಿಗೆ ತಾನೇ ಗೋತ್ತಿಲ್ಲ ಹೇಳಿ.‌ ಬರಗಾಲಕ್ಕೆ ಹಾಗೂ ಬಿಸಿಲಿಗೆ ಪ್ರಸಿದ್ಧಿ ಪಡೆದಿರುವ ಜಿಲ್ಲೆ ಇದಾಗಿದೆ. ಆದರೆ ಈ ಜಿಲ್ಲೆಯಲ್ಲಿ ಈ ವರ್ಷ ಮಳೆ ಸಾಕು ಸಾಕಾಗೊ ಹೋಗಿದೆ.  

ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಅ.11): ಆ ಜಿಲ್ಲೆ ಬಿಸಿಲು ನಾಡು ಎಂದು ಪ್ರಸಿದ್ಧಿ ಪಡೆದಿರುವ ಜಿಲ್ಲೆ. ಆದರೆ ಈ ವರ್ಷ ಮಾತ್ರ ಆ ಜಿಲ್ಲೆ ಮಳೆಯ ನಾಡೆಂದು ಪ್ರಸಿದ್ಧಿ ಪಡೆದಿದೆ. ಅಷ್ಟೇ ಅಲ್ಲ ಆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಕೊಪ್ಪಳ ಜಿಲ್ಲೆ ಅಂದರೆ ಯಾರಿಗೆ ತಾನೇ ಗೋತ್ತಿಲ್ಲ ಹೇಳಿ.‌ ಬರಗಾಲಕ್ಕೆ ಹಾಗೂ ಬಿಸಿಲಿಗೆ ಪ್ರಸಿದ್ಧಿ ಪಡೆದಿರುವ ಜಿಲ್ಲೆ ಇದಾಗಿದೆ. ಆದರೆ ಈ ಜಿಲ್ಲೆಯಲ್ಲಿ ಈ ವರ್ಷ ಮಳೆ ಸಾಕು ಸಾಕಾಗೊ ಹೋಗಿದೆ. ಜಿಲ್ಲೆಯಲ್ಲಿ ಈ ವರ್ಷ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಜನರಂತು ಮಳೆ ಅಂದರೆ ಸಾಕಪ್ಪ ಈ‌‌ ಮಳೆ ಸಹವಾಸ ಎನ್ನುತ್ತಿದ್ದಾರೆ. ನಿನ್ನೆ ಸುರಿದ ಮಳೆಗೆ ಕುಕನೂರು ತಾಲೂಕಿನ‌ ದ್ಯಾಂಪುರ ಗ್ರಾಮದ ಬಳಿ ಇರುವ ರೈಲ್ವೇ ಕೆಳಸೇತುವೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಅಷ್ಟೇ ಅಲ್ಲ ಇದನ್ನು ನೋಡಿದವರಿಗೆ ಇದೇನು ಕೆಳಸೇತುವೆಯೋ ಅಥವಾ ಹಳ್ಳವೋ ಎನ್ನುವ ರೀತಿಯಲ್ಲಿ ಕೇಳಸೇತುವೆಯಲ್ಲಿ ನೀರು ನಿಂತುಕೊಂಡಿತ್ತು. ಇದನ್ನು ನೋಡಿದವರು ಇದು ಖಂಡಿತ ಹಳ್ಳವೇ ಎನ್ನುತ್ತಿದ್ದರು. ಇನ್ನು ದ್ಯಾಂಪುರ ಹಾಗೂ ತೊಂಡಿಹಾಳ ಗ್ರಾಮಗಳ ಮದ್ಯೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ರೈಲ್ವೇ ಕೆಳಸೇತುವೆ ನಿರ್ಮಿಸಿದ್ದಾರೆ. ಆದರೆ ಈ ಕೆಳಸೇತುವೆಯನ್ನು ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಇದರಿಂದಾಗಿ ಕೆಳಸೇತುವೆಯ ಪಕ್ಕದಲ್ಲಿರುವ ಹಳ್ಳದ ನೀರು ಜಮೀನಿಗೆ ನುಗ್ಗಿ ಬಳಿಕ ಆ ನೀರು ಕೆಳಸೇತುವೆಗೆ ನುಗ್ಗುತ್ತದೆ. ಇನ್ನು ನೀರಿನ ರಭಸಕ್ಕೆ ಪಕ್ಕದ ಜಮೀನುಗಳ ಮಣ್ಣೆಲ್ಲ ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Dharwad Heavy Rains: ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

ಮಳೆಗೆ ಕೊಚ್ಚಿಕೊಂಡು ಹೋದ ರಸ್ತೆ: ಇನ್ನು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅನೇಕ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.‌ಅದರಲ್ಲಿ ವಿಶೇಷವಾಗಿ ನಿರಂತರ ಮಳೆಗೆ ದ್ಯಾಂಪುರ ಹಾಗೂ ತೊಂಡಿಹಾಳ ಮದ್ಯೆ ಇರುವ ರಸ್ತೆ ಅನೇಕ ಕಡೆಗಳಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಜನರು ಪಡಬಾರದ ಕಷ್ಟಪಟ್ಟಿದ್ದಾರೆ.

Koppal Rains: ಭಾರೀ ಮಳೆಗೆ ಹಳ್ಳದಂತಾದ ರೈಲ್ವೆ ಬ್ರಿಡ್ಜ್!

ಇನ್ನು ಹಳ್ಳದ ನೀರು ಸರಿಯಾಗಿ ಹೋಗಲು ಮಾರ್ಗ ಮಾಡದ ಹಿನ್ನಲೆಯಲ್ಲಿ ಜಮೀನಿನ‌ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಇದನ್ನು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕಚಕೆ ತಂದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ.‌ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೇತ್ತು ಸಮಸ್ಯೆ ಬಗೆಹರಿಸಬೇಕಿದೆ.