ರಾಯಚೂರು ಜಿಲ್ಲಾದ್ಯಂತ ಗುಡುಗು-ಮಿಂಚಿನ ಭಾರೀ ಮಳೆ
ನಗರ ಸೇರಿದಂತೆ ಜಿಲ್ಲೆ ಹಲವು ಪ್ರದೇಶಗಳಲ್ಲಿ ಗುಡು ಮಿಂಚಿನ ಓಟದಡಿ ಗಾಳಿ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯವಸ್ತಗೊಂಡಿದೆ. ಇಷ್ಟುದಿನ ಬೇಸಿಗೆಯ ಬಿರುಬಿಸಿಲಿಗೆ ಬಸವಳಿದ ಜನಸಾಮಾನ್ಯರು ಅಕಾಲಿಕ ಮಳೆಯ ತಂಪಿನ ಅನುಭವದ ಸಿಹಿಯ ಜೊತೆಗೆ ಅನಾಹುತದ ಕಹಿಯನ್ನು ಸವಿದಿದ್ದಾರೆ.
ರಾಯಚೂರು (ಏ.29) : ನಗರ ಸೇರಿದಂತೆ ಜಿಲ್ಲೆ ಹಲವು ಪ್ರದೇಶಗಳಲ್ಲಿ ಗುಡು ಮಿಂಚಿನ ಓಟದಡಿ ಗಾಳಿ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯವಸ್ತಗೊಂಡಿದೆ. ಇಷ್ಟುದಿನ ಬೇಸಿಗೆಯ ಬಿರುಬಿಸಿಲಿಗೆ ಬಸವಳಿದ ಜನಸಾಮಾನ್ಯರು ಅಕಾಲಿಕ ಮಳೆಯ ತಂಪಿನ ಅನುಭವದ ಸಿಹಿಯ ಜೊತೆಗೆ ಅನಾಹುತದ ಕಹಿಯನ್ನು ಸವಿದಿದ್ದಾರೆ.
ಶುಕ್ರವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ದಟ್ಟವಾಗಿ ಕವಿದ ಮೋಡದ ವಾತಾವರಣದಲ್ಲಿ ಭಾರಿ ಪ್ರಮಾಣದ ಗುಡುಗು, ಮಿಂಚಿನಿಂದ ಕೂಡಿದ ಬಿರುಗಾಳಿ ಮಳೆ ಸುರಿದಿದ್ದು ಇದರ ಪರಿಣಾಮವಾಗಿ ವಿವಿಧ ಕಡೆ ಮರ-ಗಿಡಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತಗ್ಗು ಪ್ರದೇಶಗಳ ಮನೆಗಳು, ಕಚೇರಿಗಳಲ್ಲಿ ನೀರು ನುಗ್ಗಿದೆ. ಮುಖ್ಯರಸ್ತೆಗಳಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೀತ್ರ ಸಮಸ್ಯೆ ಉಂಟಾಯಿತು. ಭಾರಿ ಗಾಳಿ-ಮಳೆ ಆರಂಭವಾಗುತ್ತಿದ್ದಂತೆಯೇ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಸುಮಾರು ಐದಾರು ತಾಸು ಕರೆಂಟಿಲ್ಲದೇ ಜನರು ಪರದಾಡಿದರು.
ಮಳೆಯ ನಡುವೆಯೇ ಪ್ರಧಾನಿಯ ಕಟೌಟ್ ಒರೆಸುತ್ತಾ ನಿಂತ ಅಭಿಮಾನಿ, ಮೋದಿನೇ ನಮ್ಮ ದೇವರೆಂದ!
ನಗರದಲ್ಲಿ ಸುರಿದ ಮಳೆಯಿಂದಾಗಿ ರಾಜೇಂದ್ರ ಗಂಜ್ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ತಂದಿದ್ದ ಭತ್ತ ಸೇರಿ ಇತರೆ ಬೆಳೆಗಳು ಮಳೆ ನೀರಿಯಲ್ಲಿ ತೊಯ್ದವು, ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಕಳೆದ 351 ದಿನಗಳಿಂದ ಏಮ್ಸ್ ಹೋರಾಟ ಸಮಿತಿ ಧರಣಿ ನಡೆಸುತ್ತಿ ಪೆಂಡಾಲ್ ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಸುಮಾರು ನಾಲ್ಕೈದು ಮರಗಳು ನೆಲಕ್ಕುರುಳಿದರೆ, ಕೃಷಿ ವಿವಿ ಆಡಳಿತ ಭವನದಲ್ಲಿ ಗಾಳಿಯ ರಭಸಕ್ಕೆ ಗಾಜಿನ ಬಾಗಿಲು ತೆರೆದುಕೊಂಡು ಮಳೆ ನೀರು ಒಳ ನುಗ್ಗಿದೆ. ಜಿಲ್ಲಾ ನ್ಯಾಯಾಧೀಶರ ಮನೆ ಆವರಣದಲ್ಲಿ ಮರ ಉರುಳಿದರೆ, ಡ್ಯಾಡಿ ಕಾಲನಿಯ ಹಳೆಯ ಆರ್‌ಡಿಎ ಕಚೇರಿ ಎದುರಿನ ಮರ ಉರುಳಿದ್ದು, ಸಮೀಪದ ರಾಂಪುರದಲ್ಲಿ ಜೋರಾದ ಗಾಳಿಗೆ ಗಿಡಗಳು ನೆಲಕ್ಕುರುಳಿವೆ.
ಮಳೆಯಿಂದಾಗಿ ನಗರದ ವåಹಾವೀರ ವೃತ್ತದಿಂದ ಗಾಂಧಿವೃತ್ತದವರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲೆಲ್ಲ ಮಳೆ ನೀರು ಸಂಗ್ರಹಗೊಂಡ ಪರಿಣಾಮ ವಾಹನ ಸವಾರರು ಪರದಾಡಿರುವುದು ಕಂಡು ಬಂದಿತು.
ಚರಂಡಿ ನೀರು ರಸ್ತೆಗಳ ಮೇಲೆಲ್ಲ ಹರಿದು ಬಂದು ಸಮಸ್ಯೆ ಎದುರಿಸುವಂತಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ದಟ್ಟಕಾರ್ಮೋಡ ಆವರಿಸಿ ಗುಡುಗು ಸಿಡಿಲಾರ್ಭಟ ಜೋರಾಗಿತ್ತು. ಗ್ರಾಮೀಣ ಭಾಗದಲ್ಲೂ ಸಾಕಷ್ಟುಕಡೆ ಮರಗಳು ಉರುಳಿದ್ದು, ವಿದ್ಯುತ್ ವೈರ್‌ಗಳು ಹಾನಿಗೀಡಾಗಿವೆ. ಇದರಿಂದ ವಿದ್ಯುತ್ ಕಡಿತಗೊಂಡಿತ್ತು.
ಬೆಂಗಳೂರಿನಲ್ಲಿ ನಿನ್ನೆ ವರ್ಷದ ಅತಿ ಹೆಚ್ಚು ಬಿಸಿಲು: 36.5ಕ್ಕೆ ತಲುಪಿದ ಉಷ್ಣಾಂಶ
ಆದರೆ, ಕೆಲವು ಕಡೆಗಳಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮಗಳಿಗೆ ವರುಣ ಅಡ್ಡಿಯಾಗಿದ್ದು, ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಳೆಯಲ್ಲಿಯೇ ಭಾಷಣೆ ಮಾಡಿದರು. ನೆಚ್ಚಿನ ನಾಯಕನ ಭಾಷಣವನ್ನು ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಜನರು ಮಳೆಯಲ್ಲಿಯೇ ನಿಂತು ಕೇಳಿದರು. ಇನ್ನು ಬೇರೆಕಡೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮಳೆಯಿಂದಾಗಿ ಪ್ರಚಾರಕ್ಕೆ ಅಡ್ಡಿಯುಂಟಾಗಿದ್ದರಿಂದ ಪೇಚಾಡಿದರು. ಗುರುವಾರ ಸಂಜೆ ಕೂಡ ಕೆಲ ಕಾಲ ಮಳೆ ಸುರಿದಿದ್ದರಿಂದ ಪ್ರಚಾರಕ್ಕೆ ಅಡ್ಡಿಯಾಗಿತ್ತು. ಆದರೆ, ಹೆಚ್ಚು ಕಾಲ ಸಮಸ್ಯೆಯಾಗಲಿಲ್ಲ. ಶುಕ್ರವಾರ ಮಾತ್ರ ಮಧ್ಯಾಹ್ನದಿಂದ ಸಂಜೆವರೆಗೂ ಜೋರು ಮಳೆ ಸುರಿದಿದ್ದು, ನಂತರ ಜಿಟಿ ಜಿಟಿ ಸುರಿದ ಪರಿಣಾಮ ಪ್ರಚಾರ ಕಾರ್ಯಗಳಿಗೆ ಅಡ್ಡಿಯಾಗಿತ್ತು.
ಅಕಾಲಿಕ ಮಳೆ; ಸಂಕಷ್ಟದಲ್ಲಿ ರೈತ:
ಸಿರವಾರ: ಶುಕ್ರವಾರ ಸಂಜೆ ಸುರಿದ ಅಕಾಲಿಕ ಮಳೆಗೆ ತಾಲ್ಲೂಕಿನಾದ್ಯಂತ ಕಟಾವು ಮಾಡಿದ್ದ ಭತ್ತವು ಮಳೆ ನೀರು ಪಾಲಾಗಿದ್ದು, ರೈತರು ಸಂಕಷ್ಟಅನುಭವಿಸುವಂತಾಗಿದೆ.
ತುಂಗಾಭದ್ರ ಎಡದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ಎಕರೆಯಲ್ಲಿ ಬೆಳದ ಭತ್ತದ ಬೆಳೆಯು ಉತ್ತಮ ಇಳುವರಿಯೊಂದಿಗೆ ಕಟಾವು ಮಾಡಲಾಗಿದ್ದು, ಸದ್ಯದ ಸಮಯದಲ್ಲಿ ಭತ್ತದ ದರವೂ ಉತ್ತಮವಿದೆ. ಆದರೆ ಕಟಾವು ಮಾಡಿ ಇನ್ನೇನು ಚೀಲದಲ್ಲಿ ತುಂಬಿ ಮಾರಾಟ ಮಾಡಬೇಕಾಗಿದ್ದ ರೈತನಿಗೆ ಮಳೆಯು ಸಂಕಷ್ಟತಂದೊಡ್ಡಿದೆ. ಭತ್ತ ನಾಟಿ ಮಾಡಿದಾಗಿನಿಂದ ಕಟಾವಿನವರೆಗೂ ಯಾವುದೇ ತೊಂದರೆ ಅನುಭವಿಸದ ರೈತ ಕೊನೆಗೆ ಅಕಾಲಿಕ ಮಳೆಯು ಸಂಕಷ್ಟಕೀಡು ಮಾಡಿದೆ.