ಚಾಮರಾಜನಗರ(ಮೇ 23): ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಚಾಮರಾಜನಗರ ಜಿಲ್ಲೆಯಲ್ಲಿ ಮೋಡ ಇರುವ ವಾತಾವರಣವಿದ್ದು, ಮೇ 23ರಿಂದ 25 ರವರೆಗೆ ಲಘು ಮಳೆ ಬೀಳುವ ಸಾಧ್ಯತೆ ಇದ್ದು, ಮೇ 26 ಮತ್ತು 27 ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.

ಗರಿಷ್ಠ ಉಷ್ಣಾಂಶ 26-33 ಸೆ. ಮತ್ತು ಕನಿಷ್ಠ ಉಷ್ಣಾಂಶ 18-21 ಸೆ.ವರೆಗೆ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ 83-89 ರವರೆಗೆ ಮತ್ತು ಮಧ್ಯಾಹ್ನದ ಗಾಳಿಯ ತೇವಾಂಶ ಶೇ. 26-52 ಮತ್ತು ಗಾಳಿಯು ಗಂಟೆಗೆ ಸರಾಸರಿ 14-20 ಕಿಲೋಮೀಟರ್‌ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ಕೃಷಿ ಹವಾಮಾನ ತಜ್ಞ ಎಚ್‌.ಪಿ. ರಜತ್‌ ತಿಳಿಸಿದ್ದಾರೆ.

ಆತಂಕದಲ್ಲಿದ್ದ ಮಂದಿಗೆ ಅಮೇಜಾನ್‌ ಆಫರ್; 50ಸಾವಿರ ಉದ್ಯೋಗವಕಾಶ!

ರೋಹಿಣಿ ಮಳೆ ಪ್ರಾರಂಭ: ಮೇ 25 ರಿಂದ ಜೂ. 7ರವರೆಗೆ ಇದ್ದು, ಈ ಅವಧಿಯಲ್ಲಿ ಕಪ್ಪು ಅಥವಾ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣಿನಲ್ಲಿ ಬಸಿಕಾಲುವೆ ನಿರ್ಮಿಸುವುದರಿಂದ ಹೆಚ್ಚು ಮಳೆಯಾದ ಸಂದಭÜರ್‍ದಲ್ಲಿ ನೀರು ಬಸಿದು ಹೋಗಲು ಸಹಕರಿಯಾಗಲಿದೆ ಎಂದು ತಿಳಿಸಿದ್ದಾರೆ.

ಕರಾಚಿ ವಿಮಾನ ದುರಂತ ನೋಡಿ ನಕ್ಕ ಭಾರತೀಯರನ್ನು ಸ್ಯಾಡಿಸ್ಟ್ ಎಂದ ಪಾಕ್ ನೆಟ್ಟಿಗರು