ಕೋಲಾರ(ಮಾ.21): ಕೋಲಾರ ನಗರ ಸೇರಿದಂತೆ ಬಂಗಾರಪೇಟೆ, ಮಾಲೂರು ಹಾಗು ಶ್ರೀನಿವಾಸಪುರ ತಾಲೂಕಿನ ಕೆಲವು ಭಾಗಗಳಲ್ಲಿ ಶುಕ್ರವಾರ ಜೋರು ಮಳೆ ಸುರಿಯಿತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುಮಾರು ಮುಕ್ಕಾಲು ಗಂಟೆ ಕಾಲ ಸುರಿಯಿತು.

ಫತ್ತಮ ಬೆಳೆ ನಿರೀಕ್ಷೆ:

ಮಳೆಯಿಂದ ಕಳೆದ ಕೆಲವು ದಿನಗಳಿಂದ ಬಿಸಿಲಿನಿಂದ ಕಾದಿದ್ದ ಇಳೆಯನ್ನು ತಂಪೇರಿಸಿತು. ಮಳೆಯು ಭೂಮಿಯನ್ನು ಊಳುವಷ್ಟರ ಮಟ್ಟಿಗೆ ತೇವಗೊಂಡಿದೆ. ಅಲ್ಲದೆ ಈ ಮಳೆಯು ಮಾವಿನ ಗಿಡಗಳಿಗೆ ತಂಪು ತಂದಿದೆ, ಕಳೆದ ಕೆಲವರು ದಿವಸಗಳಿಂದ ಬಿಸಿಲಿನ ತಾಪಮಾನದಿಂದ ಇಳುವರಿ ಬಗ್ಗೆ ಚಿಂತೆಗೊಳಗಾಗಿದ್ದ ರೈತರು ಮಳೆಯಿಂದ ಉತ್ತಮ ಫಸಲು ದೊರೆಯುವ ಖುಷಿಯಲ್ಲಿದ್ದಾರೆ.

ಕೋಲಾರ: ಕೊರೋನಾ ಹಿನ್ನೆಲೆ 3 ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಬೀಗ..!

ಜಿಲ್ಲೆಯಲ್ಲಿ ತೇವಾಂಶದ ಕೊರತೆಯಿಂದ ಮಾವಿನ ಮರಗಳಿಗೆ ರೈತರು ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿದ್ದರು, ಆದರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಮಳೆ ಆಗಿದೆ ಎನ್ನುವುದರ ಬಗ್ಗೆ ರೈತರು ತಿಳಿಸಿದ್ದಾರೆ, ಈ ಮಳೆಯಿಂದ ಮಾವು ಸೇರಿದಂತೆ ವಿವಿಧ ಬೆಳೆಗಳಿಗೆ ಅನುಕೂಲ ಆಗಲಿದೆ.

ದ್ರಾಕ್ಷಿ, ಮಾವಿಗೆ ತೊಂದರೆ ಇಲ್ಲ

ಆಲಿಕಲ್ಲು ಮತ್ತು ಬಿರುಗಾಳಿ ಮಳೆಯಾದರೆ ಮಾವು ಮತ್ತು ದ್ರಾಕ್ಷೆ ಹಾಗು ಬಾಳೆ ಬೆಳೆಗೆ ತೊಂದರೆ ಆಗುತ್ತದೆ. ಆದರೆ ಜಿಲ್ಲೆಯಲ್ಲಿ ಆಲಿಕಲ್ಲು, ಬಿರುಗಾಳಿ ಮಳೆ ಆಗಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ ತಿಳಿಸಿದರು.