Asianet Suvarna News Asianet Suvarna News

ಮಳೆ ಅವಾಂತರ, ರಾತ್ರಿಯಿಡಿ ಪರದಾಡಿದ ನಿವಾಸಿಗಳು

  • ಮಳೆ ಅವಾಂತರ, ರಾತ್ರಿಯಿಡಿ ಪರದಾಡಿದ ನಿವಾಸಿಗಳು
  • ಕೊಟ್ಟೂರೇಶ್ವರ ದೇವಸ್ಥಾನ ಪಕ್ಕದ ಅಂಗನವಾಡಿಯಲ್ಲಿ ಕಾಳಜಿ ಕೇಂದ್ರ ಆರಂಭ
  • -ಸ್ಥಳಕ್ಕೆ ಶಾಸಕ ಅರುಣಕುಮಾರ ಪೂಜಾರ ಭೇಟಿ, ಸಾರ್ವಜನಿಕರ ಸಮಸ್ಯೆ ಆಲಿಕೆ

 

Heavy rainfall at ranebennooor the residents were stranded overnight rav
Author
Hubli, First Published Aug 5, 2022, 12:37 PM IST

ರಾಣಿಬೆನ್ನೂರು (ಆ.5) : ನಗರದಲ್ಲಿ ಬುಧವಾರ ಸಂಜೆಯಿಂದ ತಡರಾತ್ರಿಯ ವರೆಗೂ ಎಡಬಿಡದೇ ಸುರಿದ ಮಳೆ ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಆವಾಂತರ ಸೃಷ್ಟಿಸಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ. ಮಳೆಯ ರುದ್ರನರ್ತನಕ್ಕೆ ಇಲ್ಲಿಯ ಚಿದಂಬರ ನಗರ, ಪಂಪಾನಗರ, ಚೌಡೇಶ್ವರಿ ಬಡಾವಣೆ, ಗೌರಿಶಂಕರ ನಗರ, ಈಶ್ವರ ನಗರ, ಬನಶಂಕರಿ ನಗರ, ಮೇಡ್ಲೇರಿ ರಸ್ತೆ, ದುರ್ಗಾ ಸರ್ಕಲ್‌, ಸಿದ್ದೇಶ್ವರ ನಗರ ಸೇರಿದಂತೆ ನಗರದ ವಿವಿಧ ಭಾಗಗಳು ಜಲಾವೃತ್ತಗೊಂಡು ಜನರು ರಾತ್ರಿಯಿಡಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು.

Haveri Rains; ಆಳೆತ್ತರದ ನೀರಲ್ಲಿ ಪರದಾಟ, ಜೀವ ಪಣಕ್ಕಿಟ್ಟು ರೈತರ ಹೋರಾಟ

ಇದಲ್ಲದೆ ನಗರದ ದೊಡ್ಡಕೆರೆ ಕೋಡಿ ಬಿದ್ದ ಕಾರಣ ಕೊಟ್ಟೂರೇಶ್ವರ ನಗರ ಹಾಗೂ ದೇವಸ್ಥಾನ ಸ್ವಲ್ಪ ಸಮಯ ಜಲಾವೃತಗೊಂಡಿತ್ತು. ಕೆಲವೊಂದು ಕಡೆ ಮಳೆ ನೀರು ಮನೆಯೊಳಗೆ ನುಗ್ಗಿದ್ದು ಜನರು ಮನೆಯಿಂದ ನೀರನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದರು. ರಾಜಕಾಲುವೆ ಒತ್ತುವರಿಯಾದ ಕಾರಣ ಹಾಗೂ ಅದರಲ್ಲಿ ಸರಿಯಾಗಿ ನೀರು ಹೋಗದ ಕಾರಣ ವಿಪರೀತ ಮಳೆಯಿಂದ ನಗರ ತುಂಬೆಲ್ಲಾ ಜಲಾವೃತಗೊಂಡಿದೆ. ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಸ್ಥಾನ ಹಾಗೂ ಚೌಡೇಶ್ವರಿ ಬಡಾವಣೆ ಪ್ರದೇಶದಲ್ಲಿ ಹಾಯ್ದುಹೋಗಿರುವ ರಾಜಕಾಲುವೆ ಮಳೆಯಾದರೆ ಸುತ್ತಮುತ್ತಲಿನ ಪ್ರದೇಶವೆಲ್ಲಾ ಜಲಾವೃತಗೊಳ್ಳುವುದು ಮಾಮೂಲಾಗಿದ್ದು ಇಲ್ಲಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇಲ್ಲಿಯ ವರೆಗೂ ನಗರಸಭೆ ಅಧಿಕಾರಿಗಳಾಗಲಿ ಹಾಗೂ ಸದಸ್ಯರಾಗಲಿ ಸಮಸ್ಯೆ ಕುರಿತು ಯಾವುದೇ ಸೂಕ್ತ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ ಎಂಬುಂದು ಈ ಭಾಗದ ಜನರ ಆರೋಪವಾಗಿದೆ.

ಜನರ ಸ್ಥಳಾಂತರ:

ಇಲ್ಲಿಯ ಕೊಟ್ಟೂರೇಶ್ವರನಗರದ ದೊಡ್ಡಕೆರೆ ತುಂಬಿದ ಕಾರಣ ಅಲ್ಲಿಯ ಸುತ್ತಮುತ್ತಲಿನ ಮನೆಗಳು ಜಲಾವೃತಗೊಂಡವು. ಇದರಿಂದ ಇಲ್ಲಿಯ ಜನರನ್ನು ಸ್ಥಳಾಂತರ ಮಾಡಲಾಯಿತು. ಕೊಟ್ಟೂರೇಶ್ವರ ದೇವಸ್ಥಾನ ಪಕ್ಕದ ಅಂಗನವಾಡಿಯಲ್ಲಿ ಬುಧವಾರ ರಾತ್ರಿ ಕಾಳಜಿ ಕೇಂದ್ರ ತೆರೆಲಾಗಿದ್ದು, 150 ಜನ ಆಶ್ರಯ ಪಡೆದಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಬೈಕ್‌ ಸವಾರ:

ಈಶ್ವರ ನಗರದ ಅಯ್ಯಪ್ಪ ಸ್ವಾಮಿ ಬಳಿ ಮಳೆಯಲ್ಲಿ ಬೈಕ್‌ ಸವಾರ ಸಂಚಾರಿಸುವಾಗ ಕಾಲುವೆಯಲ್ಲಿ ಮುಳುಗಿದ ಘಟನೆ ನಡೆಯಿತು. ಬೈಕ್‌ ಕಾಲುವೆಯಲ್ಲಿ ಕೊಚ್ಚಿ ಹೋಯಿತು. ಬೈಕ್‌ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಶಾಸಕರ ಭೇಟಿ:

ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ಪ್ರದೇಶಗಳಿಗೆ ಶಾಸಕ ಅರುಣಕುಮಾರ ಪೂಜಾರ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೈಗೊಳ್ಳಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ದೊಡ್ಡಕೆರೆ ಪಕ್ಕ ಇರುವ ಮನೆಗಳು ಸ್ಥಳಾಂತರ ಕುರಿತು ಜನರೊಂದಿಗೆ ಚರ್ಚೆಸಲಾಗಿದೆ. ಕೆಲವು ಜನರು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ಒಪ್ಪಿಲ್ಲ. ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಿಎಂ ಜೊತೆ ಮಾತನಾಡಿದ್ದು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಶಾಶ್ವತ ಪರಿಹಾರಕ್ಕೆ ಒತ್ತು ನೀಡಲಾಗುವುದು. ಸರ್ಕಾರ ನಮ್ಮದೆಯಿದ್ದು ಜನರು ಸಹಕಾರ ನೀಡಬೇಕು. ಮಳೆಯಿಂದಾಗಿ ಬಿದ್ದ ಮನೆಗಳಿಗೆ .95ಸಾವಿರ ಪರಿಹಾರ ನೀಡಲಾಗುತ್ತಿದೆ. ಅದನ್ನು .5 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ರಾಜಕಾಲುವೆ ಸರ್ವೇ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Follow Us:
Download App:
  • android
  • ios