ಸಂಜೆ 5ಕ್ಕೆ ಸುಮಾರಿಗೆ ಮಳೆ ಆರಂಭವಾಯಿತು. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಕಬ್ಬನ್‌ ಪಾರ್ಕ್ನಲ್ಲಿ ಐದಕ್ಕೂ ಅಧಿಕ ಮರ ಬುಡ ಸಮೇತ ಧರಗುರುಳಿವೆ. ಉಳಿದಂತೆ 80ಕ್ಕೂ ಅಧಿಕ ಮರದ ರಂಬೆ ಕೊಂಬೆಗಳು ಮುರಿದು ಬಿದ್ದಿವೆ.

ಬೆಂಗಳೂರು(ಮೇ.21): ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬಿರುಗಾಳಿ, ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ 175ಕ್ಕೂ ಅಧಿಕ ಮರ ಹಾಗೂ ಮರದ ರಂಬೆ ಕೊಂಬೆಗಳು ಧರೆಗುರುಳಿ ಬಸ್‌, ಆಟೋ, ಬೈಕ್‌ ಹಾಗೂ ಕಾರುಗಳು ಜಖಂಗೊಂಡಿವೆ. ನಗರದ ಒಂದರೆಡು ಕಡೆ ಆಲಿಕಲ್ಲು ಬಿದ್ದ ವರದಿಯಾಗಿದೆ.

ಸಂಜೆ 5ಕ್ಕೆ ಸುಮಾರಿಗೆ ಮಳೆ ಆರಂಭವಾಯಿತು. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಕಬ್ಬನ್‌ ಪಾರ್ಕ್ನಲ್ಲಿ ಐದಕ್ಕೂ ಅಧಿಕ ಮರ ಬುಡ ಸಮೇತ ಧರಗುರುಳಿವೆ. ಉಳಿದಂತೆ 80ಕ್ಕೂ ಅಧಿಕ ಮರದ ರಂಬೆ ಕೊಂಬೆಗಳು ಮುರಿದು ಬಿದ್ದಿವೆ.

Monsoon In India: ನಾಲ್ಕು ದಿನ ತಡವಾಗಿ ಕೇರಳಕ್ಕೆ ಮಾನ್ಸೂನ್‌ ಪ್ರವೇಶ, ಈ ವರ್ಷ ಸಾಮಾನ್ಯ ಮಳೆ!

ಲಾಲ್‌ಬಾಗ್‌ನಲ್ಲಿಯೂ ನಾಲ್ಕಕ್ಕೂ ಅಧಿಕ ಮರ ಸಂಪೂರ್ಣವಾಗಿ ಧರೆಗುರುಳಿದರೆ, 15ಕ್ಕೂ ಅಧಿಕ ಮರದ ರಂಬೆ ಕೊಂಬೆಗಳು ಬಿದ್ದಿವೆ. ಅಲ್ಲದೇ, ಕುಮಾರಸ್ವಾಮಿ ಲೇಔಟ್‌ನಲ್ಲಿ ಮೂರು ಮರ, ಪದ್ಮನಾಭನಗರ, ಯುಬಿ ಸಿಟಿ ಬಳಿ ತಲಾ 2 ಮರ, ಬನಶಂಕರಿ ಪೊಲೀಸ್‌ ಠಾಣೆ ಬಳಿ, ಕಸ್ತೂರಿ ಬಾ ರಸ್ತೆ, ಜೆಪಿ ನಗರ 6ನೇ ಬ್ಲಾಕ್‌, ಬಿವಿಕೆ ಅಯ್ಯಂಗಾರ್‌ ರಸ್ತೆ, ಬಾಣಸವಾಡಿ ರಿಂಗ್‌ ರಸ್ತೆ, ಸುಬ್ಬಯ್ಯ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ಕೆಜಿ ರಸ್ತೆ, ಹನುಮಂತನಗರ, ಬಳೇಪೇಟೆ, ಹೊಸಕೆರೆ ಹಳ್ಳಿ, ಶಾಂತಿನಗರ, ಕ್ವೀನ್ಸ್‌ ರಸ್ತೆ ಸೇರಿದಂತೆ ಒಟ್ಟಾರೆ ನಗರದಲ್ಲಿ 175ಕ್ಕೂ ಅಧಿಕ ಮರ ಹಾಗೂ ಮರದ ರಂಬೆ ಕೊಂಬೆಗಳು ಬಿದ್ದಿವೆ.

ಬಸ್‌, ಕಾರು ಜಖಂ:

ನೃಪತುಂಗ ರಸ್ತೆಯಲ್ಲಿ ಬಿಎಂಟಿಸಿ ಬಸ್‌ ಮೇಲೆ ಮರದ ಬೃಹತ್‌ ಗಾತ್ರದ ರಂಬೆ ಬಿದ್ದು ಜಖಂಗೊಂಡರೆ, ಜೆಪಿ ನಗರದಲ್ಲಿ ನಾಲ್ಕು ಕಾರಿನ ಮೇಲೆ ಮರ ಬಿದ್ದಿದೆ. ಕಾರಿನಲ್ಲಿ ಇರುವವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಕಾರ್ಪೋರೇಷನ್‌ ಬಳಿಯ ರಸ್ತೆಯಲ್ಲಿ ಕಾರು ಮತ್ತು ಆಟೋದ ಮೇಲೆ ಮರದ ಕೊಂಬೆ ಬಿದ್ದು, ಕಾರು ಜಖಂಗೊಂಡಿದೆ. ಆಟೋದ ಟಾಪ್‌ ಹಾಳಾಗಿದೆ. ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಯಾವುದೇ ತೊಂದರೆಗಳಾಗಿಲ್ಲ. ನಗರದ ವಿವಿಧ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಬೈಕ್‌ಗಳ ಮೇಲೆಯೂ ಮರದ ಕೊಂಬೆ ಬಿದ್ದು ಜಖಂಗೊಂಡ ವರದಿಯಾಗಿದೆ.

ರಸ್ತೆ, ಅಂಡರ್‌ ಪಾಸ್‌ ಜಲಾವೃತ:

ನಗರದ ಓಕಳಿಪುರ ಅಂಡರ್‌ ಪಾಸ್‌ ಮತ್ತು ಶಿವಾನಂದ ರೈಲ್ವೆ ಅಂಡರ್‌ ಪಾಸ್‌ಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಸುಮಾರು ಮೂರು ಅಡಿಯಷ್ಟುನೀರು ನಿಂತ ಪರಿಣಾಮ ಶಿವಾನಂದ ರೈಲ್ವೆ ಅಂಡರ್‌ ಪಾಸ್‌ನಲ್ಲಿ ವಾಹನಗಳು ಸಿಲುಕಿಕೊಂಡಿದ್ದವು. ಇದಲ್ಲದೇ ರೇಸ್‌ ಕೋರ್ಸ್‌ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕೆ.ಜಿ.ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆ, ಅಂಡರ್‌ ಪಾಸ್‌, ಫ್ಲೈಓವರ್‌, ಜಂಕ್ಷನ್‌ಗಳಲ್ಲಿ ಮಳೆ ನಿಂತು ಕೊಂಡು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸಾರ್ವಜನಿಕರು ಸಂಚಾರ ದಟ್ಟಣೆ ಎದುರಿಸಬೇಕಾಯಿತು.

ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ, ಹವಾಮಾನ ಇಲಾಖೆ ಸೂಚನೆ!

ತಂಪೆರೆದ ಮಳೆ:

ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಿದ್ದರಿಂದ ಮಧ್ಯಾಹ್ನ ವೇಳೆಯಲ್ಲಿ ಜನರು ಮನೆಯಿಂದ ಹೊರ ಬರುವುದಕ್ಕೆ ಆಗದ ವಾತಾವರಣ ನಿರ್ಮಾಣವಾಗಿತ್ತು. ಶನಿವಾರ ಸಂಜೆ ನಗರದ ವಿವಿಧ ಭಾಗದಲ್ಲಿ ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ತಂಪೆರೆದಿದೆ.

ಉತ್ತರಹಳ್ಳಿಯಲ್ಲಿ 3.2 ಸೆಂಮೀ ಮಳೆ

ಶನಿವಾರ ಉತ್ತರಹಳ್ಳಿಯಲ್ಲಿ ಅತಿ ಹೆಚ್ಚು 3.2 ಸೆಂ.ಮೀ ಮಳೆಯಾಗಿದೆ. ಉಳಿದಂತೆ ವಿಶ್ವೇಶ್ವರಪುರದಲ್ಲಿ 3.1, ವಿದ್ಯಾಪೀಠ 3.0, ಪುಲಕೇಶಿನಗರ 2.0, ಚಾಮರಾಜಪೇಟೆ 1.7, ಆರ್‌ಆರ್‌ನಗರ, ಸಂಪಗಿರಾಮನಗರ ಹಾಗೂ ಕುಶಾಲನಗರದಲ್ಲಿ ತಲಾ 1.5, ಕುಮಾರಸ್ವಾಮಿ ಲೇಔಟ್‌ 1.3, ಹಂಪಿನಗರ 1.1 ಹಾಗೂ ಕಾಟನ್‌ಪೇಟೆಯಲ್ಲಿ 1 ಸೆಂ.ಮೀ ಮಳೆಯಾದ ವರದಿಯಾಗಿದೆ.